ಕರ್ನಾಟಕದಲ್ಲಿ ಲಾಕ್‌ ಡೌನ್; ಕೇಂದ್ರದ ಮಾಹಿತಿ ಕೊಟ್ಟ ಸಚಿವ ಪ್ರಹ್ಲಾದ್ ಜೋಶಿ

ಲಾಕ್ ಡೌನ್ ಮಾಡುವ ಯಾವುದೇ ಚಿಂತನೆ ಇಲ್ಲ/ ಕೇಂದ್ರ ಸಚಿವ ಪ್ರಹ್ಲಾದ್  ಜೋಶಿ ಹೇಳಿಕೆ/ ಜನರು ಸರ್ಕಾರದ ನಿರ್ದೇಶನ ಪಾಲಿಸಬೇಕು/ ಸಾರಿಗೆ ನೌಕರರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ

Lockdown in Karnataka union minister pralhad joshi reaction mah

ಹುಬ್ಬಳ್ಳಿ(ಏ. 14)  ಕೊರೋನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಲಾಕ್ಡೌನ್ ಅವಶ್ಯಕತೆ ಇಲ್ಲ . ಕೊರೋನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಪರಿಹಾರವಲ್ಲ. ಏಪ್ರಿಲ್‌ 17ರ ನಂತರ ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ರಾಜ್ಯದ ಜನ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು. ಜನತೆ ಕೊರೋನಾ ಕುರಿತಂತೆ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಪರೀಕ್ಷೆಗಳು ರದ್ದು; ಸುರೇಶ್ ಕುಮರ್ ಸ್ಪಷ್ಟನೆ

ಸಾರಿಗೆ ನೌಕರರ ಮುಷ್ಕರ 8ನೇ ದಿನಕ್ಕೆ ಮುಂದುವರಿದಿದ್ದು ಈ ಬಗ್ಗೆ ಸರ್ಕಾರ ಮಾತುಕತೆಗೆ ಸಿದ್ಧವಿದೆ. ಸಾರಿಗೆ ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇದು ಮುಷ್ಕರ ಮಾಡುವ ಸಮಯವಲ್ಲ. ಏನೇ ಸಮಸ್ಯೆ ಇದ್ದರೂ ಮಾತುಕತೆ ಮಾಡುವ ಮೂಲಕ ಬಗೆಹರಿಸಬೇಕು. ಮುಷ್ಕರದಿಂದಾಗಿ ರಾಜ್ಯದ ಜನತೆಗೆ ತೊಂದರೆಯಾಗುತ್ತಿದೆ ಎಂಬುದನ್ನು ಮನಗಾಣಬೇಕು ಎಂದಿದ್ದಾರೆ.

ಸೋಲಿನ ಭಯ ಇರುವುದರಿಂದ ಸಿಎಂ ಪದೇಪದೆ ಆಗಮಿಸುತ್ತಿದ್ದಾರೆಂದ ಸತೀಶ್‌ ಜಾರಕಿಹೊಳಿ ಹೇಳಿಕೆ ವಿಚಾರ ಸರಿಯಲ್ಲ. ಅವರು ಕೇವಲ ಎರಡೇ ಬಾರಿ ಬೆಳಗಾವಿಗೆ ಬಂದು ಪ್ರಚಾರ ಮಾಡಿದ್ದಾರೆ. ರಾಜ್ಯದಲ್ಲಿ ಮೂರು ಕಡೆಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಗೆಲುವಿನ ಭ್ರಮೆಯಲ್ಲಿದ್ದಾರೆ  ಎಂದು ಬೆಳಗಾವಿ ಉಪಚುನಾವಣೆ ಬಗ್ಗೆಯೂ ಮಾತನಾಡಿದರು. 

Latest Videos
Follow Us:
Download App:
  • android
  • ios