ಭೋಪಾಲ್(ಆ.09): ದಿನಕ್ಕೆ ನೂರಿನ್ನೂರು ರುಪಾಯಿ ಸಂಪಾದಿಸುವ ಬಡ ಕಾರ್ಮಿಕನೊಬ್ಬ ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ. ಅದೃಷ್ಟ ಒಲಿದರೆ ಹೇಗಿರುತ್ತೆ ಎನ್ನುವುದಕ್ಕೆ ಈತನೇ ಸಾಕ್ಷಿ.

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಚಿಕ್ಕ ಗಣಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬಾಲ್‌ ಎಂಬಾತನಿಗೆ 7.5 ಕ್ಯಾರೆಟ್‌ನ ಮೂರು ವಜ್ರದ ಹರಳುಗಳು ಸಿಕ್ಕಿದ್ದವು. ಬಳಿಕ ಆತ ಅದನ್ನು ಅಧಿಕಾರಿಗಳಿಗೆ ತೋರಿಸಿದಾಗ ಅವು 30ರಿಂದ 35 ಲಕ್ಷ ರು. ಬೆಲೆ ಬಾಳಲಿದೆ ಎಂಬ ಸಂಗತಿ ತಿಳಿದುಬಂದಿದೆ.

ಸರ್ಕಾರದ ನಿಯಮದಂತೆ ಈ ವಜ್ರವನ್ನು ಹರಾಜು ಹಾಕಲಾಗುತ್ತದೆ. ಬಂದ ಹಣದಲ್ಲಿ ಶೇ.12ರಷ್ಟುತೆರಿಗೆ ಕಳೆದು ಉಳಿದ ಹಣ ಸುಬಾಲ್‌ ಕೈಸೇರಲಿದೆ. ಲಕ್ಷಾಂತರ ರು. ಹಣವನ್ನು ಸಬಾಲ್‌ ತನ್ನದಾಗಿಸಿಕೊಳ್ಳಿದ್ದಾನೆ. ಅದೃಷ್ಟಅಂದರೆ ಇದೇ ತಾನೆ!