* ವಿಚಾರಣಾ ನಿರ್ದೇಶಕರ ನೇಮಕಾತಿಯಾಗದೇ ವಿಳಂಬ* 3 ವರ್ಷದಲ್ಲೇ ಒಬ್ಬ ಜನಪ್ರತಿನಿಧಿ ತನಿಖೆಗೂ ಲೋಕಪಾಲ ಅನುಮತಿ ಇಲ್ಲ

ನವದೆಹಲಿ(ಮಾ.09): ಭ್ರಷ್ಟಾಚಾರ ನಿಗ್ರಹದಲ್ಲಿ ಬಹುದೊಡ್ಡ ಅಸ್ತ್ರ ಎಂಬೆಲ್ಲಾ ಹಿರಿಮೆಯೊಂದಿಗೆ 3 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ಲೋಕಪಾಲ ಸಂಸ್ಥೆ, ಈ 3 ವರ್ಷಗಳ ಅವಧಿಯಲ್ಲಿ ಒಬ್ಬರೇ ಒಬ್ಬರು ಜನಪ್ರತಿನಿಧಿಗಳ ವಿರುದ್ಧ ತನಿಖೆಗೆ ಅನುಮತಿ ನೀಡುವಲ್ಲಿ ವಿಫಲವಾಗಿದೆ ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ.

‘ಭ್ರಷ್ಟಾಚಾರದ ದೂರುಗಳನ್ನು ಪರಿಶೀಲಿಸಲು ಹಾಗೂ ಆರೋಪಿತ ಸಾರ್ವಜನಿಕ ಸೇವಕರು ವಿಚಾರಣೆ ಪ್ರಕ್ರಿಯೆಗಾಗಿ ವಿಚಾರಣೆ ಹಾಗೂ ಪ್ರಾಸಿಕ್ಯೂಶನ್‌ ನಿರ್ದೇಶಕರ ನೇಮಕಾತಿಯನ್ನು ಇನ್ನೂ ಮಾಡಬೇಕಾಗಿದೆ. ನಿರ್ದೇಶಕರ ನೇಮಕಾತಿಗಾಗಿ ತಜ್ಞರ ಸಮಿತಿಯನ್ನು ರಚಿಸಲು ಸರ್ಕಾರದ ಬಳಿ ಕೋರಲಾಗಿದೆ. ಹೀಗಾಗಿ ಆರೋಪಿಗಳ ವಿಚಾರಣೆ ಪ್ರಕ್ರಿಯೆ ನಡೆಸಲು ತಡವಾಗುತ್ತಿದೆ ’ಎಂದು ಆರ್‌ಟಿಐ ಅರ್ಜಿದಾರನಿಗೆ ನೀಡಿದ ಉತ್ತರದಲ್ಲಿ ಲೋಕಪಾಲ್‌ ಸ್ಪಷ್ಟಪಡಿಸಿದೆ.

ಲೋಕಪಾಲ… ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಸಂಬಂಧಿ ದೂರುಗಳ ವಿಚಾರಣೆ ಮತ್ತು ತನಿಖೆಗೆ ಸ್ಥಾಪನೆಯಾದ ಅತ್ಯುನ್ನತ ಸಂಸ್ಥೆಯಾಗಿದೆ. ಮಾಚ್‌ರ್‍ 27, 2019 ರಂದು ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯೊಂದಿಗೆ ಲೋಕಪಾಲ್‌ ಕಾರ್ಯನಿರ್ವಹಿಸಲು ಪ್ರಾರಂಭಿಸಿ 3 ವರ್ಷಗಳು ಸಂದಿವೆ. 2019-20 ಸಾಲಿನಲ್ಲಿ 1,427 ಹಾಗೂ 2021-22 ಜನವರಿ ವರೆಗೆ 4,244 ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಆದರೆ ನಿರ್ದೇಶಕರ ನೇಮಕಾತಿ ವಿಳಂಬದಿಂದಾಗಿ ಇನ್ನು ಯಾವುದೇ ವಿಚಾರಣೆಗಳು ನಡೆದಿಲ್ಲ.

ಸರ್ಕಾರ, ಸಚಿವರ ವಿರುದ್ಧ ಲೋಕಪಾಲಗೆ 1427 ದೂರು!

ದೇಶದ ಅಭಿವೃದ್ಧಿಗೆ ಪ್ರಮುಖ ತೊಡಕಾಗಿರುವ ಭ್ರಷ್ಟಾಚಾರ ನಿಗ್ರಹಕ್ಕಾಗಿ ರೂಪಿಸಲಾಗಿರುವ ಲೋಕಪಾಲ ಸಂಸ್ಥೆಗೆ 2019-20ನೇ ಸಾಲಿನಲ್ಲಿ ಒಟ್ಟಾರೆ 1427 ಪ್ರಕರಣಗಳು ದಾಖಲಾಗಿವೆ.

ಈ ಪೈಕಿ ಅತಿಹೆಚ್ಚು 613 ಕೇಸ್‌ಗಳು ರಾಜ್ಯ ಸರ್ಕಾರದ ಅಧಿಕಾರಿಗಳು, 245 ಕೇಂದ್ರ ಸರ್ಕಾರದ ಅಧಿಕಾರಿಗಳು, 200 ಸಾರ್ವಜನಿಕ ವಲಯದ ಸಂಸ್ಥೆಗಳು, ಕೇಂದ್ರದ ಹಂತಲ್ಲಿನ ಶಾಸನಬದ್ಧ ಸಂಸ್ಥೆಗಳು, ನ್ಯಾಯಾಂಗ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ನಾಲ್ವರು ಕೇಂದ್ರ ಸಚಿವರು, ಖಾಸಗಿ ಮತ್ತು ಇತರೆ ಸಂಸ್ಥೆಗಳ ವಿರುದ್ಧ 135 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಲೋಕಪಾಲ್‌ನ ಅಧಿಕೃತ ದಾಖಲಾತಿಯಿಂದ ಗೊತ್ತಾಗಿದೆ.

ದಾಖಲಾದ ಒಟ್ಟಾರೆ ಪ್ರಕರಣಗಳ ಪೈಕಿ 1347 ಪ್ರಕರಣಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದ್ದು, 220 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆ, ಸೂಚನೆ ಮತ್ತು ಅಭಿಪ್ರಾಯ ತಿಳಿಸುವಂತೆ ಕೋರಲಾಗಿದೆ. 32 ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ.

ಸ್ಟಾರ್‌ ಹೋಟೆಲ್‌ನಲ್ಲಿ ಲೋಕಪಾಲ ಕಚೇರಿ: ತಿಂಗಳ ಬಾಡಿಗೆ 50 ಲಕ್ಷ ರು.!

ದೇಶದ ಪರಮೋಚ್ಚ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ‘ಲೋಕಪಾಲ’ ಸ್ಥಾಪನೆಯಾಗಿ ಏಳು ತಿಂಗಳು ಕಳೆದಿದ್ದು, ಕಾಯಂ ಕಚೇರಿ ಇಲ್ಲದಿರುವುದರಿಂದ ರಾಜಧಾನಿಯ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುತೂಹಲಕರ ಸಂಗತಿಯೆಂದರೆ ಇದಕ್ಕಾಗಿ ಸರ್ಕಾರವು ಪ್ರತಿ ತಿಂಗಳು 50 ಲಕ್ಷ ರು. ಬಾಡಿಗೆ ಪಾವತಿಸುತ್ತಿದೆ.

ಈ ವರ್ಷದ ಮಾರ್ಚ್ 22ರಂದು ಲೋಕಪಾಲ ಸ್ಥಾಪನೆಯಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಸಿ.ಘೋಷ್‌ ಅವರು ಲೋಕಪಾಲರಾಗಿ ನೇಮಕಗೊಂಡಿದ್ದಾರೆ. ಹಾಗೆಯೇ ನಾಲ್ವರು ನ್ಯಾಯಾಂಗ ಸದಸ್ಯರು ಹಾಗೂ ನಾಲ್ವರು ನ್ಯಾಯಾಂಗೇತರ ಸದಸ್ಯರೂ ನೇಮಕವಾಗಿದ್ದಾರೆ. ಇವರೆಲ್ಲರೂ ದೆಹಲಿಯ ಸರ್ಕಾರಿ ಸ್ವಾಮ್ಯದ ಅಶೋಕ ಹೋಟೆಲ್‌ನ 12 ಕೊಠಡಿಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮಾ.22ರಿಂದ ಅ.31ರವರೆಗೆ 3.85 ಕೋಟಿ ರು.ಗಳನ್ನು ಬಾಡಿಗೆ ರೂಪದಲ್ಲಿ ಹೋಟೆಲ್‌ಗೆ ಪಾವತಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮನವಿಗೆ ಸರ್ಕಾರ ಈ ಕುರಿತು ಉತ್ತರ ನೀಡಿದೆ.

ಶಾ ಎದುರೇ ಉದ್ಯಮಿ ಖಡಕ್‌ ಮಾತು : ಹೆದರಬೇಡಿ ಎಂದ ವಿಡಿಯೋ ವೈರಲ್‌...

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಲೋಕಪಾಲ ಸ್ಥಾಪನೆಯಾದ ದಿನದಿಂದ ಆರಂಭಿಸಿ ಅಕ್ಟೋಬರ್‌ 31ರವರೆಗೆ ಸರ್ಕಾರಿ ಸೇವಕರ ವಿರುದ್ಧ 1,160 ದೂರುಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಸುಮಾರು 1000 ಅರ್ಜಿಗಳ ವಿಚಾರಣೆಯನ್ನು ಲೋಕಪಾಲ ಪೀಠ ನಡೆಸಿದ್ದು, ಯಾವೊಂದು ಅರ್ಜಿಯ ಕುರಿತೂ ತನಿಖೆಗೆ ಆದೇಶಿಸಿಲ್ಲ. ಏಕೆಂದರೆ ಯಾವುದೇ ದೂರು ಕೂಡ ತನಿಖೆಗೆ ಯೋಗ್ಯವಾಗಿಲ್ಲ ಎಂದು ಆರ್‌ಟಿಐ ಅರ್ಜಿಗೆ ಉತ್ತರ ನೀಡಲಾಗಿದೆ.

ಲೋಕಪಾಲ ಸಂಸ್ಥೆಯು ದೇಶದ ಪ್ರಧಾನಿ, ಸಚಿವರು, ಸಂಸದರು ಹಾಗೂ ಸರ್ಕಾರದ ಎ, ಬಿ, ಸಿ, ಡಿ ದರ್ಜೆಯ ನೌಕರರು ಸೇರಿದಂತೆ ಎಲ್ಲಾ ಸರ್ಕಾರಿ ಸೇವಕರ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ಹೊಂದಿದೆ. ಪ್ರತಿಷ್ಠಿತ ಸಂಸ್ಥೆಗೆ ಇನ್ನೂ ಕಾಯಂ ಕಚೇರಿ ಇಲ್ಲದೆ ಪ್ರತಿ ತಿಂಗಳು ದುಬಾರಿ ಬಾಡಿಗೆ ತೆರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಪಾಲ ನ್ಯಾ.ಪಿ.ಸಿ.ಘೋಷ್‌, ‘ಈಗಾಗಲೇ ಕಾಯಂ ಕಚೇರಿಯನ್ನು ಗುರುತಿಸಿದ್ದೇವೆ. ಅದರಲ್ಲಿ ಸ್ವಲ್ಪ ಬದಲಾವಣೆಯಾಗಬೇಕಿದೆ. ಶೀಘ್ರವೇ ಅಲ್ಲಿಗೆ ಕಚೇರಿ ಸ್ಥಳಾಂತರಿಸುತ್ತೇವೆ’ ಎಂದು ಹೇಳಿದ್ದಾರೆ.