80 ಕೋಟಿ ಆಸ್ತಿ, ಮಗ ಉದ್ಯಮಿ, ಮಗಳು ಸುಪ್ರೀಂ ಕೋರ್ಟ್ ವಕೀಲೆ; ಅನಾಥ ಹೆಣವಾದ 400 ಪುಸ್ತಕಗಳ ಲೇಖಕ
Shrinath Khandelwal Died: 400ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಅವರು ವೃದ್ಧಾಶ್ರಮದಲ್ಲಿ ನಿಧನರಾದರು. 80 ಕೋಟಿ ಆಸ್ತಿಯಿದ್ದರೂ ಮಕ್ಕಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ.
ಲಕ್ನೋ: 400ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿರುವ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಡಿಸೆಂಬರ್ 30ರಂದು ವಿಧಿವಶರಾಗಿದ್ದು, ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬದ ಯಾವ ಸದಸ್ಯರು ಭಾಗಿಯಾಗದ ಕಾರಣಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 86 ವರ್ಷದ ಶ್ರೀನಾಥ್ ಖಂಡೇಲ್ವಾಲ್, 80 ಕೋಟಿ ಆಸ್ತಿ ಹೊಂದಿದ್ದರೂ ಜೀವನದ ಕೊನೆ ಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯುವ ಪರಿಸ್ಥಿತಿ ಬಂದಿತ್ತು. 2024ನೇ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶದ ವಾರಣಾಸಿಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಲೇಖಕ ಶ್ರೀನಾಥ್ ಖಂಡೇಲ್ವಾಲ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು
ಲೇಖಕ ಶ್ರೀನಾಥ್ ಖಂಡೇಲ್ವಾಲ್ ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಮಗ ಉದ್ಯಮಿಯಾಗಿದ್ದು, ಕೊನೆ ಕಾಲದಲ್ಲಿ ತಂದೆಯನ್ನು ನೋಡಿಕೊಂಡಿಲ್ಲ. ವೃದ್ಧಾಶ್ರಮದಲ್ಲಿದ್ದ ಶ್ರೀನಾಥ್ ಖಂಡೇಲ್ವಾಲ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಶ್ರೀನಾಥ್ ಅವರ ಮಗ ಮತ್ತು ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ರು. ಆದ್ರೂ ಯಾರೂ ಶ್ರೀನಾಥ್ ಅವರ ಆರೋಗ್ಯ ವಿಚಾರಿಸಲು ಬಂದಿರಲಿಲ್ಲ ಎಂದು ವರದಿಯಾಗಿದೆ.
ಇನ್ನು ಶ್ರೀನಾಥ್ ಖಂಡೇಲ್ವಾಲ್ ನಿಧನದ ಸುದ್ದಿಯನ್ನು ತಿಳಿಸಿದಾಗ ಅಂತಿಮ ದರ್ಶನ ಪಡೆಯಲು ಮಕ್ಕಳು ಬಂದಿಲ್ಲ. ಕೊನೆಗೆ ಶ್ರೀನಾಥ್ ಖಂಡೇಲ್ವಾಲ್ ಅವರ ಸ್ನೇಹಿತರು ಮತ್ತು ಆಪ್ತರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಗಳು ಸುಪ್ರೀಂಕೋರ್ಟ್ ವಕೀಲೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ತನ್ನ ಸಾಕಿ ಬೆಳೆಸಿದ ವಿಧವೆ ತಾಯಿಗೆ ಮರು ಮದ್ವೆ ಮಾಡಿಸಿದ 18 ವರ್ಷದ ಪುತ್ರ
ಕಾಶಿಯಲ್ಲಿ ಜನಿಸಿದ ಶ್ರೀನಾಥ್ ಖಂಡೇಲ್ವಾಲ್, 10ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. 15ನೇ ವಯಸ್ಸಿನಲ್ಲಿಯೇ ಶ್ರೀನಾಥ್ ಖಂಡೇಲ್ವಾಲ್ ಪುಸ್ತಕ ಬರೆಯಲು ಆರಂಭಿಸಿದರು. ಹಿಂದಿ, ಸಂಸ್ಕೃತ, ಅಸ್ಸಾಮಿ ಮತ್ತು ಬಂಗಾಳಿ ಸೇರಿದಂತೆ 400ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಆನ್‌ಲೈನ್‌ನಲ್ಲಿ ಶ್ರೀನಾಥ್ ಖಂಡೇಲ್ವಾಲ್ ಅವರ ಪುಸ್ತಕಗಳು ಸಿಗುತ್ತವೆ. ಜೀವನದ ಕೊನೆಯ ದಿನಗಳನ್ನು ಕಾಶಿಯ ಕುಷ್ಠ ರೋಗ ಸೇವಾ ಸಂಘದ ವೃದ್ಧಾಶ್ರಮದಲ್ಲಿ ಕಳೆದಿದ್ದರು.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಶ್ರೀನಾಥ್ ಖಂಡೇಲ್ವಾಲ್ ಅವರು, ಮಗ, ಮಗಳು ಎಲ್ಲಾ ಸಂಬಂಧಗಳು ಮುಗಿದು ಹೋಗಿವೆ. ಈಗ ಯಾರೂ ನನ್ನ ಬದುಕಿನ ಭಾಗವಾಗಿಲ್ಲ. 80 ಕೋಟಿ ಆಸ್ತಿಯನ್ನು ಕಬಳಿಸಿದ ಮಗ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಒಂದು ವೇಳೆ ನಾನು ಇಲ್ಲಿ ಸತ್ತರೇ ನನ್ನ ದೇಹವನ್ನು ಹೊರಗೆ ಎಸೆದುಬಿಡಿ ಎಂದು ಹೇಳಿ ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: 2025ರ ಹೊಸ ವರ್ಷದ ಅತ್ಯುತ್ತಮ ಫೋಟೋ, ತಂದೆ-ಮಗನ ನಡುವಿನ ಭಾವನಾತ್ಮಕ ಕ್ಷಣ