ಶಿಮ್ಲಾ(ಜೂ. 08) ಪ್ರಿಯತಮೆಯೊಂದಿಗೆ ಆತನನಿಗೆ ಮದುವೆಯಾಗಬೇಕಿತ್ತು. ಅವಳು ರಷ್ಯಾದ ಚೆಲುವೆ, ಈತ ಹಿಮಾಚಲದ ಹುಡುಗ.

ಹಿಮಾಚಲ ಪ್ರದೇಶದ ಹುಡುಗ ಮತ್ತು ಆಕೆಯ ಪ್ರಿಯತಮೆ ರಷ್ಯಾದ ಹುಡುಗಿಯನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದ ಸುದ್ದಿ ವರದಿಯಾಗಿದೆ. ಶಿಮ್ಲಾದ ದುರ್ಗಾ ವಿಲೇಜ್ ಗೆ ಮದುವೆಯಾಗಲು ಲಾರಿಯೊಂದರಲ್ಲಿ ಸಾಗುತ್ತಿದ್ದ ಜೋಡಿಯನ್ನು ಬಂಧಿಸಲಾಗಿದೆ.

ಕೊರೋನಾ ವೈರಸ್ ಲಾಕ್ ಡೌನ್ ನಿಯಮ ಮುರಿದಿದ್ದೆ ಇವರ ಬಂಧನಕ್ಕೆ ಕಾರಣ. ನೋಯ್ಡಾದಿಂದ ಕುಲುಗೆ ಬಂದ ಜೋಡಿಯನ್ನು ಇಸ್ಟಿಟ್ಯೂಶನಲ್ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಹದಿನಾಲ್ಕು ದಿನಗಳ ಕ್ವಾರಂಟೈನ್ ಮುಗಿದ ಬಳಿಕ ಅವರು ಮದುವೆಯಾಗುವ ಆಲೋಚನೆಯಲ್ಲಿ ಇದ್ದರು.

ಕೊರೋನಾ ತಡೆಗೆ ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ, ಬಹಳ ಪ್ರಮುಖ

ಮೇ 29 ರಂದೇ ತಮ್ಮ ಮದುವೆ ನೋಂದಣಿ ಮಾಡಿಸಿದ್ದರು. ಸಂಪ್ರದಾಯದಂತೆ ಹುಡುಗನ ತವರಿನಲ್ಲಿ ಮದುವೆಯಾಗ ಬಯಸಿದ್ದರು. ಕೆಫೆಯೊಂದನ್ನು ನಡೆಸಿಕೊಂಡಿರುವ 24 ವರ್ಷದ ಜೀತೇಂದ್ರ ಮತ್ತು 35ರ ರಷ್ಯಾದ ಲಿಡಾ ವೂಲ್ಫ್ ನಡುವೆ ಪ್ರೇಮಾಂಕುರವಾಗಿದೆ. ಲೀಡಾ ಒಬ್ಬರು ಪೇಂಟರ್. ಚಂಡೀಘಡ ಶಿಮ್ಲಾ ಹೆದ್ದಾರಿಯಲ್ಲಿ ಇವರ ಬಂಧನವಾಗಿದೆ. ನೋಯ್ಡಾದಿಂದ ಬರುತ್ತಿದ್ದ ಇವರ ಬಳಿ ಯಾವುದೇ ಪಾಸ್ ಇರಲಿಲ್ಲ.