Asianet Suvarna News Asianet Suvarna News

ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

* ಹಿಂದೆ ದೆಹಲಿ ಪ್ರತಿಭಟನೆಯಲ್ಲೂ ಖಲಿಸ್ತಾನಿಗಳು ಭಾಗಿಯಾಗಿದ್ದ ಆರೋಪ

* ಉಪ್ರ ರೈತ ಹೋರಾಟದಲ್ಲಿ ಖಲಿಸ್ತಾನಿ ಉಗ್ರರೂ ಭಾಗಿ?

* ಖಲಿಸ್ತಾನಿ ಬಂಡುಕೋರ ಭಿಂದ್ರ​ನ್‌​ವಾಲೆ ಚಿತ್ರದ ಟೀಶರ್ಟ್‌ ಧರಿ​ಸಿದ ವ್ಯಕ್ತಿ​ಗಳು ಪ್ರತಿಭಟನೆಯಲ್ಲಿ ಪ್ರತ್ಯ​ಕ್ಷ

Lakhimpur Kheri Violence Khalistani terrorists flourished during Punjab insurgency pod
Author
Bangalore, First Published Oct 7, 2021, 8:05 AM IST
  • Facebook
  • Twitter
  • Whatsapp

ಲಖೀಂಪು​ರ(ಅ.07): ಉತ್ತರ ಪ್ರದೇ​ಶದ(Uttar Pradesh) ಲಖೀಂಪು​ರ​ದಲ್ಲಿ(lakhimpur) ರೈತ ಸಂಘ​ಟ​ನೆ​ಗಳು ನಡೆ​ಸು​ತ್ತಿ​ರುವ ಪ್ರತಿ​ಭ​ಟ​ನೆಯ ಹಿಂದೆ ವಿದೇಶಿ ಶಕ್ತಿ​ಗಳ ಕೈವಾಡ ಇದೆಯೇ ಎಂಬ ಗುಮಾನಿ ಉಂಟಾ​ಗಿದೆ. ಪ್ರತ್ಯೇಕ ಖಲಿ​ಸ್ತಾ​ನ(Khalistani) ರಾಷ್ಟ್ರ​ಕ್ಕಾಗಿ ಹೋರಾ​ಡು​ತ್ತಿ​ರುವ ಖಲಿ​ಸ್ತಾನಿ ಉಗ್ರರ ಗುಂಪು​ಗಳು ಈ ಹೋರಾ​ಟ​ದಲ್ಲಿ ಸೇರಿ​ಕೊಂಡಿವೆ ಎಂಬ ಆರೋ​ಪ​ಗಳು ಕೇಳಿ​ಬಂದಿ​ವೆ.

ಇದಕ್ಕೆ ಪುಷ್ಟಿನೀಡು​ವಂತೆ ಖಲಿ​ಸ್ತಾನಿ ಹೋರಾ​ಟಗಾರ ಭಿಂದ್ರ​ನ್‌​ವಾಲೆಯ ಚಿತ್ರ ಇರುವ ಟೀಶ​ರ್ಟ್‌​ಗಳನ್ನು ಧರಿಸಿ ಕೆಲ​ವರು ಹೋರಾ​ಟ​ದಲ್ಲಿ ಭಾಗಿ​ಯಾ​ಗಿರುವುದು ವಿಡಿ​ಯೋ​ಗಳು ಹಾಗೂ ಫೋಟೋ​ಗ​ಳಲ್ಲಿ ಸೆರೆ​ಯಾ​ಗಿದೆ. ‘ಖ​ಲಿ​ಸ್ತಾ​ನಿ​ಗಳು ಹೋರಾ​ಟ​ದ​ಲ್ಲಿ​ದ್ದಾ​ರೆ’ ಎಂದು ಬಿಜೆಪಿ ಸಂಸದ ವಿಜ​ಯಪಾಲ್‌ ಸಿಂಗ್‌ ತೋಮರ್‌ ಕೂಡ ಆರೋ​ಪಿ​ಸಿ​ದ್ದಾರೆ. ಇದೇ ವೇಳೆ, ಭಿಂದ್ರ​ನ್‌​ವಾ​ಲೆ​ಯನ್ನು ರೈತ ಹೋರಾ​ಟದ ನಾಯ​ಕತ್ವ ವಹಿ​ಸಿ​ರುವ ರಾಕೇಶ್‌ ಟಿಕಾ​ಯತ್‌ ಸಮ​ರ್ಥಿ​ಸಿ​ಕೊಂಡಿ​ರು​ವುದು ವಿವಾ​ದಕ್ಕೆ ತುಪ್ಪ ಸುರಿ​ದಿ​ದೆ.

ಈ ಹಿಂದೆ ದಿಲ್ಲಿ​ಯಲ್ಲಿ(Delhi) ನಡೆ​ದಿ​ರುವ ರೈತ ಹೋರಾ​ಟದಲ್ಲಿ ಕೂಡ ಖಲಿ​ಸ್ತಾನಿಗಳು ಪಾಲ್ಗೊಂಡ ಕುರು​ಹು​ಗಳು ಲಭ್ಯ​ವಾ​ಗಿ​ದ್ದ​ವು. ಇದೀಗ ಲಖೀಂಪು​ರ​ದಲ್ಲೂ ಇವರ ಪಾತ್ರ ಕಂಡು​ಬಂದಿ​ದೆ. ಇನ್ನು ಲಖೀಂಪು​ರ​ದಲ್ಲಿ ಸಿಖ್‌ ಜನ​ಸಂಖ್ಯೆ ಸಾಕಷ್ಟಿದ್ದು, ಇದನ್ನು ಮಿನಿ ಪಂಜಾಬ್‌ ಎಂದೇ ಕರೆಯ​ಲಾಗುತ್ತದೆ ಎಂಬುದು ಗಮ​ನಾ​ರ್ಹ.

ಖಲಿಸ್ತಾನಿಗಳಿಗೆ ಬೆಂಬಲ ನೀಡಿದ ರೈತ ನಾಯಕ ಟಿಕಾಯತ್‌

ರೈತರ ಪ್ರತಿ​ಭ​ಟ​ನೆ​ಗ​ಳಲ್ಲಿ ಕೆಲವು ರೈತ ಹೋರಾ​ಟ​ಗಾರು, ಖಲಿ​ಸ್ತಾನಿ(Khalistani) ಹೋರಾ​ಟ​ಗಾರ ಭಿಂದ್ರನ್‌ವಾಲೆಯ ಚಿತ್ರವಿರುವ ಟೀ-ಶರ್ಟ್‌ ಧರಿಸಿರುವುದನ್ನು ಭಾರತೀಯ ಕಿಸಾನ್‌ ಯೂನಿಯನ್‌ನ(Indian Kisan Union) ನಾಯಕ ರಾಕೇಶ್‌ ಟಿಕಾಯತ್‌(rakesh Tikait) ಸಮರ್ಥಿಸಿಕೊಂಡಿದ್ದಾರೆ. ‘ಕೆಲವರಿಗೆ ರಾಮ ಸಂತನಾದರೆ ಕೆಲವರಿಗೆ ರಹೀಮ ಸಂತ’ ಎನ್ನುವ ಮೂಲಕ ಭಿಂದ್ರ​ನ್‌​ವಾ​ಲೆ​ಯನ್ನು ಕೆಲ​ವರು ಸಂತ​ನೆಂದು ಪೂಜಿ​ಸು​ತ್ತಾರೆ ಎಂಬ​ರ್ಥದ ಮಾತು ಹೇಳಿ​ದ್ದಾ​ರೆ.

‘ಭಿಂದ್ರನ್‌ವಾಲೆಯನ್ನು ಸಂತ ಎಂದು ಪೂಜಿಸುವ ಹುಡುಗನೊಬ್ಬ ಅವರ ಚಿತ್ರವಿರುವ ಟೀಶರ್ಟ್‌ ಧರಿಸಿದ್ದಾನೆ. ಆದರೆ ಸರ್ಕಾರ ಮಾತ್ರ ಬಿಂದ್ರನ್‌ವಾಲೆ ಅವರನ್ನು ಉಗ್ರ ಎಂದು ಪರಿಗಣಿಸುತ್ತದೆ’ ಎಂದು ಬುಧ​ವಾರ ಹೇಳಿ​ದ್ದಾ​ರೆ.

Follow Us:
Download App:
  • android
  • ios