ಜಮ್ಮುಕಾಶ್ಮೀರದಲ್ಲಿರುವ ಬಂಡೀಪುರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದರು. ಈ ಪುಟ್ಟ ಅತಿಥಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗೆ ಅಚ್ಚರಿಯೊಂದು ಕಾದಿತ್ತು. ಪುಟ್ಟ ಅತಿಥಿಯ ಕರುಣೆಯ ಬಗ್ಗೆ ಟ್ವಿಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಶ್ರೀನಗರ(ಏ.16): ಜಮ್ಮುಕಾಶ್ಮೀರದಲ್ಲಿರುವ ಬಂಡೀಪುರದ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ವಿಶೇಷ ಅತಿಥಿಯೊಬ್ಬರು ಬಂದರು. ಈ ಪುಟ್ಟ ಅತಿಥಿಯನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿಗೆ ಅಚ್ಚರಿಯೊಂದು ಕಾದಿತ್ತು. ಪುಟ್ಟ ಅತಿಥಿಯ ಕರುಣೆಯ ಬಗ್ಗೆ ಟ್ವಿಟರ್‌ನಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಜಮ್ಮು ಕಾಶ್ಮೀರದ ನೌಪುರದ 8 ವರ್ಷದ ಪೋರ ಮಲಿಕ್ ಉಬೀದ್ ಡಿಸಿ ಆಫೀಸ್‌ಗೆ ಬಂದಿಳಿದಿದ್ದ. ಕೈಯಲ್ಲೊಂದು ಪಿಗ್ಗಿ ಬ್ಯಾಂಕ್. ಕೊರೋನಾ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಈ ಸಂದರ್ಭ ಕಷ್ಟಪಡುತ್ತಿರುವರಿಗಾಗಿ ವಿನಿಯೋಗಿಸಲೆಂದು ಬಾಲಕ ತನ್ನ ಪೂರ್ತಿ ಪಿಗ್ಗಿ ಬ್ಯಾಂಕ್ ಡಿಸಿಗೆ ಕೊಟ್ಟಿದ್ದಾನೆ.

25 ಕೋಟಿ ರೂ ನೆರವಿನ ಬಳಿಕ ಮತ್ತೆ 3 ಕೋಟಿ ; ಅಕ್ಷಯ್ ಕುಮಾರ್‌ಗೆ ಯಾರೂ ಇಲ್ಲ ಸರಿಸಾಟಿ!

ಜಮ್ಮು ಕಾಶ್ಮೀರದ ಸಾರ್ವಜನಿಕ ಸಂಪರ್ಕ ಇಲಾಖೆ ಈ ಹೃದಯ ಸ್ಪರ್ಶಿ ಘಟನೆಯ ಬಗ್ಗೆ ಬರೆದು ಟ್ವೀಟ್ ಮಾಡಿದೆ. ನೌಪುರದ 4 ನೇ ತರಗತಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕ ಮಲಿಕ್ ಉಬೀದ್ ತನ್ನ ಪಿಗ್ಗಿ ಬ್ಯಾಂಕ್‌ನೊಂದಿಗೆ ಡಿಸಿ ಕಚೇರಿಗೆ ಬಂದಿದ್ದ. ಪಿಗ್ಗಿ ಬ್ಯಾಂಕ್‌ನ್ನು ಡಿಸಿ ಕೈಗಿಟ್ಟ ಬಾಲಕ ಆ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಬೇಕೆಂದು ಕೋರಿದ್ದಾನೆ ಎಂದು ಟ್ವೀಟ್ ಮಾಡಲಾಗಿದೆ.
Scroll to load tweet…
ಈ ಟ್ವೀಟ್‌ಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಉಬೀದ್‌ನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ನಿಜವಾದ ದಯೆಯಿಂದ ಈ ಬಾಲಕನಿಂದ ಕಲಿಯಬೇಕು ಎಂದು ಜನ ಟ್ವೀಟ್ ಮಾಡಿದ್ದಾರೆ.