Asianet Suvarna News Asianet Suvarna News

ಲಖೀಂಪುರ ಹಿಂಸಾಚಾರ: ಪ್ರಿಯಾಂಕಾ ಗಾಂಧಿ ಅರೆಸ್ಟ್, 11 ಮಂದಿ ವಿರುದ್ಧ FIR!

* ಲಖೀಂಪುರ ಖೀರಿ ಹಿಂಸಾಚಾರದ ವಿರುದ್ಧ ಭಾರೀ ಆಕ್ರೋಶ

* 30 ಗಂಟೆ ಗೃಹಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಅರೆಸ್ಟ್

* ಶಾಂತಿಭಂಗ ಆರೋಪದಡಿ 11 ಮಂದಿ ಕಾಂಗ್ರೆಸಿಗರ ವಿರುದ್ಧ ಎಫ್‌ಐಆರ್

Lakhimpur Kheri violence Priyanka Gandhi Vadra 10 others booked for disturbing peace pod
Author
Bangalore, First Published Oct 5, 2021, 4:16 PM IST
  • Facebook
  • Twitter
  • Whatsapp

ಲಖೀಂಪುರ(ಅ.05): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು(Priyanka gandhi) ಯುಪಿಯಲ್ಲಿ ಅಧಿಕೃತವಾಗಿ ಬಂಧಿಸಲಾಗಿದೆ. ಶಾಂತಿ ಕದಡಿದ ಆರೋಪದಡಿ ಪ್ರಿಯಾಂಕಾ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ. ಸೋಮವಾರದಿಂದ ಅವರು ಪೊಲೀಸರ ವಶದಲ್ಲಿದ್ದರು ಎಂಬುವುದು ಉಲ್ಲೇಖನೀಯ. ಪ್ರಿಯಾಂಕಾ ಗಾಂಧಿ ಲಖೀಂಪುರ ಹಿಂಸಾಚಾರಕ್ಕೊಳಗಾದ(Lakhimpur Kheri Violence) ರೈತರನ್ನು ಬೇಟಿಯಾಗಲು ಯತ್ನಿಸಿದ್ದರು. ಆದರೆ ಈ ನಡುವೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಇದಾದ ಬಳಿಕ ಆಕ್ರೋಶಗೊಂಡಿದ್ದ ಕಾಂಗ್ರೆಸಿಗರು ಆಂದೋಲನ ಆರಂಭಿಸಿದ್ದರು. ಆದರೀಗ 30 ಗಂಟೆಗಳ ಕಸ್ಟಡಿ ಬಳಿಕ ಅವರನ್ನು ಬಂಧಿಸಲಾಗಿದೆ.

"

ಪ್ರಿಯಾಂಕಾ ಸೇರಿ 11 ಕಾಂಗ್ರೆಸಿಗರ ವಿರುದ್ಧ ಎಫ್‌ಐಆರ್‌

ಪ್ರಿಯಾಂಕಾ ಗಾಂಧಿ, ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ, ರಾಜ್ಯಾಧ್ಯಕ್ಷ ಅಜಯ್ ಕುಮಾರ್ ಲಲ್ಲು ಸೇರಿದಂತೆ 11 ಜನರ ಕಾಂಗ್ರೆಸಿಗರ ವಿರುದ್ಧ ಯುಪಿ ಸರ್ಕಾರ ಕ್ರಮ ಕೈಗೊಂಡಿದೆ. ಇವರೆಲ್ಲರ ವಿರುದ್ಧ ಸೀತಾಪುರದ ಹರಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಸೋಮವಾರದಿಂದ ಸೀತಾಪುರ ಅತಿಥಿ ಗೃಹದಲ್ಲಿ ಬಂಧನ

ಪ್ರಿಯಾಂಕಾ ಗಾಂಧಿಯನ್ನು ಸೋಮವಾರ ಲಖೀಂಪುರ ಖೇರಿಗೆ ಹೋಗುತ್ತಿದ್ದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿfದರು. ಅಲ್ಲಿಂದ ಅವರನ್ನು ಸೀತಾಪುರ ಜಿಲ್ಲೆಯ ಪಿಎಸಿ ಅತಿಥಿ ಗೃಹದಲ್ಲಿ ಇರಿಸಲಾಗಿತ್ತು. ಪೊಲೀಸರು ಅವರನ್ನು ಸುಮಾರು 30 ಗಂಟೆಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿ ಇರಿಸಿದ್ದರು. ಮಂಗಳವಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.

ಮೋದಿಯನ್ನು ಪ್ರಶ್ನಿಸಿದ್ದ ಪ್ರಿಯಾಂಕಾ

ಲಖಿಂಪುರ್ ಖೇರಿಯಲ್ಲಿ ರೈತರನ್ನು ತುಳಿದ ಪ್ರಕರಣದಲ್ಲಿ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದರು. ಅವರು ಮಂಗಳವಾರ ವೀಡಿಯೊವನ್ನು ಬಿಡುಗಡೆ ಮಾಡಿದ್ದರು ಮತ್ತು ಲಖೀಂಪುರ ಖೇರಿಯಲ್ಲಿ ಆರೋಪಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಮಗ ಆಶಿಶ್ ಮಿಶ್ರಾ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಕೇಳಿದ್ದರು. ಗೃಹ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಏಕೆ ವಜಾ ಮಾಡಲಿಲ್ಲ? ಲಖೀಂಪುತರ ಖೇರಿಯಲ್ಲಿರುವ ಸಂತ್ರಸ್ತರ ಕುಟುಂಬಕ್ಕೆ ಪಿಎಂ ಮೋದಿ ಏಕೆ ಇನ್ನೂ ಭೇಟಿ ನೀಡಿಲ್ಲ ಎಂದು ಅವರು ಕೇಳಿದ್ದರು. 
    `
ಸತ್ಯಾಗ್ರಹ ನಿಲ್ಲುವುದಿಲ್ಲ, ಪ್ರಿಯಾಂಕ ನಿಜವಾದ ಕಾಂಗ್ರೆಸ್ಸಿಗಳು

ಪ್ರಿಯಾಂಕಾ ಗಾಂಧಿಯನ್ನು ಮೊದಲು ಯುಪಿಯಲ್ಲಿ ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿದೆ ಹೀಗಿರುವಾಗ ಟ್ವೀಟ್ ಮಾಡಿದ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios