Asianet Suvarna News Asianet Suvarna News

ಮಲಗಿದ ಭಂಗಿಯಲ್ಲಿ ವಕೀಲ ಸುಪ್ರೀಂ ವಿಚಾರಣೆಗೆ ಹಾಜರು!

ಮಲಗಿದ ಭಂಗಿಯಲ್ಲಿ ವಕೀಲ ಸುಪ್ರೀಂ ವಿಚಾರಣೆಗೆ ಹಾಜರು!| ವಕೀಲಗೆ ಸುಪ್ರೀಂ ಕೋರ್ಟ್‌ ತರಾಟೆ| ತಪ್ಪು ಅರಿವಾಗಿ ಕ್ಷಮೆ ಯಾಚಿಸಿದ ನ್ಯಾಯವಾದಿ

Lawyer Attend Supreme Court Hearing In Sleeping Mode
Author
Bangalore, First Published Jun 21, 2020, 11:13 AM IST

ನವದೆಹಲಿ(ಜೂ.21): ಇತ್ತೀಚೆಗೆ ವಕೀಲರೊಬ್ಬರು ಬನಿಯನ್‌ ಧರಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ಗೆ ಹಾಜರಾಗಿ ನ್ಯಾಯಾಧೀಶರಿಂದ ಬೈಸಿಕೊಂಡಿದ್ದಾಯಿತು. ಈಗ ಇನ್ನೊಬ್ಬ ವಕೀಲರು ಟೀ ಶರ್ಟ್‌ ಧರಿಸಿ ಮಂಚದ ಮೇಲೆ ಮಲಗಿಕೊಂಡು ಹಾಜರಾಗಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿದ್ದಾರೆ. ‘ಕನಿಷ್ಠ ಶಿಸ್ತು-ಶಿಷ್ಟಾಚಾರ ಪಾಲಿಸಿ’ ಎಂದು ವಕೀಲರಿಗೆ ಕೋರ್ಟ್‌ ಎಚ್ಚರಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಈಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಸುತ್ತಿದೆ. ಇಂಥದ್ದೇ ಒಂದು ಕಲಾಪವನ್ನು ನ್ಯಾ| ರವೀಂದ್ರ ಭಟ್‌ ನಡೆಸುತ್ತಿದ್ದರು. ಈ ವೇಳೆ ವಕೀಲರೊಬ್ಬರು ಟೀಶರ್ಟ್‌ ಧರಿಸಿ ಹಾಸಿಗೆಯ ಮೇಲೆ ಮಲಗಿ ಹಾಜರಾಗಿದ್ದು ಕಂಡುಬಂತು.

ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!

ಇದರಿಂದ ಕ್ರುದ್ಧರಾದ ನ್ಯಾ| ಭಟ್‌, ‘ಕೋರ್ಟ್‌ಗೆ ಈ ರೀತಿ ಹಾಜರಾಗುವುದು ಸೂಕ್ತವಲ್ಲ. ಕನಿಷ್ಠ ಸಂಹಿತೆಯನ್ನು ಪಾಲಿಸಬೇಕು. ಈ ರೀತಿಯ ವಸ್ತ್ರಧಾರಣೆಯನ್ನು ಖಾಸಗಿಯಾಗಿ ಸಹಿಸಿಕೊಳ್ಳಬಹುದು. ಆದರೆ ಇಲ್ಲಿ ಸಹಿಸಿಕೊಳ್ಳಲಾಗದು’ ಎಂದರು.

ಬಳಿಕ ತಪ್ಪಿನ ಅರಿವಾಗಿ ವಕೀಲರು ಕ್ಷಮೆ ಕೋರಿದರು. ಇದನ್ನು ನ್ಯಾ| ಭಟ್‌ ಒಪ್ಪಿಕೊಂಡರು.

Follow Us:
Download App:
  • android
  • ios