ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!

ಲಾಕ್‌ಡೌನ್‌ನಿಂದ 630 ಜೀವ ರಕ್ಷಣೆ: 500 ಕೋಟಿ ಆರೋಗ್ಯ ಖರ್ಚು ಉಳಿಕೆ!|  ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆ

Lockdown in India may have saved 630 lives says study

ನವದೆಹಲಿ(ಜು.18): ಕೊರೋನಾ ನಿಗ್ರಹಕ್ಕೆ ಹೇರಲಾದ ಲಾಕ್‌ಡೌನ್‌ನಿಂದಾಗಿ ವಾಯುಮಾಲಿನ್ಯ ಭಾರೀ ಪ್ರಮಾಣ ಇಳಿಕೆಯಾಗಿದ್ದು, ಇದರಿಂದ ದೇಶದ ಪ್ರಮುಖ ಐದು ನಗರಗಳಲ್ಲಿ 630 ಜೀವಗಳು ಉಳಿದಿವೆ. ಅಲ್ಲದೇ ಚಿಕಿತ್ಸೆಗೆ ವ್ಯಯಿಸಬೇಕಿದ್ದ .517 ಕೋಟಿ ಉಳಿತಾಯವಾಗಿದೆ ಎಂದು ವರದಿಯೊಂದು ತಿಳಿಸಿದೆ

ಲಾಕ್‌ಡೌನ್‌ನಿಂದಾಗಿ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಹಾಗೂ ಹೈದರಾಬಾದ್‌ ನಗರಗಳಲ್ಲಿ ಗಾಳಿಯಲ್ಲಿ ಸೇರುತ್ತಿದ್ದ ಹಾನಿಕಾರಕ ಪಿಎಂ2.5 ಅಣು ಮಿಶ್ರಣ ಕಡಿಮೆಯಾಗಿದ್ದೇ, ಇಷ್ಟೆಲ್ಲಾ ಜೀವ ಹಾಗೂ ಹಣ ಉಳಿತಾಯಕ್ಕೆ ಕಾರಣ ಎಂದು ಬ್ರಿಟನ್‌ನ ಅಧ್ಯಯನ ವಿವಿಯ ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್‌ ಚಿಕಿತ್ಸೆಗಾಗೇ ಉಳಿತಾಯ ಮಾಡುತ್ತಿರುವ ಮಧ್ಯಮ ವರ್ಗ!

ಲಾಕ್‌ಡೌನ್‌ ಹೇರಲಾದ ಮಾ.25 ರಿಂದ ಏ.11ರ ವರೆಗಿನ ಅವಧಿಯನ್ನು ಮೂಲವಾಗಿಟ್ಟುಕೊಂಡು, ಹಿಂದಿನ 5 ವರ್ಷಗಳ ಇದೇ ಅವಧಿಯನ್ನು ಅವಲೋಕಿಸಿ ಈ ವರದಿ ತಯಾರಿಸಲಾಗಿದೆ. ಮುಂಬೈನಲ್ಲಿ ಈ ಅವಧಿಯಲ್ಲಿ ಗಾಳಿಗೆ ಹಾನಿಕಾರಕ ಅಣು ಮಿಶ್ರಣ ಶೇ.10ರಷ್ಟು, ದೆಹಲಿಯಲ್ಲಿ ಶೇ.54ರಷ್ಟುಕಡಿಮೆಯಾಗಿದೆ. ಒಟ್ಟಾರೆಯಾಗಿ ಈ ನಗರಗಳಲ್ಲಿ ಶೇ.24-35ರಷ್ಟುಕಡಿಮೆಯಾಗಿದೆ ಎಂದು ವರದಿ ಹೇಳಿದೆ.

Latest Videos
Follow Us:
Download App:
  • android
  • ios