Asianet Suvarna News Asianet Suvarna News

ರಾಮ ಮಂದಿರ ಉದ್ಘಾಟನೆ ಆಮಂತ್ರಣ ವಿವಾದಕ್ಕೆ ಅಡ್ವಾಣಿ- ಮುರಳಿ ಮನೋಹರ್ ಸ್ಪಷ್ಟನೆ!

ವಯಸ್ಸಿನ ಕಾರಣದಿಂದ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠೆಗೆ ಆಗಮಿಸದಂತೆ ಮನವಿ ರಾಮ ಮಂದಿರ ಟ್ರಸ್ಟ್ ಮನವಿ ಮಾಡಿದ ಬೆನ್ನಲ್ಲೇ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಇಬ್ಬರು ನಾಯಕರ ಅಭಿಪ್ರಾಯ ಹಾಗೂ ವಿವಾದ ಕುರಿತ ಸ್ಪಷ್ಟನೆಯನ್ನು ವಿಶ್ವಹಿಂದೂ ಪರಿಷತ್ ಬಹಿರಂಗಪಡಿಸಿದೆ.
 

LK Advani Murali Manohar Joshi invited to Ram Mandir Prana prana pratishta after huge backlash ckm
Author
First Published Dec 19, 2023, 6:32 PM IST

ಆಯೋಧ್ಯೆ(ಡಿ.19) ರಾಮ ಮಂದಿರ ಆಂದೋಲನ, ಹೋರಾಟದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಹೆಸರು ಅಜರಾಮರ. ದೇಶದ ಮೂಲೆ ಮೂಲೆಯಲ್ಲಿ ರಾಮ ಭಕ್ತರನ್ನು ಸಂಘಟಿಸಿ ಹೋರಾಟ ನಡೆಸಿದ ನಾಯಕ ಅಡ್ವಾಣಿ ಹಾಗೂ ಜೋಶಿ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾನಿ ಹಾಗೂ ಜೋಶಿ ಸತತ ವಿಚಾರಣೆ ಸೇರಿದಂತೆ ಹಲವು ಸಂಕಷ್ಟ ಎದುರಿಸಿದ್ದಾರೆ. ಆದರೆ ಈ ನಾಯರನ್ನು ವಯಸ್ಸಿನ ಕಾರಣದಿಂದ ರಾಮ ಮಂದಿರ ಪ್ರಾಣಪ್ರತಿಷ್ಠಿಗೆ ಬರಬೇಡಿ ಎಂದು ರಾಮ ಮಂದಿರ ಟ್ರಸ್ಟ್ ಮನವಿ ಮಾಡಿದ ಘಟನ ಭಾರಿ ವಿರೋಧಕ್ಕೆ ಕಾರಣಾಗಿತ್ತು. ಸಾಮಾಜಿಕ ಮಾಧ್ಯಮ ಸೇರಿದಂತೆ  ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕರ ಅಭಿಪ್ರಾಯ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ರಾಮ ಮಂದಿರ ಆಂದೋಲದನ ಪ್ರಮುಖರಾಗಿರುವ ಎಲ್ ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರಿಗೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಆಹ್ವಾನ ನೀಡಲಾಗಿದೆ. ಇಬ್ಬರನ್ನು ಭೇಟಿಯಾಗಿ ಆಹ್ವಾನಿಸಲಾಗಿದೆ. ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಈ ವೇಳೆ ಇಬ್ಬರು ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟನೆ ನೀಡಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಬರದೇ ಇರುವಂತೆ ಅಡ್ವಾಣಿ, ಎಂಎಂ ಜೋಶಿಗೆ ಮನವಿ

ಎಲ್‌ಕೆ ಅಡ್ವಾಣಿಗೆ 96 ವರ್ಷ ವಯಸ್ಸಾಗಿದ್ದರೆ, ಮುರಳಿ ಮನೋಹರ್ ಜೋಶಿಗೆ 90 ವರ್ಷ ವಯಸ್ಸಾಗಿದೆ. ಈ ಕಾರಣದಿಂದ ರಾಮ ಮಂದಿರ ಟ್ರಸ್ಟ್ ಸದಸ್ಯರು, ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದರು. ವಯಸ್ಸಿನ ಕಾರಣದಿಂದ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವುದು ಕಷ್ಟವಾಗಲಿದೆ. ಆದರೆ ಅಂತಿಮ ನಿರ್ಧಾರವನ್ನು ಕುಟುಂಬಸ್ಥರು ಚರ್ಚಿಸಿ ತೆಗೆದುಕೊಳ್ಳಿ ಎಂದು ಟ್ರಸ್ಟ್ ಮನವಿ ಮಾಡಿತ್ತು. 

 

 

ಈ ಮನವಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ರಾಮ ಮಂದಿರ ಇಂದು ಭವ್ಯವಾಗಿ ತಲೆ ಎತ್ತಿದೆ ಎಂದರೆ ಅದರ ಹಿಂದೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಪರಿಶ್ರಮವೇ ಅತ್ಯಂತ ಮುಖ್ಯ. ರಥಯಾತ್ರೆ ಮೂಲಕ ಅಡ್ವಾಣಿ ದೇಶವನ್ನೇ ರಾಮ ಮಂದಿರ ಆಂದೋಲದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಇದೇ ಹೋರಾಟ ಬಿಜೆಪಿಯನ್ನು ಪ್ರಮುಖ ರಾಜಕೀಯ ಪಕ್ಷವಾಗಿ ಬಲಪಡಿಸಿತು. 

ರಾಮ ಮಂದಿರ ಪ್ರಾಣಪ್ರತಿಷ್ಠೆ ಆಮಂತ್ರಣ ಸ್ವೀಕರಿಸಿದ ಕೊಹ್ಲಿ-ಸಚಿನ್; ಆಯೋಧ್ಯೆಗೆ ಕ್ರಿಕೆಟ್ ದಿಗ್ಗಜರು!

ಭವ್ಯ ರಾಮಮಂದಿರದಲ್ಲಿ ಜ.22ರಂದು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮನ ವಿಗ್ರಹ ಕುರಿತು ಜನವರಿ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ. ಈ ಕುರಿತು ‘ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಸ್ಪಷ್ಟನೆ ನೀಡಿದ್ದಾರೆ. ಹಾಲಿ ಮೂರು ವಿಗ್ರಹಗಳನ್ನು ಕೆತ್ತಲಾಗುತ್ತಿದೆ. ಈ ಪೈಕಿ ಗರ್ಭಗುಡಿಯಲ್ಲಿ ಕೂರಿಸುವ ಬಾಲರಾಮನ ವಿಗ್ರಹ ಯಾವುದಾಗಿರಲಿದೆ ಎಂಬುದನ್ನು ಉನ್ನತ ಮಟ್ಟದ ಸಮಿತಿ, ಜನವರಿ ಮೊದಲ ವಾರದಲ್ಲಿ ಸಭೆ ಸೇರಿ ನಿರ್ಧರಿಸಲಿದೆ ಎಂದು ರಾಯ್‌ ಮಾಹಿತಿ ನೀಡಿದ್ದಾರೆ.
 

Latest Videos
Follow Us:
Download App:
  • android
  • ios