ಸತತ 8ನೇ ದಿನವೂ ದೇಶದಲ್ಲಿ 25,000ಕ್ಕಿಂತ ಕಡಿಮೆ ಕೋವಿಡ್ ಕೇಸುಗಳು | ಒಟ್ಟು ಸಾವಿಗೀಡಾದವರ ಸಂಖ್ಯೆ 1,47,092ಕ್ಕೆ ಏರಿಕೆ
ನವದೆಹಲಿ(ಡಿ.26): ಭಾರತದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 23,067 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸತತ 8ನೇ ದಿನವೂ ದೇಶದಲ್ಲಿ 25,000ಕ್ಕಿಂತ ಕಡಿಮೆ ಕೋವಿಡ್ ಕೇಸುಗಳು ದಾಖಲಾಗಿವೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,01,46,845ಕ್ಕೆ ಏರಿಕೆಯಾಗಿದೆ. ಇನ್ನು ಶುಕ್ರವಾರ 336 ಮಂದಿ ಸೋಂಕಿಗೆ ಬಲಿಯಾಗಿದ್ದು, ದೇಶದಲ್ಲಿ ಒಟ್ಟು ಸಾವಿಗೀಡಾದವರ ಸಂಖ್ಯೆ 1,47,092ಕ್ಕೆ ಏರಿಕೆಯಾಗಿದೆ.
ತುರ್ತು ಸಾಲ ಆ್ಯಪ್ ದಂಧೆ: ಚೀನಿ ಸೇರಿ ನಾಲ್ವರ ಬಂಧನ
ಒಟ್ಟು ಸೋಂಕಿತರ ಪೈಕಿ ಈಗಾಗಲೇ 97 ಲಕ್ಷ ಮಂದಿ ಗುಣಮುಖರಾಗಿದ್ದು, ಸಕ್ರಿಯ ಕೊರೋನಾ ಸೋಂಕಿತರ ಸಂಖ್ಯೆ ಕೇವಲ 2.81 ಲಕ್ಷ ದಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಧಾರಾವಿಯಲ್ಲಿ ಶೂನ್ಯ ಕೊರೋನಾ ಕೇಸ್: ಏ.1ರ ಬಳಿಕ ಮೊದಲು
ಏಷ್ಯಾದ ಅತಿದೊಡ್ಡ ಕೊಳಗೇರಿ ಎಂಬ ಅಪಕೀರ್ತಿಗೆ ಪಾತ್ರವಾದ ಮುಂಬೈನ ಧಾರಾವಿಯಲ್ಲಿ ಕಳೆದ 24 ಗಂಟೆಯಲ್ಲಿ ಒಂದೂ ಹೊಸ ಕೊರೋನಾ ಪ್ರಕರಣ ದೃಢಪಟ್ಟಿಲ್ಲ. ಈ ಬಗ್ಗೆ ಭಾನುವಾರ ಮಾತನಾಡಿದ ಪಾಲಿಕೆ ಅಧಿಕಾರಿಗಳು, ‘ಧಾರಾವಿಯಲ್ಲಿ ಕೊರೋನಾ ಕಾಣಿಸಿಕೊಂಡ ಏಪ್ರಿಲ್ 1ರ ಬಳಿಕ 24 ಗಂಟೆಗಳ ಅವಧಿಯಲ್ಲಿ ಒಂದೇ ಒಂದು ಕೇಸ್ ದಾಖಲಾಗದಿರುವುದು ಇದೇ ಮೊದಲು’ ಎಂದಿದ್ದಾರೆ. ಈ ಮೂಲಕ ಧಾರಾವಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3788ಕ್ಕೆ ಸೀಮಿತವಾಗಿದ್ದು, ಈ ಪೈಕಿ 3464 ಮಂದಿ ಕೊರೋನಾದಿಂದ ಪಾರಾಗಿದ್ದಾರೆ. 12 ಮಂದಿ ಸಕ್ರಿಯ ಸೋಂಕಿತರ ಪೈಕಿ 8 ಮಂದಿ ಹೋಮ್ ಕ್ವಾರಂಟೈನ್ ಮತ್ತು ನಾಲ್ವರು ಕೊರೋನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 26, 2020, 12:27 PM IST