Asianet Suvarna News Asianet Suvarna News

ಜಮ್ಮುವಿನಿಂದ ಲಾಲ್ ಚೌಕ್‌ವರೆಗೆ ಪಾದಯಾತ್ರೆ ಮಾಡಿ: ಅಮಿತ್ ಶಾಗೆ ರಾಹುಲ್ ಗಾಂಧಿ ಸವಾಲು..!

ಯಾವುದೇ ಭದ್ರತಾ ಲೋಪವಿಲ್ಲ. ನಾವು ಫೂಲ್‌ ಪ್ರೂಫ್‌ ಭದ್ರತೆಯನ್ನು ಒದಗಿಸುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ಜನಸಂದಣಿಯನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಹಾಗೂ ಗುಂಪಿನ ಒಳಗೆ ಅನುಮತಿಸಲಾಗಿದೆ ಎಂದು ಪೊಲೀಸರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

let amit shah walk from jammu to lal chowk if all is well rahul gandhi ash
Author
First Published Jan 29, 2023, 10:51 PM IST

ಶ್ರೀನಗರ (ಜನವರಿ 29, 2023): ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಹಾಗೆ, ಭದ್ರತಾ ಪರಿಸ್ಥಿತಿ ನಿಜವಾಗಿಯೂ ಸುಧಾರಿಸಿದ್ದರೆ, ಜಮ್ಮುವಿನಿಂದ ಶ್ರೀನಗರಕ್ಕೆ ಪಾದಯಾತ್ರೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಈ ವಾರದ ಆರಂಭದಲ್ಲಿ ಭದ್ರತಾ ಲೋಪವನ್ನು ಆರೋಪಿಸಿ ರಾಹುಲ್‌ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ತಾತ್ಕಾಳಿಕವಾಗಿ ನಿಲ್ಲಿಸಬೇಕಾಯಿತು. ಇನ್ನು, ಪೊಲೀಸರು ಯಾವುದೇ ಭದ್ರತಾ ಲೋಪವನ್ನು ನಿರಾಕರಿಸಿದರೆ, ಕಾಂಗ್ರೆಸ್ ನಾಯಕ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಗೇಲಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ಸಾಮಾನ್ಯ ಘಟನೆಯಾಗಿದೆ ಎಂದ ರಾಹುಲ್‌ ಗಾಂಧಿ (Rahul Gandhi), "ಪರಿಸ್ಥಿತಿ ತುಂಬಾ ಉತ್ತಮವಾಗಿದ್ದರೆ ಬಿಜೆಪಿ (BJP) ಜನರು ಜಮ್ಮುವಿನಿಂದ (Jammu) ಲಾಲ್ ಚೌಕ್‌ಗೆ (Lal Chowk) ಏಕೆ ನಡೆದುಹೋಗುವುದಿಲ್ಲ..? ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ, ಪರಿಸ್ಥಿತಿ ತುಂಬಾ ಸುರಕ್ಷಿತವಾಗಿದ್ದರೆ ಅಮಿತ್ ಶಾ (Amit Shah) ಜಮ್ಮುವಿನಿಂದ ಲಾಲ್ ಚೌಕ್‌ಗೆ ಏಕೆ ನಡೆದುಕೊಂಡು ಹೋಗುವುದಿಲ್ಲ ಎಂದು ಶ್ರೀನಗರದಲ್ಲಿ (Srinagar) ಮಾಧ್ಯಮಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಾಳೆ ಶ್ರೀನಗರದಲ್ಲೇ ನಡೆಯಲಿದೆ.

ಇದನ್ನು ಓದಿ: ನಾಳೆ ಅಂತಿಮ ದಿನದ ಭಾರತ್ ಜೋಡೋ ಯಾತ್ರೆ : ಟಿಎಂಸಿ, ಎಸ್‌ಪಿ, ಟಿಡಿಪಿ ಸೇರಿ 9 ಪಕ್ಷಗಳ ಗೈರು..!

ರಾಹುಲ್‌ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದಾಗಿನಿಂದ ಅವರ ಭದ್ರತೆಯು ಸಾಕಷ್ಟು ಸುದ್ದಿಯಾಗುತ್ತಿದೆ. ಭದ್ರತಾ ಲೋಪದ ಕಾರಣ ನೀಡಿ ಶುಕ್ರವಾರ ಕಾಂಗ್ರೆಸ್ ಯಾತ್ರೆಯನ್ನು ಸ್ಥಗಿತಗೊಳಿಸಿತ್ತು. ಯಾತ್ರೆಯು ಬನಿಹಾಲ್‌ನಿಂದ ಖಾಜಿಗುಂಡ್‌ಗೆ ದಾಟುತ್ತಿದ್ದಂತೆ, ಅಂದರೆ ಅನಂತನಾಗ್‌ಗೆ 16 ಕಿ.ಮೀ ನಡೆದುಕೊಂಡು ಹೋಗುವಾಗ, ತೇವದ ವಾತಾವರಣ ಮತ್ತು 7 ಡಿಗ್ರಿ ಸೆಲ್ಸಿಯಸ್ ತಾಪಮಾನದ ಹೊರತಾಗಿಯೂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಅವರನ್ನು ಹಲವು ಜನರು ಮುತ್ತಿಗೆ ಹಾಕಿದರು.

ರಾಹುಲ್‌ ಗಾಂಧಿಯವರ ಸುತ್ತಲಿನ ಭದ್ರತಾ ಸಿಬ್ಬಂದಿ ಈ ಗುಂಪನ್ನು ನಿಯಂತ್ರಿಸಲು ವಿಫಲವಾಗಿದೆ ಮತ್ತು ಪಾದಯಾತ್ರೆ ನಿಲ್ಲಿಸಲು ಅವರಿಗೆ ಸಲಹೆ ನೀಡಿತು. ನಂತರ, ಜಮ್ಮು ಮತ್ತು ಕಾಶ್ಮೀರ ಆಡಳಿತದ ಭದ್ರತಾ ವ್ಯವಸ್ಥೆಗಳು ಸಂಪೂರ್ಣವಾಗಿ ಕುಸಿದಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಇದನ್ನೂ ಓದಿ: ರಾಹುಲ್‌ ಭಾರತ್ ಜೋಡೋ ಯಾತ್ರೆ ನಾಳೆ ಕಾಶ್ಮೀರದಲ್ಲಿ ಅಂತ್ಯ: ಭಾರಿ ಭದ್ರತೆ

ಆದರೆ, ಫೂಲ್‌ ಪ್ರೂಫ್‌ ಭದ್ರತೆ ಒದಗಿಸುತ್ತಿರುವುದಾಗಿ  ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಯಾವುದೇ ಭದ್ರತಾ ಲೋಪವಿಲ್ಲ. ನಾವು ಫೂಲ್‌ ಪ್ರೂಫ್‌ ಭದ್ರತೆಯನ್ನು ಒದಗಿಸುತ್ತೇವೆ. ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಮತ್ತು ಜನಸಂದಣಿಯನ್ನು ಮಾತ್ರ ಯಾತ್ರೆಯ ಮಾರ್ಗದ ಕಡೆಗೆ ಹಾಗೂ ಗುಂಪಿನ ಒಳಗೆ ಅನುಮತಿಸಲಾಗಿದೆ ಎಂದು ಪೊಲೀಸರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ರಾಹುಲ್‌ ಗಾಂಧಿ ಆರೋಪಗಳನ್ನು ತಳ್ಳಿ ಹಾಕಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ರಾಹುಲ್ ಗಾಂಧಿ ಅವರು ಅನಿಯಂತ್ರಿತ ಆರೋಪಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳ ವಿರುದ್ಧ ಮಾಡಿರುವ ಹೇಳಿಕೆಗಳು ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ. ಬನಿಹಾಲ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆಗೆ ಸೇರುತ್ತಾರೆ ಎಂದು ಆಯೋಜಕರು ಪೊಲೀಸರಿಗೆ ಏಕೆ ತಿಳಿಸಲಿಲ್ಲ. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿಲ್ಲ ಮತ್ತು ಕಾಶ್ಮೀರ ಪೊಲೀಸರು ಅದನ್ನು ಒತ್ತಿ ಹೇಳಿದ್ದಾರೆ ಎಂದೂ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ತಿಳಿಸಿದ್ದಾರೆ. 

ಇದನ್ನೂ ಓದಿ: From the India gate ರಾಹುಲ್ ಯಾತ್ರೆ ಒಳಗೆ ರಾಜಕೀಯ, ರಾಜಸ್ಥಾನ ಬಿಜೆಪಿ ಮದ್ವೆ ಆಮಂತ್ರಣ ತಲೆನೋವು!

Follow Us:
Download App:
  • android
  • ios