Asianet Suvarna News Asianet Suvarna News

ಪುಟ್ಟ ಮಕ್ಕಳ ದೊಡ್ಡತನ: ತಳ್ಳು ಗಾಡಿ ಮೇಲೆತ್ತಲು ಮಹಿಳೆಗೆ ಸಹಾಯ

ಹಂಪೊಂದರಲ್ಲಿ ತಳ್ಳುಗಾಡಿಯನ್ನು ಏರಿಸಲು ಕಷ್ಟಪಡುತ್ತಿದ್ದ ಮಹಿಳೆಯೊಬ್ಬರಿಗೆ ಪುಟ್ಟ ಮಕ್ಕಳಿಬ್ಬರು ಸಹಾಯ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

little childrens helps woman to push her cart akb
Author
Bangalore, First Published Aug 10, 2022, 4:38 PM IST

ಮಕ್ಕಳು ದೈವಿ ಸ್ವರೂಪ ಎಂದು ಆಗಾಗ ಜನ ಹೇಳುವುದನ್ನು ಕೇಳಿದ್ದೇವೆ. ಮಕ್ಕಳಲ್ಲಿರುವ ಮುಗ್ಧತೆ, ಉದಾರ ಗುಣ, ಸಮಾನತೆ ಇದಕ್ಕೆ ಕಾರಣ. ದೊಡ್ಡವರಿಗೂ ಮಿಗಿಲಾಗಿ ಒಳ್ಳೆಯ ಗುಣ ಹಾಗೂ ಮಾನವೀಯತೆಯನ್ನು ಬಹಿರಂಗಪಡಿಸಿದ ಹಲವು ಮಕ್ಕಳನ್ನು ನಾವು ನೋಡಿದ್ದೇವೆ. ವಯಸ್ಸಿಗೆ ಮೀರಿ ಮಕ್ಕಳು ದೊಡ್ಡತನ ಮೆರೆದು ಇತರರಿಗೆ ಮಾದರಿಯಾದ, ಪೋಷಕರು ಹೆಮ್ಮೆ ಪಡುವಂತೆ ಮಾಡಿದ ಹಲವು ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲಿ ಪುಟ್ಟ ಮಕ್ಕಳಿಬ್ಬರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಮಹಿಳೆಗೆ ಸಹಾಯ ಮಾಡಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಆದರೆ ಇದು ಸಿಸಿಟಿವಿ ದೃಶ್ಯಾವಳಿಯಾಗಿದೆ. ಅಲ್ಲದೇ ಕರುಣೆ ಹಾಗೂ ಮಾನವೀಯತೆ ಇನ್ನೂ ಚಾಲ್ತಿಯಲ್ಲಿದೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ತಳ್ಳು ಗಾಡಿಯಲ್ಲಿ ಮಹಿಳೆಯೊಬ್ಬರು ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ರಸ್ತೆಯಲ್ಲಿ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿರುತ್ತಾರೆ. ಆದರೆ ಈ ವೇಳೆ ರಸ್ತೆ ಮಧ್ಯೆ ದೊಡ್ಡದಾದ ಹಂಪೊಂದು ಸಿಕ್ಕಿದ್ದು ಇದರ ಮೇಲೆ ತಳ್ಳುಗಾಡಿಯನ್ನು ಏರಿಸಲು ಮಹಿಳೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆ ಎಷ್ಟೇ ಪ್ರಯತ್ನಿಸಿದರು. ತಳ್ಳು ಗಾಡಿಯನ್ನು ಅವರೊಬ್ಬರಿಂದಲೇ ಹಂಪ್ ಮೇಲೇ ಏರಿಸಲು ಸಾಧ್ಯವಾಗುವುದೇ ಇಲ್ಲ. ರಸ್ತೆಬದಿಯಲ್ಲಿ ಸಾಗುತ್ತಿರುವ ಅನೇಕರು ಈ ದೃಶ್ಯವನ್ನು ನೋಡಿದರೂ ತಲೆ ತಿರುಗಿಸಿಕೊಂಡು ಹೊರಟು ಹೋಗುತ್ತಾರೆಯೇ ವಿನಃ ಯಾರೊಬ್ಬರೂ ಕೂಡ ಆಕೆಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಶಾಲಾ ಸಮವಸ್ತ್ರ ಧರಿಸಿ ಶಾಲೆಗೆ ಹೊರಟಿದ್ದ ಪುಟ್ಟ ಮಕ್ಕಳು ಆ ಮಾರ್ಗವಾಗಿ ಬಂದಿದ್ದು, ಮಕ್ಕಳು ಎರಡು ಯೋಚನೆ ಮಾಡದೇ ಮಹಿಳೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಬಾಲಕ ಮೇಲೆ ನಿಂತು ತಳ್ಳುಗಾಡಿಯನ್ನು ಮೇಲೆಳೆದರೆ ಬಾಲಕಿ ಮಹಿಳೆಯೊಂದಿಗೆ ನಿಂತು ತಳ್ಳುಗಾಡಿಯನ್ನು ಕೆಳಗಿನಿಂದ ದೂಡಲು ಸಹಾಯ ಮಾಡುತ್ತಾಳೆ. ಈ ಇಬ್ಬರು ಪುಟ್ಟ ಮಕ್ಕಳ ಸಹಾಯದಿಂದ ಮಹಿಳೆ ತಳ್ಳುಗಾಡಿಯನ್ನು ಮೇಲೇರಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅಲ್ಲದೇ ಮಹಿಳೆ ಸಹಾಯ ಮಾಡಿದ ಮಕ್ಕಳಿಗೆ ತನ್ನ ಗಾಡಿಯಲ್ಲಿದ್ದ ಬಾಳೆಹಣ್ಣನ್ನು ಇಬ್ಬರಿಗೂ ಒಂದೊಂದು ನೀಡಿ ಸಹಾಯ ಮಾಡಿದ್ದಕ್ಕೆ ಅವರ ಕೆನ್ನೆ ಸವರಿ ಕೃತಜ್ಞತೆ ತಿಳಿಸುತ್ತಾಳೆ. 

ಸಾರು ಮಾಡೋ ರೆಸಿಪಿ ಹೇಳ್ಕೊಡೋ ಬಾಲ ಬಾಣಸಿಗ, ನೀವು ಕಲ್ತ್‌ಕೊಂಡ್ರಾ?

ಈ ವಿಡಿಯೋವನ್ನು ಐದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 30 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುಟ್ಟ ಮಕ್ಕಳ ಈ ದೊಡ್ಡ ಮನಸ್ಸಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವಿಡಿಯೋವನ್ನು  4,600 ಕ್ಕೂ ಹೆಚ್ಚು ನೋಡುಗರು ರಿಟ್ವಿಟ್ ಮಾಡಿದ್ದು, ಈ ಮಕ್ಕಳನ್ನು ಪೋಷಕರು ಸಂಸ್ಕಾರಯುತವಾಗಿ ಬೆಳೆಸಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. ಈ ಮಕ್ಕಳನ್ನು ಹೆತ್ತ ಪೋಷಕರು ನಿಜವಾಗಿಯೂ ಪುಣ್ಯವಂತರು, ಅವರು ಈ ಮಕ್ಕಳಿಂದ ಕಾಳಜಿ ಪ್ರೀತಿ ಪಡೆಯುತ್ತಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಕ್ಕಳು ಮತ್ತೊಬ್ಬರತ್ತ ಸಹಾಯಹಸ್ತ ಚಾಚಿರುವುದು ಖುಷಿಯ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪುಟ್ಟ ಮಕ್ಕಳ ಈ ದೊಡ್ಡ ಮನಸ್ಸನ್ನು ಎಲ್ಲರೂ ಶ್ಲಾಘನೆ ಮಾಡುತ್ತಿದ್ದಾರೆ. 

ಸಾರಿ ಉಟ್ಟು ಕನ್ನಡಿ ಮುಂದೆ ಚಮಕ್ ಮಾಡ್ತಿರೋ ಪುಟಾಣಿ : ವಿಡಿಯೋ ವೈರಲ್‌

Follow Us:
Download App:
  • android
  • ios