ಲ್ಯಾಂಡ್‌ಲೈನ್‌ ಫೋನ್‌ನಿಂದ ಮೊಬೈಲ್‌ಗೆ ಕರೆ ಮಾಡುವವರಿಗೆ ಹೊಸ ರೂಲ್ಸ್ | ಈ ಕ್ರಮದಿಂದ ಸುಮಾರು 250 ಕೋಟಿಯಷ್ಟು ಹೊಸ ಮೊಬೈಲ್‌ ಸಂಖ್ಯೆ ಸೃಷ್ಟಿ

ನವದೆಹಲಿ(ಜ.15): ಲ್ಯಾಂಡ್‌ಲೈನ್‌ ಫೋನ್‌ನಿಂದ ಮೊಬೈಲ್‌ಗೆ ಕರೆ ಮಾಡಬಯಸುವವರು ಮೊಬೈಲ್‌ ಸಂಖ್ಯೆಗೂ ಮುನ್ನ ‘0’ ಒತ್ತುವ ನಿಯಮಾವಳಿ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.

ಈ ಕುರಿತಾಗಿ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ತಮ್ಮ ಗ್ರಾಹಕರಿಗೆ ಸಂದೇಶ ರವಾನಿಸುವ ಮೂಲಕ ಏರ್‌ಟೆಲ್‌ ಮತ್ತು ರಿಲಯನ್ಸ್‌ ಜಿಯೋ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಜಾಗೃತಿ ಮೂಡಿಸುತ್ತಿವೆ.

ಲೋನ್ ಆ್ಯಪ್‌ಗಳಿಗೆ ಕಡಿವಾಣ: ಆರ್‌ಬಿಐನಿಂದ ಸಮಿತಿ ರಚನೆ

ಈ ಕ್ರಮದಿಂದ ಸುಮಾರು 250 ಕೋಟಿಯಷ್ಟು ಹೊಸ ಮೊಬೈಲ್‌ ಸಂಖ್ಯೆಯನ್ನು ಸೃಷ್ಟಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಈ ಕ್ರಮವನ್ನು ಜನವರಿ 15ರಿಂದಲೇ ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

2021 ರ ಜನವರಿ 15 ರಿಂದ '0' ಡಯಲ್ ಮಾಡಬೇಕಾಗಿದೆ ಎಂದು ನವೆಂಬರ್‌ನಲ್ಲಿ ಸಂವಹನ ಸಚಿವಾಲಯ ತಿಳಿಸಿತ್ತು. ಎಲ್ಲಾ ಲ್ಯಾಂಡ್‌ಲೈನ್ ಸಂಖ್ಯೆಗಳಿಗೆ ಮೊಬೈಲ್ ಸಂಖ್ಯೆಗಳನ್ನು ಶೂನ್ಯ ಪೂರ್ವಪ್ರತ್ಯಯದೊಂದಿಗೆ ಡಯಲ್ ಮಾಡುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಪ್ರಸ್ತಾಪವನ್ನು ಡಿಒಟಿ ಒಪ್ಪಿಕೊಂಡಿತ್ತು.