ಲ್ಯಾಂಡಿಂಗ್ ವೇಳೆ ವಿಮಾನ ಚಕ್ರಕ್ಕೆ ತಗುಲಿದ ಬೆಂಕಿ, ಕೂದಲೆಳೆ ಅಂತರದಲ್ಲಿ ಉಳಿದ 490 ಜನರ ಪ್ರಾಣ
ಲ್ಯಾಂಡಿಂಗ್ ವೇಳೆ ವಿಮಾನದ ಒಂದು ಚಕ್ರದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಚಕ್ರಕ್ಕೆ ಬೆಂಕಿ ತಗುಲಿದರೂ ಪೈಲಟ್‌ಗಳು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ: ಮೂನಿಕ್‌ನಿಂದ ದೆಹಲಿಗೆ ಆಗಮಿಸಿದ್ದ ಲುಫ್ತಾನ್ಸ್ ಏರ್‌ಲೈನ್ಸ್ A380 ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಭಾರೀ ಅವಘಡವೊಂದು ತಪ್ಪಿದ್ದು, 490 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲ್ಯಾಂಡಿಂಗ್ ವೇಳೆ ವಿಮಾನದ ಒಂದು ಚಕ್ರದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಚಕ್ರಕ್ಕೆ ಬೆಂಕಿ ತಗುಲಿದರೂ ಪೈಲಟ್‌ಗಳು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕದಳ ವಾಹನ, ಅಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಲಾಗಿತ್ತು. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೆಹಲಿ ವಿಮಾನನಿಲ್ದಾಣ ಸಿಬ್ಬಂದಿ ಪ್ರಕಾರ, ಲುಫ್ತಾನ್ಸ್ ಏರ್‌ಲೈನ್ಸ್ ವಿಮಾನ ಸೋಮವಾರ ಭಾರತಕ್ಕೆ ಬಂದಿತ್ತು. 490 ಪ್ರಯಾಣಿಕರು ಮೂನಿಕ್‌ನಿಂದ ದಹೆಲಿಗೆ ಪ್ರಯಾಣ ಬೆಳೆಸಿದ್ದರು. ಸೋಮವಾರ ರಾತ್ರಿ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ದಿಢೀರ್ ಅಂತ ಚಕ್ರಕ್ಕೆ ಬೆಂಕಿ ತಗುಲಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಡೀ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಪೈಲಟ್‌ಗಳು ವಿಮಾನದ ಮೇಲಿನ ನಿಯಂತ್ರಣ ಕಳೆದುಕೊಳ್ಳದೇ, ಯಾವುದೇ ಪ್ರಯಾಣಿಕರಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.
ಬೆನ್ನು ಬಿದ್ದ ನಾಗರಾಜ- 45 ದಿನದಲ್ಲಿ 5 ಬಾರಿ ಕಚ್ಚಿದ ನಾಗಪ್ಪ, ವೈದ್ಯರು ಹೈರಾಣು
ವಿಮಾನ ಮತ್ತೆ ಮೂನಿಕ್‌ಗೆ ತೆರಳಬೇಕಿತ್ತು. ಈ ಘಟನೆ ಬಳಿಕ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ವಿಮಾನವನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಪೈಲಟ್‌ಗಳಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಬೋರ್ಡಿಂಗ್ ಪಾಸ್ ವಿತರಿಸಿದ ಬಳಿಕ ವಿಮಾನವನ್ನು ಕ್ಯಾನ್ಸಲ್ ಮಾಡಲಾಯ್ತು ಎಂದು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಘಟನೆಯ ಕುರಿತು ಲುಫ್ತಾನ್ಸ್ ಏರ್‌ಲೈನ್ಸ್ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಪೈಲಟ್‌ಗಳು ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನದ ಬಿಡಿಭಾಗಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಉಂಟಾದ ತಾಂತ್ರಿಕದೋಷಗಳ ಬಗ್ಗೆಯೂ ತಂತ್ರಜ್ಞರು ಪರಿಶೀಲನೆ ನಡೆಸಲಾಗುತ್ತಿದೆ. ಪ್ರಯಾಣಿಕರ ಸುರಕ್ಷತೆ ಲುಫ್ತಾನ್ಸ್ ಏರ್‌ಲೈನ್ಸ್‌ಗೆ ಮೊದಲ ಆದ್ಯತೆ. ಜುಲೈ 3ರಿಂದ ವಿಮಾನ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಹೇಳಿದೆ.
ಉತ್ತರ ಪ್ರದೇಶದ ಸತ್ಸಂಗದಲ್ಲಿ ಭೀಕರ ದುರಂತ: ಕಾಲ್ತುಳಿತಕ್ಕೆ 120 ಬಲಿ..!