ಏನಿದು ಅದೃಷ್ಟ: ಮೊದಲು 6 ಕೋಟಿ ರೂ. ಲಾಟರಿ, ಬಳಿಕ ಹೊಲದಲ್ಲಿ ಸಿಕ್ತು ನಿಧಿ!
ಲಕ್ ಬೈ ಚಾನ್ಸ್| ಲಾಟರಿಯಲ್ಲಿ 9 ಕೋಟಿ ರೂ. ಗೆದ್ದ, ಹೊಲ ಉಳುತ್ತಿದ್ದಾಗ ಸಿಕ್ತು ನಿಧಿ| 100 ವರ್ಷ ಹಳೆಯ ಮಡಿಕೆಯಲ್ಲಿತ್ತು ನಾಣ್ಯಗಳ ರಾಶಿ
ತಿರುವನಂತಪುರಂ[ಡಿ.09]: ಅದೃಷ್ಟ ಎಂಬ ಕಾನ್ಸೆಪ್ಟ್ ನಂಬ್ತೀರಾ? ಇಲ್ಲ ಎನ್ನುವವರು ಕೇರಳದ 66 ವರ್ಷದ ಬಿ. ರತ್ನಾಕರ ಪಿಳ್ಳೈ ಜೀವನದಲ್ಲಿ ನಡೆದ ಈ ಘಟನೆ ತಿಳಿದುಕೊಳ್ಳಲೇಬೇಕು. ಇದೇ ಅದೃಷ್ಟದಿಂದಾಗಿ ಇವರು ದಿನ ಬೆಳಗಾಗುವುದರಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಇದು ಹೇಗೆ? ಇಲ್ಲಿದೆ ವಿವರ
ಹೌದು ರತ್ನಾಕರ ಕಳೆದ ವರ್ಷ ಕ್ರಿಸ್ ಮಸ್ ಲಾಟರಿಯಲ್ಲಿ ಬರೋಬ್ಬರಿ 6 ಕೋಟಿರೂ ಗೆದ್ದಿದ್ದರು. ಈ ಹಣದಿಂದ ಅವರು ಕೇರಳದ ತಿರುವನಂತಪುರಂನಿಂದ ಕೊಂಚ ದೂರದಲ್ಲಿರುವ ಹೊಲವೊಂದನ್ನು ಖರೀದಿಸಿದ್ದರು. ಮಂಗಳವಾರದಂದು ಅವರು ಬಿತ್ತನೆಗೆಂದು ಈ ಹೊಲ ಉಳುತ್ತಿದ್ದಾಗ ಮತ್ತೆ ಅದೃಷ್ಟ ಅವರ ಕೈ ಹಿಡಿದಿದೆ. ಮತ್ತೊಂದು ಗಿಫ್ಟ್ ಅವರ ಕೈ ಸೇರಿದೆ.
ಸುಳ್ಯದ ಯುವಕನಿಗೆ ಹೊಡೆಯಿತು 23 ಕೋಟಿ ರು. ಬಂಪರ್ ಲಾಟರಿ
ಹೊಲದಲ್ಲಿ ಸಿಕ್ತು 100 ವರ್ಷ ಹಳೆಯ ಮಡಿಕೆ
ಉಳುತ್ತಿದ್ದ ಪಿಳ್ಳೈಯವರಿಗೆ ನಾಣ್ಯಗಳಿದ್ದ ಮಡಿಕೆಯೊಂದು ಸಿಕ್ಕಿದೆ. 2,595 ನಾಣ್ಯಗಳಿದ್ದ ಈ ಮಡಿಕೆ ಬರೋಬ್ಬರಿ 100 ವರ್ಷ ಹಳೆಯದ್ದೆಂದು ವರದಿಗಳು ತಿಳಿಸಿವೆ. 20 ಕೆ. ಜಿ 400 ಗ್ರಾಂ ತೂಕವುಳ್ಳ ಈ ತಾಮ್ರದ ನಾಣ್ಯಗಳು ಟ್ರಾವೆಂಕೋರ್ ಸಾಮ್ರಾಜ್ಯದೆನ್ನಲಾಗಿದೆ.
ದುಬೈನಲ್ಲಿ ಕೆಲಸ ಸಿಗದೆ ಮರಳಿದವನಿಗೆ ಹೊಡೀತು 27 ಕೋಟಿ ರು.ಲಾಟರಿ!
ನಾಣ್ಯದ ಮೌಲ್ಯವಿನ್ನೂ ತಿಳಿದು ಬಂದಿಲ್ಲ
ಇನ್ನು ಪತ್ತೆಯಾದ ನಿಧಿಯಲ್ಲಿರುವ ನಾಣ್ಯದ ಮೌಲ್ಯ ಎಷ್ಟು ಎಂಬುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಇವುಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದ್ದು, ಪರೀಕ್ಷೆ ಮಾಡಿ ಮೌಲ್ಯ ತಿಳಿಸಲಿದ್ದಾರೆ.
ಈ ನಾಣ್ಯಗಳು ಟ್ರಾವೆಂಕೋರ್ ನ ಇಬ್ಬರು ರಾಜರ ಆಡಳಿತಾವಧಿಯಲ್ಲಿ ಚಾಲ್ತಿಯಲ್ಲಿದ್ದವೆಂಬ ಮಾತುಗಳೂ ಕೇಳಿ ಬಂದಿವೆ.