Asianet Suvarna News Asianet Suvarna News

ಲಾಕ್‌ಡೌನ್ ನಿರ್ಧಾರ: ಮೋದಿ ಭಾಷಣದತ್ತ ದೇಶದ ಚಿತ್ತ

ಕೊರೋನಾ ವೈರಸ್ ತಡೆಗೆ ಹಾಕಲಾಗಿದ್ದ 'ಭಾರತ ಲಾಕ್‌ಡೌನ್' ಏಪ್ರಿಲ್ 14 ಕ್ಕೆ ಮುಕ್ತಾಯಗೊಳ್ಳಲಿದೆ. ನಿರೀಕ್ಷೆಯಂತೆ ಪರಿಸ್ಥಿತಿ ಸುಧಾರಿಸಿದ ಕಾರಣ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.  

lockdown likely to be extended beyond 14 April PM Modi hints
Author
Bengaluru, First Published Apr 11, 2020, 5:07 PM IST

ಬೆಂಗಳೂರು (ಏ. 11): ಕೊರೋನಾ ವೈರಸ್ ತಡೆಗೆ ಹಾಕಲಾಗಿದ್ದ 'ಭಾರತ ಲಾಕ್‌ಡೌನ್' ಏಪ್ರಿಲ್ 14 ಕ್ಕೆ ಮುಕ್ತಾಯಗೊಳ್ಳಲಿದೆ. ನಿರೀಕ್ಷೆಯಂತೆ ಪರಿಸ್ಥಿತಿ ಸುಧಾರಿಸಿದ ಕಾರಣ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.  ಪ್ರತಿಯೊಂದು ರಾಜ್ಯಗಳಿಂದ ಕೊರೋನಾ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. 

ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ಮೋದಿ ಮಾಸ್ಕ್ ಧರಿಸಿ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ನಿರ್ಲಕ್ಷ್ಯ ಸಲ್ಲ, ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂಬ ಸಂದೇಶ ರವಾನಿಸಿದ್ದಾರೆ. 

"

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗುವ ಮುನ್ನ ಸಿಎಂ ಬಿಎಸ್ವೈ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. 

"

ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕರ್ನಾಟಕ ಏಪ್ರಿಲ್ 30 ರ ವರೆಗೆ ಬೆಂಬಲ ಸೂಚಿಸಿದೆ. ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರೆಯೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. 

"

ಏಪ್ರಿಲ್ 14 ಕ್ಕೆ ಲಾಕ್‌ಡೌನ್ ಮುಕ್ತಾಯಗೊಳ್ಳುತ್ತಿದೆ. ಏಕಾಏಕಿ ತೆರವುಗೊಳಿಸುವುದು ಬೇಡ. ಏ.30 ರ ವರೆಗೆ ಮುಂದುವರೆಯಲಿ ಎಂದು ಎಲ್ಲಾ ರಾಜ್ಯಗಳು ಒಲವು ತೋರಿಸಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ. ಅಜಾಗರೂಕತೆಯಿಂದ ಮತ್ತಷ್ಟು ಸಾವು ಸಂಭವಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

"

"

 

Follow Us:
Download App:
  • android
  • ios