ನವದೆಹಲಿ(ಸೆ.30): ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರ ತಂದೆ ಶ್ರೀಕೃಷ್ಣ ಬಿರ್ಲಾ ಮಂಗಳವಾರದಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರ ಅಂತಿಮ ಕ್ರಿಯೆ ಕಿಶೋರಪುರ ಮುಕ್ತಿಧಾಮದಲ್ಲಿ ಇಂದು ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಹಾಗೂ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಶ್ರೀಕೃಷ್ಣ ಬಿರ್ಲಾರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾರ ತಂದೆ, ಗೌರವಾನ್ವಿತ ಶ್ರೀಕೃಷ್ಣ ಬಿರ್ಲಾರ ನಿಧನದ ಸುದ್ದಿಯಿಂದ ಬಹಳ ನೋವಾಯ್ತು. ಶ್ರೀ ಬಿರ್ಲಾ ಹಾಗೂ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಮುಕುಲ್ ರಾಯ್ ಟ್ವೀಟ್ ಮಾಡಿದ್ದಾರೆ.