* ಮಗಳು ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಅಪ್ಪನೇ ಪೈಲಟ್* ಅಪ್ಪನನ್ನು ಕಾಕ್‌ಪಿಟ್‌ ಬಳಿಕ ಕಂಡು ಅಚ್ಚರಿಗೀಡಾದ ಮಗಳು* ವೈರಲ್ ಆಯ್ತು ಮುಗ್ಧ ಕಂದನ ವಿಡಿಯೋ

ನವದೆಹಲಿ(ಅ.13): ಗೋಏರ್(Go First) ವಿಮಾನದಲ್ಲಿದ್ದ ಪುಟ್ಟ ಹುಡುಗಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ, ಪುಟ್ಟ ಹುಡುಗಿ ದೆಹಲಿಯಿಂದ ವಿಮಾನ ಹತ್ತಿದ್ದಾಳೆ. ಹೀಗಿರುವಾಗ ಇದ್ದಕ್ಕಿದ್ದಂತೆ ಹುಡುಗಿ ತನ್ನ ತಂದೆ ಸಮವಸ್ತ್ರದಲ್ಲಿ ವಿಮಾನದಲ್ಲಿರುವುದನ್ನು ನೋಡಿದ್ದಾಳೆ. ಹುಡುಗಿಯ ತಂದೆ(Father) ವಿಮಾನದ ಪೈಲಟ್(Pilot) ಆಗಿದ್ದು, ಇದನ್ನು ಕಂಡ ಹುಡುಗಿ ಬಹಳಷ್ಟು ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಸದ್ಯ ಈ ಪುಟ್ಟ ಹುಡುಗಿಯ ಮುದ್ದಾದ ರಿಯಾಕ್ಷನ್ ನೆಟ್ಟಿಗರ ಮನ ಗೆದ್ದಿದೆ. 

View post on Instagram

ಕಾಕ್‌ಪಿಟ್‌ ದ್ವಾರದ ಬಳಿ ಇದ್ದ ಅಪ್ಪ

ವೈರಲ್ ಆಗಿರುವ ವಿಡಿಯೋದಲ್ಲಿ, ಹುಡುಗಿಯ ತಂದೆ ಕಾಕ್ ಪಿಟ್(Cockpit) ಬಾಗಿಲ ಬಳಿ ನಿಂತಿದ್ದಾರೆ. ಈ ನಡುವೆ ಪೈಲಟ್, ತಂದೆ ತನ್ನ ಮಗಳ ಕಡೆ ಕೈ ಬೀಸಿದ್ದಾರೆ. ಈ ಸಮಯದಲ್ಲಿ, ಇನ್ನಿತರ ಪ್ರಯಾಣಿಕರು ಕೂಡ ವಿಮಾನ ಹತ್ತಿದ್ದು, ಹುಡುಗಿ ತನ್ನ ತಂದೆಯನ್ನು ನೋಡಿ ಆಶ್ಚರ್ಯಗೊಂಡ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಹುಡುಗಿಯ ಹೆಸರು ಶನಯಾ ಮೋತಿಹಾರ್ ಎಂದು ತಿಳಿದು ಬಂದಿದೆ. ಇನ್ನು ತಂದೆಯನ್ನು ಕಂಡ ಪುಟ್ಟ ಬಾಲಕಿ ಒಂದೇ ಸಮನೆ ಅಪ್ಪಾ ಎಂದನ್ನುತ್ತಿರುವುದನ್ನು ನೊಡಬಹುದಾಗಿದೆ.

View post on Instagram

ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ಲೈಕ್ಸ್

ಈ ವಿಡಿಯೋವನ್ನು ಶನಾಯ ಮೋತಿಹಾರ್ ಅವರ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ 'ಅಪ್ಪನ ಜೊತೆ ನನ್ನ ಮೊದಲ ವಿಮಾನಯಾನ. ಅವರು ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಅವನನ್ನು ನೋಡಲು ತುಂಬಾ ಉತ್ಸುಕಳಾಗಿದ್ದೆ. ಇದು ನಾನು ಕಂಡ ಅತ್ಯುತ್ತಮ ವಿಮಾನಯಾನ. ಲವ್ ಯು ಪಾಪಾ ಎಂದು ಬರೆಯಲಾಗಿದೆ"ಈ ಸುದ್ದಿ ಬರೆಯುವವರೆಗೂ ಎರಡು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.