Asianet Suvarna News Asianet Suvarna News

ನೇಹಾಳಂತ ಕೋಟ್ಯಂತರ ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಿದೆ, ಹೊಸಪೇಟೆಯಲ್ಲಿ ಕಾಂಗ್ರೆಸ್ ಕುಟುಕಿದ ಮೋದಿ!

ನೇಹಾಳ ತಪ್ಪೇನಿತ್ತು? ಈ ಕಾಂಗ್ರೆಸ್ ಸರ್ಕಾರದಿಂದ ನಿಮ್ಮ ರಕ್ಷಣೆ ಮಾಡಲು ಸಾಧ್ಯವಿಲ್ಲ.  ನೇಹಾಳಂತಹಾ ಕೋಟ್ಯಂತರ ರಕ್ಷಣೆ ಮಾಡಬೇಕಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.   

Lok sabha Election 2024 PM Modi slams Karnataka Congress govt over Neha Murder and Cafe Blast ckm
Author
First Published Apr 28, 2024, 6:32 PM IST

ಹೊಸಪೇಟೆ(ಏ.29) ನೇಹಾ ಹೆಣ್ಣುಮಗುವಿನ ತಪ್ಪೇನು? ಹೊಸಪೇಟೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ನೇಹಾ ಹೀರೆಮಠ ಹತ್ಯೆ ಪ್ರಕರಣ ಹಾಗೂ ಕಾಂಗ್ರೆಸ್ ಆಡಳಿತವನ್ನು ಪ್ರಶ್ನಿಸಿದ್ದಾರೆ. ಬಾಂಬ್ ಇಡುವವರ ಯೋಚನೆಯನ್ನೇ  ಸ್ಪೋಟಿಸಬೇಕಿದೆ. ದೇಶದ ಮೇಲೆ ದಾಳಿ ಮಾಡುವವರ ಮನೆ ನುಗ್ಗಿ ಹೊಡೆಯುತ್ತೇವೆ ಎಂದು ಮೋದಿ ಹೇಳಿದ್ದಾರೆ. 

ಬಳ್ಳಾರಿಯ ಈ ಭೂಮಿ ವಿಜಯನಗರ ಸಾಮ್ರಾಜ್ಯದ ಸಮೃದ್ಧಿ ಇಲ್ಲಿದೆ. ಇಲ್ಲಿಯ ಜನರು ವಿಕಸಿತ ಭಾರತ, ಅಭಿವೃದ್ಧಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ. ಕೆಲವರು ಭಾರತ ದುರ್ಬಲ ಆಗಬೇಕು ಎಂದು ಬಯಸುತ್ತಿದ್ದಾರೆ.  ಕಾಂಗ್ರೆಸ್ ಭ್ರಷ್ಟದ ಕೂಪವಾಗಿದೆ. ಕಾಂಗ್ರೆಸ್ ನೀತಿ ಎಂದರೆ ನೀನು ದೋಚು, ನಾನು ದೋಚುತ್ತೇನೆ. ಇದನ್ನು ಎನ್‌ಡಿಎ ಸರ್ಕಾರ ನಿಲ್ಲಿಸಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳಿಗೆ ಒಂದು ಮಾತನ್ನು ಇಲ್ಲಿ  ಸ್ಪಷ್ಟಪಡಿಸುತ್ತಿದೆ. ಭಾರತ ವಿಕಸಿತಗೊಳ್ಳುತ್ತಿದೆ. ನಮ್ಮ ಕರ್ನಾಟಕ ಅಭಿವೃದ್ಧಿ ಹೊಂದಲಿದೆ. ಕಾಂಗ್ರೆಸ್ ಯಾವುದೇ ದುರುದ್ದೇಶ ಈಡೇರುವುದಿಲ್ಲ ಎಂದು ಮೋದಿ ಹೇಳಿದೆ. ಕೇಂದ್ರ ಸರ್ಕಾರ ಕಳೆದ 10 ವರ್ಷದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿದೆ. ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ರಾಯಚೂರು ಎಕ್ಸ್‌ಪ್ರೆಸ್ ವೇ, ರೈಲ್ವೇ ಲೈನ್, ಗದಗ ರೈಲ್ವೇ ಹಳಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಅತ್ಯಾಧುನಿಕ ಮೂಲಭೂತ ಸೌಕರ್ಯ ಒದಗಿಸಲಿದೆ ಎಂದಿದ್ದಾರೆ.

ಬಳ್ಳಾರಿಯಲ್ಲಿ ಕೈಗಾರಿಕೆ,ಸ್ಟೀಲ್ ಉದ್ಯಮ ಸೇರಿದಂತೆ ಹಲವು ಕೈಗಾರಿಕೆಗಳಿಗೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆ. ಪಿಎಂ ಮಿತ್ರ ಸೇರಿದಂತೆ ಇತರ ಯೋಜನೆಗಳಿಂದ ಟೆಕ್ಸ್ಟ್‌ಟೈಲ್ ಕೈಗಾರಿಕೆ ಅಭಿವೃದ್ಧಿಯಾಗಿದೆ. ಬಳ್ಳಾರಿಯ ಜೀನ್ಸ್ ಮೇಡ್ ಇಂಡಿಯಾ ಸಂಕೇತವಾಗಿದೆ. ಬಿಜೆಪಿ ಪ್ರಯತ್ನದಿಂದ ಕೊಪ್ಪಳದ ಆಟಿಕೆ ಕೇಂದ್ರ ವಿಶ್ವದಲ್ಲೇ ಗಮನಸೆಳೆಯುತ್ತಿದೆ. ಕೊಪ್ಪಳದಲ್ಲಿ ಸಾವಿರಾರು ಕೋಟಿ ರೂಪಾಯಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿದೆ.

ಭಾರದಂತ ದೇಶದಲ್ಲಿ ಕರಕುಶಲದಲ್ಲಿ ಪರಿಣಿತವಾಗಿದೆ. ನಮ್ಮಲ್ಲಿ ಹಲವರು ಈ ವೃತ್ತಿಯಲ್ಲಿ ತೊಡಗಿದ್ದಾರೆ. ಆದರೆ ಭಾರತ ಆಟಿಕೆಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ನಮ್ಮ ಸರ್ಕಾರ ಈ ಕುರಿತು ಆಲೋಚನೆ ಬದಲಿಸಿತು. ಭಾರತ ಆಟಿಕೆ ಉತ್ಪಾದನೆಯಲ್ಲಿ ಅಗ್ರಗಣ್ಯನಾಗಬೇಕು ಅನ್ನೋ ಮೂಲಮಂತ್ರವನ್ನಿಟ್ಟುಕೊಂಡು ಯೋಜನೆ ಜಾರಿಗೊಳಿಸಿತು. ಇದೀಗ ಭಾರತ ಆಟಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಮೋದಿ ಆಟಿಕೆ ಕುರಿತು ಮಾತನಾಡಿದಾಗ ಪ್ರಧಾನಿ ಆಟಿಕೆ ಕುರಿತು ಮಾತನಾಡುತ್ತಿದ್ದಾರೆ ಎಂದು ಗೇಲಿ ಮಾಡಿತ್ತು ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಕೈಗಾರಿಗಳು ಚಲಿಸುವುದಿಲ್ಲ. ಕರ್ನಾಟಕದಲ್ಲಿ ಒಂದೆಡೆ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡುತ್ತಿದ್ದ 4,000 ರೂಪಾಯಿಯನ್ನು ನಿಲ್ಲಿಸಿದೆ ಎಂದು ಮೋದಿ ಹೇಳಿದ್ದಾರೆ.

ಪಿಎಫ್ಐ ಸಂಘಟನೆ ದೇಶದಲ್ಲಿ ಆತಂಕ, ಭಯೋತ್ಪಾದನೆ ಸೃಷ್ಟಿಸಲು ಪ್ರಯತ್ನಿಸಿತ್ತು. ಈ ಕುರಿತು ನಮ್ಮ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಪಿಎಫ್ಐನ್ನು ನಿಷೇಧ ಮಾಡಿತು. ದೇಶದ ವಿಚಾರದಲ್ಲಿ ಹಿಂದೂ ಮುಂದೂ ನೋಡದೆ ಪಿಎಫ್ಐನ್ನು ನಿಷೇಧ ಮಾಡಲಾಗಿದೆ. ಆದರೆ ದೌರ್ಬಾಗ್ಯ ಎಂದರೆ ಇದೇ ಪಿಎಫ್ಐ ಕಾಂಗ್ರೆಸ್ ಜೀವಾಳವಾಗಿದೆ. ಇದೀಗ ಪಿಎಫ್ಐ‌ನಿಂದ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ರಾಮೇಶ್ವರಂ ಸ್ಫೋಟ, ಹುಬ್ಬಳ್ಳಿ ಕಾಲೇಜಿನ ಹೆಣ್ಣುಮಗುವಿನ ಮೇಲೆ ಭೀಕರ ದಾಳಿ ನಡೆಸಿ ಹತ್ಯೆ ಮಾಡಿತ್ತು. ಆದರೆ ಕಾಂಗ್ರೆಸ್ ಪಕ್ಷ ನೀತಿಯಿಂದ ಈ ರೀತಿಯ ಘಟನೆಗಳು ಸಂಭವಿಸುತ್ತಿದೆ. ರಾಮೇಶ್ವರಂ ಸ್ಫೋಟದ ಬೆನ್ನಲ್ಲೇ ಕಾಂಗ್ರೆಸ್ ಹೇಳಿಕೆ ನೋಡಿದರೆ ಆತಂತ ತರುತ್ತದೆ. ಗ್ಯಾಸ್ ಸಿಲಿಂಡರ್ ಸ್ಫೋಟ ಎಂದ ಕಾಂಗ್ರೆಸ್ ಬಳಿಕ ವ್ಯವಾಹರ ದ್ವೇಷ ಎಂದಿತ್ತು. ಆದರೆ ಎನ್‌ಐಎ ತನಿಖೆಯಿಂದ ಭಯೋತ್ಪಾದನೆ ಕೃತ್ಯ ಬಹಿರಂಗವಾಯಿತು ಎಂದು ಮೋದಿ ಹೇಳಿದ್ದಾರೆ.

ನೇಹಾ ತಂದೆ ಕಾಂಗ್ರೆಸ್ ನಾಯಕರಾಗಿದ್ದಾರೆ. ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ನಾಯಕನ ಹೆಣ್ಣುಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ನೇಹಾ ರೀತಿ ಕೋಟಿ ಕೋಟಿ ಹೆಣ್ಣುಮಕ್ಕಳ ಜೀವ ಮುಖ್ಯ. 2014ರ ಮೊದಲು ದೇಶದೆಲ್ಲೆಡೆ ಬಾಂಬ್ ಸ್ಫೋಟ ನಡೆಯುತ್ತಿತ್ತು. ಮಂಗಳೂರು, ಬೆಂಗಳೂರು, ದೆಹಲಿ ಎಲ್ಲೆಡೆ ಬಾಂಬ್ ಸ್ಫೋಟಗೊಳ್ಳುತ್ತಿತ್ತು. ಆದರೆ 2014ರ ಬಳಿಕ ಈ ರೀತಿಯ ಕೃತ್ಯಕ್ಕೆ ಕಡಿವಾಣ ಹಾಕಲಾಗಿದೆ ಎಂದು ಮೋದಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios