Asianet Suvarna News Asianet Suvarna News

ಚಲಿಸುತ್ತಿರುವ ಬೈಕ್‌ನಲ್ಲಿ ಪ್ರೇಮಿಗಳ ಕಿಸ್ಸಿಂಗ್: ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲೇ ತಮ್ಮ ಪ್ರೇಮವನ್ನು ತೋರಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಜೋಡಿಯೊಂದು ರಸ್ತೆ ಮೇಲೆ ಬೈಕ್‌ನಲ್ಲಿ ಸಾಗುತ್ತಿರುವಾಗಲೇ ಪರಸ್ಪರ ಕಿಸ್ ಮಾಡಿದ್ದು ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

Lovers kissing on moving bike: Video goes viral on social media akb
Author
First Published May 24, 2024, 2:15 PM IST

ರಾಜಸ್ಥಾನ: ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲೇ ತಮ್ಮ ಪ್ರೇಮವನ್ನು ತೋರಿಸಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಜೋಡಿಯೊಂದು ರಸ್ತೆ ಮೇಲೆ ಬೈಕ್‌ನಲ್ಲಿ ಸಾಗುತ್ತಿರುವಾಗಲೇ ಪರಸ್ಪರ ಕಿಸ್ ಮಾಡಿದ್ದು ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಆದ ನಂತರ ಪೊಲೀಸರು ಜೋಡಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಕ್ಷಮೆ ಕೇಳಿಸಿ ಬಿಟ್ಟು ಕಳುಹಿಸಿದ್ದಾರೆ. ಆದರೆ ಜೋಡಿಯ ಕಿಸ್ಸಿಂಗ್ ವೀಡಿಯೋ ಹಾಗೂ ಕ್ಷಮೆ ಕೇಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ಸದಾ ಎನ್‌ಇಟಿ ವಿದ್ಯಾರ್ಥಿಗಳ ಸಾವಿನ ಕಾರಣಕ್ಕೆ ಸುದ್ದಿಯಲ್ಲಿರುವ ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು,  ವೈರಲ್ ಆದ ವೀಡಿಯೋದಲ್ಲಿ  ಪ್ರೇಮಿಗಳಿಬ್ಬರು ಚಲಿಸುವ ಬೈಕ್‌ನಲ್ಲೇ ಸರಸವಾಡಿದ್ದಾರೆ. ಈ  ಬೈಕ್ ಹಿಂದೆ ಚಲಿಸುತ್ತಿದ್ದ ಇತರ ವಾಹನ ಸವಾರರು ಘಟನೆಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಯುವತಿಯನ್ನು ಬೈಕ್‌ ಮುಂಭಾಗದಲ್ಲಿ ತನ್ನತ್ತ ಮುಖ ಮಾಡಿ ಯುವಕ ಕೂರಿಸಿದ್ದು, ಬೈಕ್ ಚಾಲನೆಯಲ್ಲಿರುವಾಗಲೇ ಇಬ್ಬರು ಕಿಸ್ಸಿಂಗ್‌ನಲ್ಲಿ ಮಗ್ನರಾಗಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಸಿಬ್ಬಂದಿಯ ಖುಲ್ಲಂ ಖುಲ್ಲಾ ಕಿಸ್ಸಿಂಗ್; ದಾಖಲಾಯ್ತು ಕೇಸ್

ವೀಡಿಯೋ ವೈರಲ್ ಆಗುತ್ತಿದ್ದಂತೆ ಕೋಟಾ ಪೊಲೀಸರು ಈ ರಸ್ತೆಯಲ್ಲಿ ಪ್ರೇಮ  ಸಾಹಸ ಮಾಡಿದ ಪ್ರೇಮಿಗಳನ್ನು ಬಂಧಿಸಿದ್ದು,  ಬಳಿಕ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಅವರು ಕ್ಷಮೆ ಕೇಳುವ ವೀಡಿಯೋ ಕೂಡ ವೈರಲ್ ಆಗಿದೆ. 'ನಾವು ರಸ್ತೆಯಲ್ಲಿ ಚಲಿಸುವ ಬೈಕ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದು, ನಮ್ಮ ಜೀವಕ್ಕೆ ಅಪಾಯ ತರುವುದರ ಜೊತೆಗೆ ರಸ್ತೆಯಲ್ಲಿ ಸಾಗುವ ಇತರರ ಜೀವಕ್ಕೂ ಅಪಾಯಕ್ಕೀಡು ಮಾಡಿದ್ದೇವೆ. ಇಂತಹ ಘಟನೆಯನ್ನು ನಾವು ಇನ್ನು ಮುಂದೆ ಮಾಡುವುದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ಕ್ಷಮೆ ಕೇಳಿದ್ದಾರೆ.

ಓಯೋ ರೂಮ್ ಬಂದ್ ಮಾಡಿಸಿದ್ದಕ್ಕೆ ಸಿಟ್ಟು: ಬಿಜೆಪಿ ಶಾಸಕನ ಕಚೇರಿ ಮುಂದೆಯೇ ಜೋಡಿಯ ಕಿಸ್ಸಿಂಗ್

 

Latest Videos
Follow Us:
Download App:
  • android
  • ios