ಪ್ರಾಮಾಣಿಕವಾಗಿ(Honest) ಗಳಿಸೋ ಪ್ರೀತಿ, ಸ್ನೇಹಕ್ಕೆ ಬೆಲೆ ಕಟ್ಟಲಾಗದು..! ಈ ಸ್ಥಳದ ಜನರಿಗೆ ಅವರ ಊರಿನ ಪೊಲೀಸ್(Police) ಅಂದ್ರೆ ಸಖತ್ ಇಷ್ಟ ಪೊಲೀಸ್-ಜನರ ಬಾಂಡಿಂಗ್ ಭಾರೀ ಸ್ಟ್ರಾಂಗ್, ಪೊಲೀಸ್ ತಮ್ಮೂರಿನ ಠಾಣೆ ಬಿಟ್ಟೋಗುವಾಗ ಭಾವುಕರಾದ್ರು ಜನ
ಸರ್ಕಾರಿ ಅಧಿಕಾರಿಗಳೆಲ್ಲ ಭ್ರಷ್ಟರು ಎನ್ನುವ ಉಡಾಫೆ ಬಹಳಷ್ಟು ಜನರಲ್ಲಿದೆ. ಇದುವೇ ಸತ್ಯ ಎನ್ನುವಂತಹ ಘಟನೆಗಳೇ ಸುತ್ತ ಮುತ್ತ ನಡೆಯುತ್ತಲೇ ಇರುತ್ತವೆ. ಕರ್ನಾಟಕದಲ್ಲಿ ಸಿ ಗ್ರೂಪ್ ನೌಕರರ ಮನೆಯಲ್ಲಿ ಎಸಿಬಿ ದಾಳಿ ನಡೆಸಿದ ದಾಳಿಯೇ ಭ್ರಷ್ಟ ಅಧಿಕಾರಿಗಳಿಗೆ ಸ್ಪಷ್ಟ ಉದಾಹರಣೆ. ಇಂತಹ ಘಟನೆ ದೇಶಾದ್ಯಂತ ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇರುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಅಧಿಕಾರಿಗಳೂ ಭ್ರಷ್ಟರಲ್ಲ. ಜನಪರ ಕಾಳಜಿ ಇರುವ, ನಿಸ್ವಾರ್ಥ ಸೇವೆ ನೀಡುವ ಬಹಳಷ್ಟು ಅಧಿಕಾರಿಗಳು ನಮ್ಮ ಮಧ್ಯೆಯೇ ಇರುತ್ತಾರೆ. ಇವರು ನಮ್ಮ ನಿಮ್ಮೆಲ್ಲರ ನಿಜವಾದ ಹೀರೋಗಳು. ಇಂತಹ ಹೀರೋಗಳಲ್ಲಿ ಒಬ್ಬ ರಿಯಲ್ ಹೀರೋ ಕಥೆ ಇದು.
ಪೊಲೀಸ್ ಅಧಿಕಾರಿಯೊಬ್ಬರಿಗೆ ಗ್ರಾಮಸ್ಥರು ಬೀಳ್ಕೊಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ಚಂದದ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ತಮ್ಮೂರಿನಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಅಲ್ಲಿಂದ ಹೊರಡುವಾಗ ಜನರು ಅಧಿಕಾರಿ ಮೇಲೆ ಹೂವನ್ನು ಹಾಕಿ ಪ್ರೀತಿಯಿಂದ ಬೀಳ್ಕೊಡುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
AP School Fight; ಠಾಣೆ ಮೆಟ್ಟಿಲೇರಿದ ಪೆನ್ಸಿಲ್ ವಿವಾದ, ಪುಟಾಣಿಗಳ ದೂರಿಗೆ ಪೊಲೀಸರು ಪೆಚ್ಚು!
ಗುಜರಾತ್‌ನ ಖೇದ್‌ಬ್ರಹ್ಮ ಪಟ್ಟಣದಲ್ಲಿರುವ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ವಿಶಾಲಭಾಯ್ ಪಟೇಲ್ ಅವರು ಸ್ಥಳೀಯ ಜನರು ಮತ್ತು ಪೊಲೀಸ್ ಠಾಣೆಯ ಇತರ ಸಿಬ್ಬಂದಿಗಳೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶಾಲಭಾಯಿ ಪಟೇಲ್ ಅವರ ಇಲಾಖಾ ವರ್ಗಾವಣೆ ಸಂದರ್ಭದಲ್ಲಿ ಎಲ್ಲರೂ ಭಾವುಕರಾಗಿದ್ದರು.
ವಿಶಾಲಭಾಯ್ ಪಟೇಲ್ ಅವರ ನಿರ್ಗಮನದ ಸಂದರ್ಭದಲ್ಲಿ ಸಹ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಕಣ್ಣುಗಳು ತುಂಬಿದ್ದವು. ತಮ್ಮ ಹಿತೈಷಿಗಳನ್ನು ಸ್ವಾಗತಿಸಿ ಅಪ್ಪಿಕೊಳ್ಳುತ್ತಿರುವಾಗ ಪೊಲೀಸ್ ಅಧಿಕಾರಿಯೂ ಭಾವುಕರಾಗಿ ಅಳುತ್ತಿರುವುದು ಕಂಡುಬಂದಿದೆ.
ವಿಶಾಲಭಾಯ್ ಪಟೇಲ್ ಅವರು ಸಬರಕಾಂತ ಜಿಲ್ಲೆಯ ಖೇದ್ಬ್ರಹ್ಮ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ವರ್ಗಾವಣೆಗೊಂಡಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳು ಮತ್ತು ಪೊಲೀಸ್ ಠಾಣೆಯ ಇತರ ಸಿಬ್ಬಂದಿ ಅವರನ್ನು ವರ್ಗಾವಣೆ ಮಾಡುವ ವಿಷಯ ತಿಳಿದಾಗ, ಅವರನ್ನು ಬೀಳ್ಕೊಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಸ್ಥಳದಲ್ಲಿದ್ದ ಜನರು ಪೊಲೀಸ್ ಅಧಿಕಾರಿಯ ಮೇಲೆ ಪುಷ್ಪವೃಷ್ಟಿ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ. ಭಾರತೀಯ ಪೊಲೀಸ್ ಪ್ರತಿಷ್ಠಾನವು ಈ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಒಬ್ಬ ಅಧಿಕಾರಿ ಮತ್ತು ಜನರ ನಿಜವಾದ ಸ್ನೇಹಿತ! ಗುಜರಾತ್‌ನ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗೆ ವರ್ಗಾವಣೆಯಾದ ಮೇಲೆ ಸ್ಥಳೀಯ ನಾಗರಿಕರು ಅವರನ್ನು ಭಾವನಾತ್ಮಕವಾಗಿ ಕಳುಹಿಕೊಟ್ಟಿದ್ದಾರೆ. ಅವರು ಕೊರೋನಾ ಸಮಯದಲ್ಲಿ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಹ ಗುಣದ ಹೃದಯ ಮತ್ತು ಮನಸ್ಸಿನ ಅಧಿಕಾರಿಗಳು ನಮ್ಮ ಸೇವೆಯ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಬರೆಯಲಾಗಿದೆ.
