ನವದೆಹಲಿ (ಫೆ.21): ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ಲೆ.ಜ ಬಗ್ಗವಳ್ಳಿ ಸೋಮಶೇಖರ ರಾಜು (ಬಿ.ಎಸ್‌. ರಾಜು) ಅವರನ್ನು ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಎಂದು ನೇಮಿಸಲಾಗಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಅಧಿಕಾರ ಸ್ವೀಕಾರ ಸಾಧ್ಯತೆ ಇದೆ.

ಡಿಜಿಎಂಒ ಹುದ್ದೆ ಮಹತ್ವದ್ದಾಗಿದ್ದು ದೇಶದ ಗಡಿಯಲ್ಲಿನ ಸೇನಾ ಕಾರಾರ‍ಯಚರಣೆಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.

ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA! ..

ರಾಜು ಈಗ ಕಾಶ್ಮೀರದಲ್ಲಿ ಉಗ್ರ ಕೃತ್ಯಗಳನ್ನು ನಿಗ್ರಹಿಸುವ ‘ಚಿನಾರ್‌ ಕೋರ್‌ ಪಡೆ’ ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಚಿನಾರ್‌ ಕೋರ್‌ನಲ್ಲಿ ರಾಜು ಅವರು, ‘ಹತ್ಯೆ ಬೇಡ, ಶರಣಾಗತಿಗೆ ಆದ್ಯತೆ’ ನೀತಿ ಅನುಸರಿಸಿದ್ದು, ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಇಳಿದಿವೆ. ಶರಣಾಗತಿ ಹೆಚ್ಚಿವೆ. ಇತ್ತೀಚೆಗೆ ರಾಜು ಅವರಿಗೆ ಉತ್ತಮ ಯುದ್ಧ ಸೇವಾ ಪದಕ ದೊರೆತಿತ್ತು.

ಈಗ ರಾಜು ಅವರ ಸ್ಥಾನಕ್ಕೆ ಲೆ.ಜ ಡಿ.ಪಿ. ಪಾಂಡೆ ಅವರನ್ನು ನೇಮಿಸಲಾಗಿದೆ.