ರಾಜೀವ್ ಧವನ್ ವಜಾಗೊಳಿಸಿದ ಜಮೈತ್: ನಾನ್ಸೆನ್ಸ್ ಎಂದ ವಕೀಲ!

ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ವಜಾ| ರಾಜೀವ್ ಧಬನ್ ವಜಾಗೊಳಿಸಿದ ಜಮೈತ್ ಉಲೆಮಾ-ಇ-ಹಿಂದ್| ಅನಾರೋಗ್ಯದ ಕಾರಣ ನೀಡಿ ರಾಜೀವ್ ಧವನಾ ವಕಾಲತ್ತಿನಿಂದ ವಜಾ| ಮೇಲ್ಮನವಿ ಅರ್ಜಿಯ ವಕಾಲತ್ತು ನಡೆಸಲಿರುವ ಏಜಾಜ್ ಮಕ್ಬೂಲ್| ಜಮೈತ್ ಉಲೆಮಾ-ಇ-ಹಿಂದ್ ನಡೆ ಟೀಕಿಸಿದ ರಾಜೀವ್ ಧವನ್| ರಾಮಜನ್ಮಭೂಮಿಯ ನಕ್ಷೆಯನ್ನು ಹರಿದು ಹಾಕಿ ಸುದ್ದಿಯಾಗಿದ್ದ ರಾಜೀವ್ ಧವನ್|

Lawyer Rajeev Dhavan Sacked By Jamait From Ayodhya Case

ನವದೆಹಲಿ(ಡಿ.03): ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಬರಿ ಮಸೀದಿ ಪರ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣ ವಕಾಲತ್ತಿನಿಂದ ವಜಾಗೊಳಿಸಲಾಗಿದೆ.

ಪ್ರಕರಣದ ವಕಾಲತ್ತಿನಿಂದ ರಾಜೀವ್ ಧವನ್ ಅವರನ್ನು ವಜಾಗೊಳಿಸಿ ಜಮೈತ್ ಉಮೆಲಾ-ಇ-ಹಿಂದ್ ಆದೇಶ ನೀಡಿದೆ. ಸುಪ್ರೀಂಕೋರ್ಟ್’ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ವಕೀಲ ಏಜಾಜ್ ಮಕ್ಬೂಲ್ ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.

ಅನಾರೋಗ್ಯ ಕಾರಣಕ್ಕೆ ರಾಜೀವ್ ಧವನ್ ಅವರನ್ನು ಪ್ರಕರಣದ ವಕಾಲತ್ತಿನಿಂದ ಕೈಬಿಡಲಾಗಿದೆ ಎಂದು ಏಜಾಜ್ ಮಕ್ಬೂಲ್ ಸ್ಪಷ್ಟಪಡಿಸಿದ್ದಾರೆ. ಆದರೆ ಜಮೈತ್ ಉಲೆಮಾ-ಇ-ಹಿಂದ್ ನಡೆಯನ್ನು ರಾಜೀವ್ ಧವನ್ ಟೀಕಿಸಿದ್ದಾರೆ.

ಪುಸ್ತಕ ಹರಿದ ಸುನ್ನಿ ವಕ್ಫ್ ಬೋರ್ಡ್ ವಕೀಲ: ಸಿಜೆಐ ಎಚ್ಚರಿಕೆಯಿಂದ ಒದ್ದಾಡಿದರು ವಿಲವಿಲ!

ಜಮೈತ್ ನೀಡಿರುವ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಜೀವ್, ದೀರ್ಘ ಕಾಲ ಪ್ರಕರಣದ ವಕಾಲತ್ತು ನಡೆಸಿದ್ದ  ತಮ್ಮನ್ನು ಈ ರೀತಿ ಅವಮಾನಿಸಿದ್ದು ಸರಿಯಲ್ಲ ಎಂದು ಫೇಸ್’ಬುಕ್ ಪೋಸ್ಟ್ ಮಾಡಿದ್ದಾರೆ.

ಅಯೋಧ್ಯೆ ವಿವಾದ ಸಂಬಂಧ ಅ.16ರಂದು ಸುಪ್ರೀಂಕೋರ್ಟ್ ನಲ್ಲಿ ನಡೆದ ಅಂತಿಮ ವಿಚಾರಣೆ ವೇಳೆ, ರಾಮಜನ್ಮಭೂಮಿಯ ನಕ್ಷೆಯನ್ನು ರಾಜೀವ್ ಧವನ್ ಹರಿದುಹಾಕಿ ವಿವಾದ ಸೃಷ್ಟಿಸಿದ್ದರು.

ಶಾಂತಿ ಭಂಗ ಮಾಡೋರು ಹಿಂದೂಗಳಷ್ಟೇ, ಮುಸ್ಲಿಮರಲ್ಲ: ರಾಜೀವ್ ಧವನ್!

ಅಲ್ಲದೇ ಸಮಾಜದಲ್ಲಿ ಕೋಮುದಂಗೆಗಳು  ಸಂಭವಿಸಲು ಹಿಂದೂಗಳೇ ಕಾರಣ ಹೊರತು ಮುಸ್ಲಿಮರಲ್ಲ ಎಂದು ರಾಜೀವ್ ಧವನಬ್ ಇತ್ತಿಚೀಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Latest Videos
Follow Us:
Download App:
  • android
  • ios