ರಾಷ್ಟ್ರ ರಾಜಧಾನಿಯಲ್ಲಿ ಚುನಾವಣಾ ಕಲರವ: 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲೊರ‍್ಯಾರು? ಸೋಲರ‍್ಯಾರು?

ಕೇಜ್ರಿವಾಲ್ ಅವರ ಆಮ್ ಆದ್ಮಿ ಹಾಗು ಕಾಂಗ್ರೆಸ್ ಪಕ್ಷ ಮೈತ್ರಿಯಾಗಿ ಕಣದಲ್ಲಿವೆ. 6ನೇ ಹಂತದಲ್ಲಿ ಮೇ 25 ರಂದು ಮತದಾನ ಮಾಡಲು ಸಜ್ಜಾಗುತ್ತಿರುವ ದೆಹಲಿಗರಲ್ಲಿ ಈ ಬಾರಿ ಹೊಸ ಹೊಸ ಆಲೋಚನೆಗಳನ್ನು ಹುಟ್ಟಿಕೊಂಡಿವೆ. 

Lok Sabha Elections 2024 Who won and who lost the 7 Lok Sabha constituencies in New Delhi gvd

ಡೆಲ್ಲಿ ಮಂಜು

ನವದೆಹಲಿ (ಮೇ.15): ಏಳು ಲೋಕ' (ಲೋಕಸಭಾ ಕ್ಷೇತ್ರಗಳಲ್ಲಿ) ದಲ್ಲಿ ಗೆಲ್ಲೊರ‍್ಯಾರು ? ಸೋಲರ‍್ಯಾರು ? ಬದಲಾವಣೆ ರಾಜಕಾರಣದ ಪ್ರಯೋಗ ಶಾಲೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚುನಾವಣಾ ಕಲರವ ಶುರುವಾಗಿದೆ. ಈ ಕಲರವಕ್ಕೆ ರಂಗು ತುಂಬುವ ಕೆಲಸ ಇದೀಗ ಸಿಎಂ ಅರವಿಂದ ಕೇಜ್ರಿವಾಲ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕೇಸರಿ ಪಕ್ಷ ಏಳು ಲೋಕವೂ ನಮ್ಮದೇ ಅಂಥ ಹೇಳಿಕೊಳ್ಳುತ್ತಿದೆ. ಕೇಜ್ರಿವಾಲ್ ಅವರ ಆಮ್ ಆದ್ಮಿ ಹಾಗು ಕಾಂಗ್ರೆಸ್ ಪಕ್ಷ ಮೈತ್ರಿಯಾಗಿ ಕಣದಲ್ಲಿವೆ. 6ನೇ ಹಂತದಲ್ಲಿ ಮೇ 25 ರಂದು ಮತದಾನ ಮಾಡಲು ಸಜ್ಜಾಗುತ್ತಿರುವ ದೆಹಲಿಗರಲ್ಲಿ ಈ ಬಾರಿ ಹೊಸ ಹೊಸ ಆಲೋಚನೆಗಳನ್ನು ಹುಟ್ಟಿಕೊಂಡಿವೆ. 

ಇರುವ ೭ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿ ಮಂದಿ ಅಭ್ಯರ್ಥಿಗಳನ್ನು ಬದಲಾಯಿಸಿದೆ. ಇತ್ತ ಕಳೆದ ಬಾರಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಮತ್ತು ಆಪ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಹಾಗು ಆಮ್ ಆದ್ಮಿ ಪಕ್ಷ 4 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿವೆ. ವಿಶೇಷ ಎಂಬಂತೆ ಶಾಸಕರು, ಮಾಜಿ ಸಂಸದರು ಕಣದಲ್ಲಿದ್ದಾರೆ. ಕೆಲವರು ಪಕ್ಷ ಬದಲಾಯಿಸಿ ಟಿಕೆಟ್ ಗಿಟ್ಟಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಕೇಂದ್ರ ಸಚಿವ ಡಾ.ಹರ್ಷವರ್ಧನ್ ಮತ್ತು ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಕ್ರಿಕೆಟಿಗ ಗೌತಮ್ ಗಂಭೀರ್ ಚುನಾವಣಾ ರಾಜಕಾರಣಕ್ಕೆ ಗುಡ್ ಬಾಯ್ ಹೇಳಿದ್ದಾರೆ. 

ಸೋನಿಯಾ ಎಂಪಿ ನಿಧಿಯ 70% ಅಲ್ಪಸಂಖ್ಯಾತರಿಗೆ ಹಂಚಿಕೆ: ಅಮಿತ್‌ ಶಾ ಕಿಡಿ

ಇಷ್ಟರ ನಡುವೆಯೂ ಭೋಜ್‌ಪುರಿ ನಟ ಮನೋಜ್ ತಿವಾರಿ ಹೊರತು ಪಡಿಸಿ ಬಿಜೆಪಿ ಆರು ಮಂದಿ ಹೊಸ ಮುಖಗಳಿಗೆ ಟಿಕೆಟ್ ನೀಡಿ ಕಣದಲ್ಲಿ ಇರಿಸಿದೆ. ಆಪ್ ಪಕ್ಷಕ್ಕೆ ಅಬಕಾರಿ ಅಕ್ರಮ ದೊಡ್ಡ ಮಟ್ಟದಲ್ಲಿ ಕಳಂಕ ಅಂಟಿಕೊಂಡಿದೆ. ಸಿಎಂ, ಡಿಸಿಎಂ ಹಾದಿಯಾಗಿಯೂ ಜೈಲು ಸೇರಿದ್ದಾರೆ. ಇತ್ತ ಇದೇ ಕಳಂಕದ ಆರೋಪ ಮಾಡುತ್ತಾ ಕಮಲ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದಾರೆ. 21 ದಿನಗಳ ಬೇಲ್ ಮೇಲೆ ಹೊರಬಂದಿರುವ ಸಿಎಂ ಕೇಜ್ರಿವಾಲ್, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಮೈತ್ರಿಕೂಟದ ಏಳು ಮಂದಿಯ ಪರವಾಗಿ ನಿತ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 

ರೋಡ್ ಶೋಗಳನ್ನು ನಡೆಸುವ ಮೂಲಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಕೇಂದ್ರ ಸರ್ಕಾರದ ಸಾಧನೆಗಳು, ಮೋದಿ ವರ್ಚಸ್ಸು, ದೇಶಕ್ಕಾಗಿ ಮೋದಿ ಅನ್ನುವ ಘೋಷಣೆಗಳನ್ನು ಮುಂದಿಟ್ಟುಕೊಂಡು, ಹೊಸ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಕೇಳುತ್ತಿದೆ. ಆಪ್ ಪಕ್ಷ ಉಚಿತ ಕೊಡುಗೆಗಳು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಮತದಾರರ ಮುಂದಿಡುತ್ತಿದೆ. ಮೈತ್ರಿ ಕೂಟ ಅಲ್ಪಸಂಖ್ಯಾತರು, ಕೊಳಗೇರಿ ನಿವಾಸಿಗಳು, ಅಸಂಘಟಿತ ಕಾರ್ಮಿಕರ ಮತಗಳ ಮೇಲೆ ನೇರ ಕಣ್ಣಿಟ್ಟಿದೆ. ಪಕ್ಷಗಳ ಹೊಸ ಆಯ್ಕೆಗಳಂತೆ ಮತದಾರರು ಕೂಡ ಹೊಸ ಆಯ್ಕೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.

ದೆಹಲಿ ಕುರಿತು: ಒಟ್ಟು 11 ಜಿಲ್ಲೆಗಳಿರುವ ದೆಹಲಿ, 7 ಲೋಕಸಭಾ ಹಾಗು ೭೦ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 2.17 ಕೋಟಿ ಜನಸಂಖ್ಯೆ ಹೊಂದಿರುವ ದೆಹಲಿಯಲ್ಲಿ 1.47 ಕೋಟಿ ಮತದಾರರು ಇದ್ದಾರೆ. ೭೯.೮೬ ಲಕ್ಷ ಪುರುಷ ಹಾಗು ೬೭.೩೦ ಲಕ್ಷ ಮಹಿಳಾ ಮತದಾರರು ಇದ್ದಾರೆ. 1,176 ತೃತೀಯ ಲಿಂಗಿ ಮತದಾರರು ಇದ್ದಾರೆ.

ಮತಗಳಿಕೆ
2014 ಚುನಾವಣೆ
ಬಿಜೆಪಿ- ಶೇ.೪೬.೪೦
ಆಪ್- ಶೇ. ೩೨.೯೦,
ಕಾಂಗ್ರೆಸ್- ಶೇ ೧೫.೧೦

2019 ಚುನಾವಣೆ
ಬಿಜೆಪಿ-ಶೇ ೫೬.೮೬
ಆಪ್- ಶೇ ೧೮,೧೧
ಕಾಂಗ್ರೆಸ್-ಶೇ ೨೨.೫೧

ಯಾವ ಕ್ಷೇತ್ರ ? ಸ್ಪರ್ಧಿಗಳು ಯಾರು ?
ಚಾಂದಿನಿ ಚೌಕ್ ಕ್ಷೇತ್ರ
ಕಾಂಗ್ರೆಸ್- ಜೆ.ಪಿ.ಅಗರವಾಲ್
ಬಿಜೆಪಿ- ಪ್ರವೀಣ್ ಖಂಡೇವಾಲ್

ನವದೆಹಲಿ ಕ್ಷೇತ್ರ
ಬಿಜೆಪಿ - ಬಾನ್ಸೂರಿ ಸ್ವರಾಜ್
ಆಪ್- ಸೋಮನಾಥ ಭಾರ್ತಿ

ಪಶ್ಚಿಮ ದೆಹಲಿ ಕ್ಷೇತ್ರ
ಆಪ್- ಮಹಾಬಲ ಮಿಶ್ರಾ
ಬಿಜೆಪಿ- ಕಮಲಜಿತ್ ಸೆಹ್ರಾವತ್

ಪೂರ್ವ ದೆಹಲಿ
ಆಪ್- ಕುಲದೀಪ್ ಕುಮಾರ್
ಬಿಜೆಪಿ- ಹರ್ಷ ಮಲ್ಹೋತ್ರಾ

ಈಶಾನ್ಯ ದೆಹಲಿ
ಬಿಜೆಪಿ- ಮನೋಜ್ ತಿವಾರಿ
ಕಾಂಗ್ರೆಸ್- ಕನ್ನಯ್ಯ ಕುಮಾರ್

ವಾಯುವ್ಯ ದೆಹಲಿ
ಬಿಜೆಪಿ- ಯೋಗೇಂದ್ರ ಚಂದೋಲಿಯಾ
ಕಾಂಗ್ರೆಸ್- ಉದಿತ್ ರಾಜ್

ಹಿಜಾಬ್‌ ಧರಿಸಿದ ಮಹಿಳೆ ಭಾರತದ ಪ್ರಧಾನಿ ಆಗೋದು ಖಚಿತ: ಒವೈಸಿ

ದಕ್ಷಿಣ ದೆಹಲಿ
ಬಿಜೆಪಿ- ರಾಮವೀರ್ ಸಿಂಗ್ ಬಿಧೂರಿ
ಆಪ್- ಸಹಿರಾಮ್ ಪೆಹಲ್ವಾನ್

ದೆಹಲಿ ಚುನಾವಣಾ ಅಖಾಡ: 7 ಲೋಕಸಭಾ ಕ್ಷೇತ್ರಗಳಲ್ಲಿ 162 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಹೆಚ್ಚು ಅಂದರೆ 28 ಮಂದಿ ಕಣದಲ್ಲಿದ್ದಾರೆ, ವಾಯುವ್ಯ ಕ್ಷೇತ್ರದಲ್ಲಿ ೨೬, ನವದೆಹಲಿ ಕ್ಷೇತ್ರದಲ್ಲಿ 17 ಮಂದಿ ಕಣದಲ್ಲಿದ್ದಾರೆ.

Latest Videos
Follow Us:
Download App:
  • android
  • ios