ನಕಲಿ ಪಾಸ್‌ಪೋರ್ಟ್‌ ಪತ್ತೆಗೆ ‘ಕಮಲ’ ಮುದ್ರಣ: ವಿವಾದಕ್ಕೆ ಕೇಂದ್ರ ಸ್ಪಷ್ಟನೆ!| ರಾಷ್ಟ್ರೀಯ ಹೂವು ಆಗಿರುವ ಕಮಲ ಚಿಹ್ನೆ ಮುದ್ರಣ

ನವದೆಹಲಿ[ಡಿ.13]: ಹೊಸ ಪಾಸ್‌ಪೋರ್ಟ್‌ಗಳ ಮೇಲೆ ಕಮಲ(ಬಿಜೆಪಿ ಗುರುತು)ದ ಚಿಹ್ನೆ ಮುದ್ರಣ ಮಾಡಿದ ಬಗ್ಗೆ ಲೋಕಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ಷೇಪವೆತ್ತಿದ ಬೆನ್ನಲ್ಲೇ, ನಕಲಿ ಪಾಸ್‌ಪೋರ್ಟ್‌ಗಳ ಪತ್ತೆಗೆ ಅನುಕೂಲವಾಗುವ ಭದ್ರತಾ ಕ್ರಮಗಳ ಭಾಗವಾಗಿ ಹೊಸ ಪಾಸ್‌ಪೋರ್ಟ್‌ಗಳ ಮೇಲೆ ರಾಷ್ಟ್ರೀಯ ಹೂವು ಆಗಿರುವ ಕಮಲ ಚಿಹ್ನೆ ಮುದ್ರಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಗುರುವಾರ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌, ವಿಶ್ವ ನಾಗರಿಕ ವಿಮಾನಯಾನ ಸಂಸ್ಥೆಯ ಮಾರ್ಗಸೂಚಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೆ, ಆವರ್ತನೆ ಮಾದರಿಯಲ್ಲಿ ಭಾರತದ ರಾಷ್ಟ್ರೀಯತೆಗೆ ಸಂಬಂಧಿಸಿದ ಚಿಹ್ನೆಗಳನ್ನು ಸಹ ಈ ಮಹಾ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದಿದ್ದಾರೆ.