ಆರ್ಟಿಕಲ್ 370 ರದ್ದು ಬಳಿಕ ನಡೆದ ಮೊದಲ ಚುನಾವಣೆ, ಲಡಾಖ್‌ನಲ್ಲಿ ಜೆಕೆಎನ್‌ಸಿ ಕಾಂಗ್ರೆಸ್ ಮೈತ್ರಿಗೆ ಗೆಲುವು!
ಲಡಾಕ್ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಕೇಂದ್ರಾಡಳಿತ ಪ್ರದೇಶವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.

ಕಾರ್ಗಿಲ್(ಅ.08)ಲಡಾಕ್ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಭರ್ಜರಿ ಗೆಲುವು ದಾಖಲಿಸಿದೆ. 26 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 21 ಸ್ಥಾನದ ಮತ ಎಣಿಕೆ ಪೂರ್ಣಗೊಂಡಿದೆ. ಈ ಪೈಕಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ 18 ಸ್ಥಾನ ಗದ್ದುಕೊಂಡಿದೆ. ಇತ್ತ ಬಿಜೆಪಿ ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಮಹತ್ತರ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಲಡಾಖ್ ಪ್ರದೇಶದಲ್ಲಿ ಬಿಜೆಪಿ ಪ್ರಯತ್ನಗಳಿಗೆ ಮತದಾರರಿಂದ ಮನ್ನಣೆ ಸಿಕ್ಕಿಲ್ಲ. ಬಿಜೆಪಿಗೆ ಕೇವಲ 2 ಸ್ಥಾನ ನೀಡಿರುವ ಲಡಾಕ್ ಮತದಾರರ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್‌ಗೆ 18 ಸ್ಥಾನ ನೀಡಿದೆ. ಈ ಪೈಕಿ ನ್ಯಾಷನಲ್ ಕಾನ್ಫರೆನ್ಸ್ 10 ಸ್ಥಾನ ಗದ್ದುಕೊಂಡಿದ್ದರೆ, ಕಾಂಗ್ರೆಸ್ 8 ಸ್ಥಾನ ಗೆದ್ದುಕೊಂಡಿದೆ. 26 ಸ್ಥಾನಗಳಿಗೆ 86 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಲಡಾಖ್‌ನಲ್ಲಿ ಇದೀಗ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಸಂಭ್ರಮಾಚರಣೆ ಆರಂಭಗೊಂಡಿದೆ. ಕೇಂದ್ರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಕೆಎನ್‌ಸಿ ಮುಖ್ಯಸ್ಥ ಓಮರ್ ಅಬ್ದುಲ್ಲಾ ಹೇಳಿದ್ದಾರೆ.