ಪಾರ್ಟಿಯೊಂದರಲ್ಲಿ ಉದ್ಯಮಿ ವಿಜಯ್ ಮಲ್ಯರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ‘ನಾವಿಬ್ಬರೂ ಭಾರತದ ಅತಿದೊಡ್ಡ ದೇಶಭ್ರಷ್ಟರು’ ಎಂದು ಕುಹಕ ಮಾಡಿ ಹೇಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಐಪಿಎಲ್ ಸಂಸ್ಥಾಪಕ ಹಾಗೂ ದೇಶಭ್ರಷ್ಟ ಲಲಿತ್ ಮೋದಿ ಸೋಮವಾರ ಕ್ಷಮೆ ಕೋರಿದ್ದಾರೆ.
ಲಂಡನ್ : ಪಾರ್ಟಿಯೊಂದರಲ್ಲಿ ಉದ್ಯಮಿ ವಿಜಯ್ ಮಲ್ಯರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ‘ನಾವಿಬ್ಬರೂ ಭಾರತದ ಅತಿದೊಡ್ಡ ದೇಶಭ್ರಷ್ಟರು’ ಎಂದು ಕುಹಕ ಮಾಡಿ ಹೇಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಐಪಿಎಲ್ ಸಂಸ್ಥಾಪಕ ಹಾಗೂ ದೇಶಭ್ರಷ್ಟ ಲಲಿತ್ ಮೋದಿ ಸೋಮವಾರ ಕ್ಷಮೆ ಕೋರಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ
‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಆ ವಿಡಿಯೋದಿಂದ ನಾನು ಯಾರದ್ದೇ ಮನಸ್ಸು ನೋಯಿಸಿದ್ದರೆ ಅದರಲ್ಲೂ ಮುಖ್ಯವಾಗಿ ನಾನು ಅತೀ ಹೆಚ್ಚು ಗೌರವಿಸುವ ಭಾರತ ಸರ್ಕಾರದ ಮನಸ್ಸು ನೋಯಿಸಿದ್ದರೆ ಕ್ಷಮೆ ಕೋರುತ್ತೇನೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮಲ್ಯ ಅವರ 70ನೇ ಹುಟ್ಟುಹಬ್ಬದ ಹಿನ್ನೆಲೆ ಪಾರ್ಟಿ
ಮಲ್ಯ ಅವರ 70ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದ ಲಲಿತ್ ಮೋದಿ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಮಲ್ಯ ಹಾಗೂ ಮಹಿಳೆಯೊಬ್ಬಳನ್ನು ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ‘ನಾವಿಬ್ಬರೂ ಭಾರತದ ಅತಿದೊಡ್ಡ ದೇಶಭ್ರಷ್ಟರು’ ಎಂದು ತಮಾಷೆಯಾಗಿ ಹೇಳಿದ್ದರು. ಅದಕ್ಕೆ ಮಲ್ಯ ಹಾಗೂ ಆ ಮಹಿಳೆ ನಕ್ಕಿದ್ದರು. ಈ ವಿಡಿಯೋ ಸಾರ್ವಜನಿಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಮಲ್ಯ, ಮೋದಿಯ ಗಡೀಪಾರಿಗೆ ಯಗತ್ನಿಸಲಾಗುತ್ತಿದೆ ಎಂದು ಭಾರತ ಸರ್ಕಾರ ಹೇಳಿತ್ತು. ಇದರ ಬೆನ್ನಲ್ಲೇ ಲಲಿತ್ ಮೋದಿ ಕ್ಷಮಾಪಣೆ ಕೋರಿದ್ದಾರೆ.


