Asianet Suvarna News Asianet Suvarna News

ದುಬಾರಿ ಇವಿಗೆ ಶೇ.5, ಪೆಟ್ರೋಲ್‌ ಕಾರಿಗೆ ಶೇ.50 ಜಿಎಸ್‌ಟಿ, ಕೇಂದ್ರ ಟೀಕಿಸಿ ಪೇಚಿಗೆ ಸಿಲುಕಿತಾ ಕಾಂಗ್ರೆಸ್!

ಕೋಟಿ ಕೋಟಿ ಬೆಲೆಯ ಎಲೆಕ್ಟ್ರಿಕ್ ಕಾರಿಗೆ ಕೇವಲ ಶೇಕಡಾ 5 ರಷ್ಟು ಜಿಎಸ್‌ಟಿ, ಸಾಮಾನ್ಯ ಪೆಟ್ರೋಲ್ ಕಾರಿಗೆ ಶೇ.50 ರಷ್ಟು ಜಿಎಸ್‌ಟಿ. ಇದು ನಿರ್ಮಲಾ ಸೀತಾರಾಮನ್ ಅವರ ತೆರಿಗೆ ಹಾಗೂ ನಿತಿನ್ ಗಡ್ಕರಿಯ ಇವಿ ನಿಯಮ ಎಂದು ಕಾಂಗ್ರೆಸ್ ತಿವಿದಿದೆ. ಆದರೆ ಜಿಎಸ್‌ಟಿ ನಿಯಮವೇ ತಿಳಿಯದೆ ಬಾಲಕ್ ಬುದ್ದಿ ಪಾರ್ಟಿ ಟ್ವೀಟ್ ಮಾಡಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
 

Luxury ev just 5 percent gst regular petro car up to 50 percent congress dig bjp over tax ckm
Author
First Published Sep 16, 2024, 7:05 PM IST | Last Updated Sep 16, 2024, 7:05 PM IST

ತಿರುವನಂತಪುರಂ(ಸೆ.16) ಜಿಎಸ್‌ಟಿ ವಿಚಾರದಲ್ಲಿ ಹಲವು ಬಾರಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಜಿಎಸ್‌ಟಿ ಹಾಗೂ ತೆರಿಗೆ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ದ ಹಲವು ಹೋರಾಟ, ಪ್ರತಿಭಟನೆಗಳನ್ನೇ ನಡೆಸಿದೆ. ಇದೀಗ ಕಾಂಗ್ರೆಸ್ ವಾಹನದ ಮೇಲಿನ ಜಿಎಸ್‌ಟಿ ವಿಚಾರ ಮುಂದಿಟ್ಟು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೋಟಿ ಕೋಟಿ ಬೆಲೆಯ ದುಬಾರಿ ಎಲೆಕ್ಟ್ರಿಕ್ ಕಾರಿಗೆ ಕೇಂದ್ರ ಸರ್ಕಾರ ಕೇವಲ 5 ಶೇಕಡಾ ಜಿಎಸ್‌ಟಿ  ವಿಧಿಸುತ್ತಿದೆ. ಆದರೆ ಸಾಮಾನ್ಯ ಪೆಟ್ರೋಲ್ ಕಾರಿಗೆ ಗರಿಷ್ಠ ಶೇಕಡಾ 50 ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಇದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವ ಬಿಜೆಪಿ ಸರ್ಕಾರದ ಪಾಲಿಸಿ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. ಆದರೆ ಈ ಟ್ವೀಟ್‌ಗೆ ಬಿಜೆಪಿ ಐಟಿ ಸೆಲ್ ತಿರುಗೇಟು ನೀಡಿದೆ. ಎಲೆಕ್ಟ್ರಿಕ್ ವಾಹನ ಕುರಿತು ಜಿಎಸ್‌ಟಿ ಪಾಲಿಸಿ ತಿಳಿಯದೇ ಬಾಲಕ್ ಬುದ್ದಿ ಪಾರ್ಟಿ ಟ್ವೀಟ್ ಮಾಡಿದೆ ಎಂದು ವಿವರಣೆಯನ್ನೂ ನೀಡಿದೆ.

ನಿರ್ಮಾಲಾ ಸೀತಾರಾಮನ್ ತೆರಿಗೆ ನಿಯಮ ಹಾಗೂ ನಿತಿನ್ ಗಡ್ಕರಿ ಎಲೆಕ್ಟ್ರಿಕ್ ವಾಹನ ನಿಯಮ ಎರಡೂ ಕೂಡ ಶ್ರೀಮಂತರ ಪರವಾಗಿದೆ. ಇದು ಬಡವರ, ಜನಸಾಮಾನ್ಯರ ಸರ್ಕಾರವಲ್ಲ ಅನ್ನೋದನ್ನು ಹೇಳಲು ವಾಹನ ಮೇಲಿನ ಜಿಎಸ್‌ಟಿ ತೆರಿಗೆ ಕುರಿತು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. ಟ್ವೀಟ್ ಆರಂಭದಲ್ಲೇ ಇದು ನಂಬಲು ಸಾಧ್ಯವೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಗಾಂಧಿ ಹೆಸರು ಬಳಸಿಕೊಳ್ಳಲು ರಾಹುಲ್‌ಗೆ ಯಾವುದೇ ಹಕ್ಕಿಲ್ಲ, ಭಾರಿ ವಿವಾದ ಸೃಷ್ಟಿಸಿದ ನಾಯಕನ ಹೇಳಿಕೆ!

ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, ದುಬಾರಿ ಎಲೆಕ್ಟ್ರಿಕ್ ಕಾರು, ಉದಾಹರಣೆಗೆ BMW i7 M70 ಕಾರಿನ ಬೆಲೆ 2.38 ಕೋಟಿ ರೂಪಾಯಿ . ಇದಕ್ಕೆ ಕೇವಲ 5 ಶೇಕಡಾ ಜಿಎಸ್‌ಟಿ ಅಂದರೆ 11.9 ಲಕ್ಷ ರೂಪಾಯಿ ಜಿಎಸ್‌ಟಿ ತೆರಿಗೆ ಅನ್ವಯವಾಗುತ್ತದೆ. ಆದರೆ ಸಾಮಾನ್ಯ ಪೆಟ್ರೋಲ್ ಕಾರಿಗೆ ಜಿಎಸ್‌ಟಿ ಹಾಗೂ ಸೆಸ್ ಒಟ್ಟುಗೂಡಿಸಿದರೆ ಶೇಕಡಾ 29 ರಿಂದ 50 ರಷ್ಟು ತೆರಿಗೆ ವಿಧಿಸಲಾಗುತ್ತದೆ.  ಉದಾಹರಣೆಗೆ ಇನ್ನೋವಾ ಹೈಕ್ರಾಸ್ ಟಾಪ್ ಕಾರಿನ ನಿಜವಾದ ಬೆಲೆ 20.65 ಲಕ್ಷ ರೂಪಾಯಿ. ಆದರೆ ಜಿಎಸ್‌ಟಿ ತೆರಿಗೆ ಬಳಿಕ ಈ ಕಾರಿನ ಬೆಲೆ 39.55 ಲಕ್ಷ ರೂಪಾಯಿ. ಇದು ಸರಿಸುಮಾರು ಡಬಲ್ . ವಿಶ್ವದ ಯಾವುದೇ ದೇಶದಲ್ಲಿಈ ರೀತಿಯ ತೆರಿಗೆ ಪದ್ಧತಿ ಇಲ್ಲ.  i7 ಇವಿ ಕಾರಿನ ಬೆಲೆಯಲ್ಲಿ 6 ಬಸ್‌ಗಳು ರಸ್ತೆಗೆ ಇಳಿಯಲಿದೆ ಎಂದು  ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ.

 

 

ಇವಿ ಖರೀದಿಸಿದ ಮೋಡಿಫಿಕೇಶನ್ ಸೇರಿದಂತೆ ಎನೇ ಮಾಡಿದರೂ ಶೇಕಡಾ 5 ರಷ್ಟು ಮಾತ್ರ ಜಿಎಸ್‌ಟಿ. ಇದರ ಜೊತೆಗೆ ಶ್ರೀಮಂತರ ಖರೀದಿಸುವ ಎಲೆಕ್ಟ್ರಿಕ್ ಕಾರಿನ ಮೇಲೆ ಸಬ್ಸಿಡಿ ಕೂಡ ನೀಡಲಾಗುತ್ತಿದೆ.  2.38 ಕೋಟಿ ರೂಪಾಯಿ ಬೆಲೆಯ i7 M70 ಕಾರಿಗೆ ಕೇಂದ್ರ ಸರ್ಕಾರ 1.52 ಕೋಟಿ ರೂಪಾಯಿ ಸಬ್ಸಿಡಿ ನೀಡುತ್ತಿದೆ. ಇದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಹಾಗೂ ಸಾಮಾನ್ಯರಿಂದ ಅತೀ ಹೆಚ್ಚು ತೆರಿಗೆ ಕಿತ್ತುಕೊಳ್ಳುವ ಯೋಜನೆ ಎಂದು ಕೇರಳ ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಟ್ವೀಟ್‌ಗೆ ಮುಂಬೈ ಬಿಜೆಪಿ ಐಟಿ ಸೆಲ್ ತಿರುಗೇಟು ನೀಡಿದೆ. ಬಾಲಕ್ ಬುದ್ದಿ ಪಾರ್ಟಿ, ಭಾರತದಲ್ಲಿ ದುಬಾರಿ ಬೆಲೆ ಇವಿ ಕಾರ್ ಆಗಿರಲಿ, ಅಥವಾ ಅತ್ಯಂತ ಕಡಿಮೆ ಬೆಲೆಯ ಇವಿ ಸ್ಕೂಟರ್ ಆಗಿರಲಿ ಎಲ್ಲದ್ದಕ್ಕೂ ಶೇಕಡಾ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದು ಪ್ರೈವೇಟ್ ಅಥವಾ ಕಮರ್ಷಿಯಲ್ ಎರಡೂ ಎಲೆಕ್ಟ್ರಿಕ್ ವಾಹನಗಳಿಗೆ ಅನ್ವಯಿಸಲಿದೆ. ಮೊದಲು ಎಲೆಕ್ಟ್ರಿಕ್ ವಾಹನಗಳ ಜಿಎಸ್‌ಟಿ ಶೇಕಡಾ 18 ರಷ್ಟಿತ್ತು. 2019ರ ಜುಲೈ ತಿಂಗಳಲ್ಲಿ ನಡೆದ 36ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ಇಳಿಸಲಾಗಿದೆ. ಇದೇ ಶೇಕಡಾ 5ರ ನೀತಿ ಇವಿ ಚಾರ್ಜರ್ ಹಾಗೂ ಚಾರ್ಜಿಂಗ್ ಸ್ಟೇಶನ್‌ಗೂ ಅನ್ವಯವಾಗಲಿದೆ ಎಂದು ಬಿಜೆಪಿ ಐಟಿ ಸೆಲ್ ತಿರುಗೇಟು ನೀಡಿದೆ.

 

 

ರಾಹುಲ್‌ ಗಾಂಧಿಯನ್ನು ‘ಪಪ್ಪು’ ಎಂದ ನೋಯ್ಡಾ ಜಿಲ್ಲಾಧಿಕಾರಿ, ಕಾಂಗ್ರೆಸ್‌ ನಾಯಕರು ಗರಂ!
 

Latest Videos
Follow Us:
Download App:
  • android
  • ios