ಚೆನ್ನೈ(ಜ.05): ಚೆನ್ನೈನ 2 ಪಂಚತಾರಾ ಹೋಟೆಲ್‌ಗಳು ಸೇರಿ ಹಲವು ಹೋಟೆಲ್‌ಗಳು ಕೊರೋನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿವೆ. ಈ ಸ್ಟಾರ್‌ ಹೋಟೆಲ್‌ಗಳಲ್ಲಿ 125 ಸಿಬ್ಬಂದಿಗೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ.

ಲೀಲಾ ಪ್ಯಾಲೇಸ್‌ನಲ್ಲಿ 20 ಹಾಗೂ ಐಟಿಸಿ ಗ್ರ್ಯಾಂಡ್‌ ಚೋಳದಲ್ಲಿ 85 ಪ್ರಕರಣಗಳು ವರದಿಯಾಗಿವೆ. ಇದರ ಜತೆಗೆ ಇನ್ನೂ ಕೆಲವು ತಾರಾ ಹೋಟೆಲ್‌ಗಳಲ್ಲಿ ಕೆಲವು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ 125 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಕಾರಣಕ್ಕೆ ಚೆನ್ನೈ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ನಗರದ ಎಲ್ಲ ಹೋಟೆಲ್‌ ಸಿಬ್ಬಂದಿಗಳ ಕೊರೋನಾ ಪರೀಕ್ಷೆ ಆರಂಭಿಸಿದೆ. ಎಲ್ಲೆಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಜನರನ್ನು ಸೇರಿಸಿ ಸಭೆಗಳನ್ನು ನಡೆಸಲಾಗಿತ್ತೋ ಅಂಥ ಹೋಟೆಲ್‌ಗಳ ಮೇಲೆ ಗಮನ ಕೇಂದ್ರೀಕರಿಸಿದೆ.