ರಾತ್ರಿ 10 ಗಂಟೆಗೆ ಕರೆ ಮಾಡಿ ತನಗಾಗುತ್ತಿರುವ ಮಾನಿಸಿಕ ದೈಹಿಕ ಹಿಂಸೆ ಕುರಿತು ತಾಯಿಗೆ ಹೇಳಿದ್ದಾಳೆ. ಅಷ್ಟರಲ್ಲೇ ಕೋಣೆಗೆ ಗಂಡ ಆಗಮಿಸಿದ ಕಾರಣ ಫೋನ್ ಕಟ್ ಮಾಡಿದ್ದಾಳೆ. 10 ನಿಮಿಷದಲ್ಲೇ ನಡೆದಿದ್ದೇನು?
ಭೋಪಾಲ್ (ಮೇ.15) ಗುರು ಹಿರಿಯರು ನೋಡಿ ನಿಶ್ಚಯಿಸಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಮಗಳಿಗೆ ಯಾವುದೇ ಕೊರತೆ ಬರದಂತೆ, ಕಡಿಮೆಯಾಗದಂತೆ ಮದುವೆ ಮಾಡಿದ್ದಾರೆ. ಆದರೆ ಮದುವೆಯಾದ ದಿನದಿಂದ ಗಂಡನ ಮನೆಯಲ್ಲಿ ಮಾನಸಿಕ ಹಿಂಸೆ, ಕಿರುಕುಳ, ದೈಹಿಕ ಹಿಂಸೆಯಲ್ಲಿ ದಿನ ದೂಡಲು ಆರಂಭಿಸಿದ್ದಾಳೆ. ಅತ್ತ ಪೋಷಕರಿಗೆ ಹೇಳಲು ಆಗದೇ, ಇತ್ತ ಪ್ರತಿಭಟಿಸಲು ಆಗದೆ ತೀವ್ರವಾಗಿ ನೊಂದು ಹೋಗಿದ್ದಾಳೆ. ಕೊನೆಗೆ ಧೈರ್ಯ ಮಾಡಿ ತಾಯಿಗೆ ಕರೆ ಮಾಡಿ ತನಗಾಗುತ್ತಿರುವ ಹಿಂಸೆ ಕುರಿತು ಕೆಲ ಮಾತುಗಳನ್ನು ಹೇಳುತ್ತಿದ್ದಂತೆ ಕೋಣೆಗೆ ಗಂಡ ಆಗಮಿಸಿದ ಕಾರಣ ಕಾಲ್ ಕಟ್ ಮಾಡಿದ್ದಾಳೆ. ಬಳಿಕ ಕೇವಲ 10 ರಿಂದ 15 ನಿಮಿಷದಲ್ಲಿ ಯುವತಿ ದುರಂತ ಅಂತ್ಯಕಂಡಿದ್ದಾಳೆ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ಇದೀಗ ಯವತಿ ಪೋಷಕರು ಗಂಭೀರ ಆರೋಪಗಳನ್ನು ಮಾಡಿದ್ದು ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ನೋಯ್ಡಾ ಮೂಲಕ ತ್ವಿಶಾ ಶರ್ಮಾ ಭೋಪಾಲ ಮೂಲದ ವಕೀಲ ಸಮರ್ಥ್ ಸಿಂಗ್ ಜೊತೆ ಐದು ತಿಂಗಳ ಹಿಂದೆ ನಡೆದಿತ್ತು. 33 ವರ್ಷದ ತ್ವಿಶಾ ಶರ್ಮಾ ಇದೀಗ ಬದುಕು ಅಂತ್ಯಗೊಳಿಸಿದ್ದಾಳೆ. ತ್ವಿಶಾ ಶರ್ಮಾ ಪೋಷಕರು ಕಂಗಾಲಾಗಿದ್ದಾರೆ. ಕಣ್ಣೀರಿಡುತ್ತಲೇ ಅಸ್ವಸ್ಥಗೊಂಡಿದ್ದಾರೆ.
ಕೊನೆಯ ಫೋನ್ ಕರೆ
ತ್ವಿಶಾ ಕುಟುಂಬಸ್ಥರು ಆಕೆಯ ಕೊನೆಯ ಕ್ಷಣಗಳ ಕುರಿತು ಹೇಳಿದ್ದಾರೆ. ರಾತ್ರಿ 10.05ಕ್ಕೆ ತ್ವಿಶಾ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಕಳೆದ ಐದು ತಿಂಗಳಿನಿಂದ ತಾನು ಅನುಭವಿಸುತ್ತಿರುವ ಹಿಂಸೆ, ಮಾನಸಿಕ ಯಾತನೆ, ದೈಹಿಕ ಹಲ್ಲೆ ಕುರಿತು ಹೇಳಿಕೊಂಡಿದ್ದಾಳೆ. ಒಂದು ಕ್ಷಣವೂ ತಾನು ಇಲ್ಲಿ ಸಂತೋಷವಾಗಿಲ್ಲ ಎಂದಿದ್ದಾಳೆ. ಅಷ್ಟರಲ್ಲೇ ಗಂಡ ಕೋಣೆಗೆ ಆಗಮಿಸಿದ ಕಾರಣ ಫೋನ್ ಕಾಲ್ ಕಟ್ ಮಾಡಿದ್ದಾಳೆ.
ಮಗಳ ಮಾತು ಕೇಳಿ ತಾಯಿಗೆ ಆಘಾತವಾಗಿದೆ. ಪತಿ ಹಾಗೂ ಮಗನ ಬಳಿ ಹೇಳಿದ್ದಾರೆ. ಮಗಳಿಗೆ ಸಮಸ್ಯೆಯಾಗಿದೆ. ತಕ್ಷಣವೇ ಏನಾದರು ಮಾಡಬೇಕು ಎಂದಿದ್ದಾಳೆ. ಹೀಗಾಗಿ ತ್ವಿಶಾ ಪೋಷಕರು ತ್ವಿಶಾ ಗಂಡ ಹಾಗೂ ಆತನ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ತ್ವಿಶಾ ಸಹೋದರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಕ್ಷಣವೇ ತ್ವಿಶಾ ಗಂಡನ ಮನೆಗೆ ಕರೆ ಮಾಡಿದ್ದಾರೆ. ಆದರೆ ಯಾರೂ ಕೂಡ ಕರೆ ಸ್ವೀಕರಿಸಲಿಲ್ಲ. 10.15ರ ವೇಳೆಗೆ ತ್ವಿಶಾಳ ಮಾವ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಈ ವೇಳೆ ತಕ್ಷಣವೇ ತ್ವಿಶಾಗೆ ಏನಾಗಿದೆ, ಆಕೆ ಹೇಗಿದ್ದಾಳೆ, ಪರಿಶೀಲಿಸಿ. ಆಕೆ ಏನು ಮಾಡುತ್ತಿದ್ದಾಳೆ ಎಂದು ನೋಡಲು ಸೂಚಿಸಿದ್ದಾರೆ. ಆಕೆಯ ಫೋನ್ ಕಾಲ್ ನಮ್ಮನ್ನು ಆತಂಕಕ್ಕೀಡುಮಾಡಿದೆ ಎಂದಿದ್ದಾರೆ.
10.20ರ ವೇಳೆಗ ತ್ವಿಶಾ ಗಂಡನ ಮನೆಯಿಂದ ಫೋನ್ ಬಂದಿದೆ. ತ್ವಿಶಾ ಉಸಿರಾಡುತ್ತಿಲ್ಲ. ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ ಎಂದು ಫೋನ್ ಕಟ್ ಮಾಡಿದ್ದಾರೆ. ಆಸ್ಪತ್ರೆಗೆಯಲ್ಲಿ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲು ಮಾಡಿದ ಸಮಯ 11.30. ಮನೆಯಿಂದ 10 ನಿಮಿಷ ದೂರದಲ್ಲಿ ಆಸ್ಪತ್ರೆ ಇದೆ. ಆಧರೂ ಇಷ್ಟು ವಿಳಂಬ ಮಾಡಿ ಮಗಳನ್ನು ಹಾಗೇ ನರಳಾಡಿ ಸಾಯಲು ಬಿಟ್ಟಿದ್ದಾರೆ. ತ್ವಿಶಾಳ ಗಂಡ, ಆಕೆಯ ಅತ್ತೆ ಮಾವ ಹಾಗು ಕುಟುಂಬಸ್ಥರು ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ತ್ವಿಶಾ ಪೋಷಕರು ಆರೋಪಿಸಿದ್ದಾರೆ.


