ದೇವರಿಗೆ ಮೋದಿ ಬರೆದಿದ್ದ ಪತ್ರಕ್ಕೀಗ ಪುಸ್ತಕದ ಸ್ವರೂಪ
ಪ್ರಧಾನಿ ನರೇಂದ್ರ ಮೋದಿ ಅವರು ದಶಕಗಳ ಹಿಂದೆ ನಿತ್ಯ ಮಲಗುವ ಮುನ್ನ ‘ಜಗತ್ ಜನನಿ’ ಹೆಸರಲ್ಲಿ ಮಾತೃ ದೇವತೆಗೆ ಬರೆದ ಪತ್ರಗಳು ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಲಿದೆ.
ನವದೆಹಲಿ(ಮೇ 29): ಪ್ರಧಾನಿ ನರೇಂದ್ರ ಮೋದಿ ಅವರು ದಶಕಗಳ ಹಿಂದೆ ನಿತ್ಯ ಮಲಗುವ ಮುನ್ನ ‘ಜಗತ್ ಜನನಿ’ ಹೆಸರಲ್ಲಿ ಮಾತೃ ದೇವತೆಗೆ ಬರೆದ ಪತ್ರಗಳು ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಲಿದೆ.
‘ಲೆಟರ್ಸ್ ಟು ಮದರ್’(ತಾಯಿಗೆ ಪತ್ರಗಳು) ಎಂಬ ಶೀರ್ಷಿಕೆಯ ಪುಸ್ತಕವು, ಮೋದಿ ಅವರು ಚಿಕ್ಕಂದಿನಿಂದಲೂ ಅನುಭವಿಸಿದ ನೋವು-ನಲಿವುಗಳ ನೆನಪುಗಳನ್ನು ಮೆಲುಕು ಹಾಕಲಿದೆ ಎನ್ನಲಾಗಿದೆ. ಈ ಪುಸ್ತಕವನ್ನು ಹಾರ್ಪರ್ ಕೊಲಿನ್ಸ್ ಇಂಡಿಯಾ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿದೆ.
ಬಹಳ ಹಿಂದಿನಿಂದಲೂ ಮೋದಿ ಅವರಿಗೆ ಹೀಗೆ ನಿತ್ಯ ಡೈರಿಯಲ್ಲಿ ಪತ್ರ ಬರೆಯುವ ಅಭ್ಯಾಸ ಇತ್ತು. ಆದರೆ ಕೆಲ ತಿಂಗಳ ನಂತರ ಅವರು ಆ ಪತ್ರಗಳನ್ನು ನಾಶಪಡಿಸುತ್ತಿದ್ದರು. ಆದರೆ 1986ರ ಸಮಯದಲ್ಲಿ ಅವರು ಬರೆದ ಕೆಲ ಪತ್ರಗಳು ಮಾತ್ರ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಗುಜರಾತಿ ಭಾಷೆಯಲ್ಲಿ ಬರೆಯುತ್ತಿದ್ದ ಪತ್ರಗಳನ್ನು ಇದೀಗ ಪದ್ಮಶ್ರೀ ಪುರಸ್ಕೃತರಾದ ಭಾರತದ ಸಿನಿಮಾ ಪತ್ರಕರ್ತರಾದ ಭಾವನಾ ಸೋಮಾಯಾ ಅವರು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ.
ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಿಲ್ಲ..! ಸುಪ್ರೀಂ ಸಾಂತ್ವನ
ಇನ್ನು ಈ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ ಅವರು, ನಾನೇನು ಬರಹಗಾರನಲ್ಲ. ಆದರೆ, ಪ್ರತೀ ದಿನವೂ ನಮಗೂ ಕೆಲವೊಂದು ಭಾವನೆಗಳು ಮೂಡುತ್ತವೆ. ಅವುಗಳನ್ನು ಮನಸ್ಸಿನಲ್ಲಿ ತಡೆಹಿಡಿಯಲಾಗದೇ ಇದ್ದಾಗ ಪೆನ್ನು ಮತ್ತು ಪೇಪರ್ ತೆಗೆದುಕೊಂಡು ಬರೆಯುವುದು ಬಿಟ್ಟರೆ ಅನ್ಯ ಮಾರ್ಗವಿರಲ್ಲ. ಅಲ್ಲದೆ, ಡೇರಿ ಬರೆಯಲೇಬೇಕು ಎಂದೇನೂ ಇಲ್ಲ. ಮನಸ್ಸು ಮತ್ತು ತಲೆಯಲ್ಲಿ ಏನೆಲ್ಲಾ ಯೋಚನೆಗಳು ಓಡಾಡುತ್ತಿವೆ ಮತ್ತು ಯಾಕೆ ಹೀಗಾಗುತ್ತಿದೆ? ಎಂಬುದರ ಬಗ್ಗೆ ತುಲನೆ ಮಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ ಎನ್ನಲಾಗಿದೆ.