Asianet Suvarna News Asianet Suvarna News

ನಡೆಯಲಿಲ್ಲ ಆಟ, ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ!

ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ| ಕುಟುಂಬವನ್ನು ಕೊನೇ ಬಾರಿ ಭೇಟಿ ಮಾಡುವಂತೆ ದೋಷಿಗಳಿಗೆ ಸೂಚನೆ| ನೇಣುಗಾರನನ್ನು 2 ದಿನ ಮೊದಲೇ ಕಳಿಸುವಂತೆ ಉ.ಪ್ರ. ಸರ್ಕಾರಕ್ಕೆ ಪತ್ರ

Last Preparations Starts At Tihar Jail For Hanging Of All 4 Convicts Of Nirbhaya Case
Author
Bangalore, First Published Feb 23, 2020, 9:42 AM IST
  • Facebook
  • Twitter
  • Whatsapp

ನವದೆಹಲಿ[ಫೆ.: ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ದೋಷಿಗಳ ಮರಣದಂಡನೆ ಶಿಕ್ಷೆ ಜಾರಿಗೆ ದಿನಗಣನೆ ಆರಂಭವಾಗಿದೆ. ಮಾಚ್‌ರ್‍ 3ರಂದು ಎಲ್ಲ ನಾಲ್ವರೂ ದೋಷಿಗಳು ಗಲ್ಲಿಗೇರಲಿದ್ದು, ಈ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಲ್ಲಿ ನೇಣು ಶಿಕ್ಷೆ ಜಾರಿಯ ಅಂತಿಮ ಸಿದ್ಧತೆಗಳು ಆರಂಭವಾಗಿವೆ.

ಪ್ರಕರಣದ ನಾಲ್ವರು ದೋಷಿಗಳ ಪೈಕಿ ಇಬ್ಬರಾದ ಅಕ್ಷಯ್‌ ಹಾಗೂ ವಿನಯ್‌ ಶರ್ಮಾ ಅವರಿಗೆ ‘ನಿಮ್ಮ ಕುಟುಂಬಸ್ಥರನ್ನು ಕೊನೆಯ ಸಲ ಭೇಟಿ ಮಾಡಿ’ ಎಂದು ಪತ್ರ ಮುಖೇನ ಸೂಚಿಸಲಾಗಿದೆ. ಇನ್ನುಳಿದ ಇಬ್ಬರು ದೋಷಿಗಳಾದ ಮುಕೇಶ್‌ ಹಾಗೂ ಪವನ್‌ ಅವರು ಫೆಬ್ರವರಿ 1ಕ್ಕಿಂತ ಮೊದಲೇ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಈ ಸೂಚನೆ ನೀಡಿಲ್ಲ ಎಂದು ಮೂಲಗಳು ಹೇಳಿವೆ.

ಏತನ್ಮಧ್ಯೆ, ‘ನೇಣುಗಾರನನ್ನು 2 ದಿನ ಮೊದಲೇ ತಿಹಾರ್‌ಗೆ ಕಳಿಸಿಕೊಡಿ’ ಎಂದು ಉತ್ತರ ಪ್ರದೇಶ ಬಂದೀಖಾನೆ ಇಲಾಖೆಗೆ ತಿಹಾರ್‌ ಜೈಲಧಿಕಾರಿಗಳು ಪತ್ರ ಬರೆದಿದ್ದಾರೆ. ಮೇರಠ್‌ನ ನೇಣುಗಾರ ಪವನ್‌ ಕುಮಾರ್‌ ಜಲ್ಲಾದ್‌ನನ್ನು ಈಗಾಗಲೇ ನೇಣು ಹಾಕಲು ತಿಹಾರ್‌ ಜೈಲು ನೇಮಕ ಮಾಡಿಕೊಂಡಿದೆ.

ಈಗಾಗಲೇ ನಿರ್ಭಯಾ ದೋಷಿಗಳು 2 ಡೆತ್‌ ವಾರಂಟ್‌ಗಳನ್ನು ತಪ್ಪಿಸಿಕೊಂಡಿದ್ದಾರೆ. ಮೊದಲು ಜನವರಿ 22ರ ದಿನಾಂಕ ನಿಗದಿ ಮಾಡಲಾಗಿತ್ತು. ನಂತರ ಅದು ಫೆಬ್ರವರಿ 1ಕ್ಕೆ ಮುಂದೂಡಿಕೆ ಆಗಿತ್ತು. ಇದೀಗ ಮಾಚ್‌ರ್‍ 3ಕ್ಕೆ ನಿಗದಿಯಾಗಿದೆ.

ಫೆಬ್ರವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios