ಕಳೆದ ಕೆಲ ತಿಂಗಳಿನಿಂದ ಕೇರಳ ವೇಸ್ಟ್ ಮ್ಯಾನೇಜ್ಮೆಂಟ್ ಭಾರಿ ಸದ್ದು ಮಾಡುತ್ತಿದೆ. ಡಂಪ್ ಯಾರ್ಡ್ ಬೆಂಕಿ ಹಾಗೂ ಹೊಗೆ ಪ್ರಕರಣ ಕೇರಳದ ತ್ಯಾಜ್ಯ ವಿಲೇವಾರಿಯನ್ನೇ ಪ್ರಶ್ನಿಸಿತ್ತು. ಬೆಂಕಿ ಆರಿಸಿದರೂ ಇದೀಗ ಈ ಪ್ರಕರದೊಳಗಿನ ಭ್ರಷ್ಟಾಚಾರ ಹೊಗೆ ಮೆಲ್ಲನೆ ಹೊರಬರುತ್ತಿದೆ. ಇದೀಗ ಸರ್ಕಾರದಿಂದ ತ್ಯಾಜ್ಯಾ ವಿಲೇವಾರಿ ಗುತ್ತಿಗೆಯಲ್ಲೂ ಅಕ್ರಮ ನಡೆದಿದೆ ಅನ್ನೋದು ಬಯಲಾಗಿದೆ.
ತಿರುವನಂತಪುರಂ(ಏ.08): ಕೇರಳದ ತಾಜ್ಯ ಡಂಪ್‌ಯಾರ್ಡ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೊಚ್ಚಿಯ ಬ್ರಹ್ಮಪುರಂ ತ್ಯಾಜ್ಯಾ ಬೆಂಕಿಯಿಂದ ಸೃಷ್ಟಿಯಾದ ಅವಾಂತರವನ್ನು ತಾತ್ಕಾಲಿಕವಾಗಿ ಬಗೆಹರಿಸಲಾಗಿದ್ದರೂ, ಈ ಪ್ರಕರಣದೊಳಗಿನ ಅಕ್ರಮ ಒಂದೊಂದಾಗಿ ಹೊರಬರುತ್ತಿದೆ. ಇದೀಗ ಕೇರಳ ವೇಸ್ಟ್‌ಮ್ಯಾನೇಜ್ಮೆಂಟ್ ಗುತ್ತಿಗೆಯಲ್ಲೇ ಅಕ್ರಮದ ವಾಸನೆ ಬಡಿಯುತ್ತಿದೆ. ಝೋಂಟಾ ಇನ್‌ಫ್ರಾಟೆಕ್ ಕಂಪನಿಗೆ ಕೇರಳ ತ್ಯಾಜ್ಯ ವಿಲೇವಾರಿ ಹಾಗೂ ಇಂಧನ ಉತ್ಪಾದನೆ ಗುತ್ತಿಗೆ ನೀಡುವಲ್ಲೂ ಅಕ್ರಮ ನಡೆದಿದೆ ಅನ್ನೋ ಆರೋಪಕ್ಕೆ ಕೆಲ ಸಾಕ್ಷಿಗಳು ಲಭ್ಯವಾಗಿದೆ. ಝೋಂಟಾ ಇನ್‌ಫ್ರಾಟೆಕ್ ಕಂಪನಿ ಕೇರಳ ತ್ಯಾಜ್ಯಾದಿಂದ ಇಂಧನ ಗುತ್ತಿಗೆ ಪಡೆಯುವ ಮೊದಲು ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ.
ಕೋಯಿಕ್ಕೋಡ್ ವೇಸ್ಟ್‌ಮ್ಯಾನೇಜ್ಮೆಂಟ್ ಸರ್ಕಾರಿ ಗುತ್ತಿಗೆ ಪಡೆಯಲು ಕೆಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಅಂದಿನ ಐಎಎಸ್ ಅಧಿಕಾರಿ ಟಿಕೆ ಜೋಸ್ ಪ್ರಬಲ ವಿರೋಧದ ನಡುವೆಯೂ ಅಂದಿನ ಕೇರಳ ಸರ್ಕಾರದ ಕಾರ್ಯದರ್ಶಿ ಟಾಮ್ ಜೋಸ್ ವಿವಾದಾತ್ಮಕ ಝೋಂಟಾ ಕಂಪನಿಗೆ ಗುತ್ತಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಝೋಂಟಾ ಕಂಪನಿಗೆ ಆರ್ಥಿಕವಾಗಿಯೂ ಭಾರಿ ಲಾಭ ತಂದುಕೊಡಬಲ್ಲ ಈ ಗುತ್ತಿಗೆಯನ್ನು ಪಡೆಯುವ ವೇಳೆ ಝೋಂಟಾ ಕಂಪನಿ ಪ್ರತಿನಿಧಿ ಡೆನ್ನಿಸ್ ಈಪನ್ ಹಾಗೂ ಮಧ್ಯವರ್ತಿ ಪೌಲಿ ಆ್ಯಂಟಿನಿ ಜೊತೆಗಿನ ಸಂಭಾಷಣೆ ಆಡಿಯೋ ಬಹಿರಂಗಗೊಂಡಿದೆ.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಜೊಂಟಾ ಎಂಡಿ ರಾಜ್ ಕುಮಾರ್ ಚೆಲ್ಲಪ್ಪನ್ !
ಝೋಂಟಾ ಕಂಪನಿಗೆ ಕೇರಳದಲ್ಲಿ ವಹಿವಾಟು ಆರಂಭಿಸಿದ ದಿನಗಳಿಂದ ಸರ್ಕಾರದ ಶ್ರೀರಕ್ಷೆ ಸಿಕ್ಕಿದೆ ಎಂದು ಕೊಚ್ಚಿ ಮೂಲದ ಮಧ್ಯವರ್ತಿ ಅಜಿತ್ ಕುಮಾರ್ ಈಗಾಗಲೇ ಏಷ್ಯಾನೆಟ್ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಇದಕ್ಕೆ ಪುಷ್ಠಿ ನೀಡುವ ಆಡಿಯೋ ಇದೀಗ ಬಹರಂಗಗೊಂಡಿದೆ. 2019ರ ಫೆಬ್ರವರಿ ತಿಂಗಳಲ್ಲಿ ಝೋಂಟಾ ಪ್ರತಿನಿಧಿ, ಜರ್ಮನಿಯ ಡೆನ್ನಿಸ್ ಈಪನ್ ಹಾಗೂ ಮಧ್ಯವರ್ತಿ ಪೌಲಿ ಆ್ಯಂಟಿನ ಜೊತಗೆನ ಸಂಭಾಷಣೆ ಆಡಿಯೋ ಕೇರಳದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ.
ಈ ಆಡಿಯೋಜಲ್ಲಿ ಝೋಂಟಾಗೆ ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಹಾಗೂ ಆರ್ಥಿಕವಾಗಿ ಯಾವುದೇ ಹೊರೆಯಾಗದಂತೆ ಸರ್ಕಾರದಿಂದ ನೆರವು ಸಿಕ್ಕಿದೆ. ವಿವಾದಿತ ಝೋಂಟಾ ಕಂಪನಿಗೆ ಈ ಗುತ್ತಿಗೆ ಸಿಕ್ಕಿರುವುದರ ಹಿಂದೆ ನಡೆದಿರುವ ಕಸರತ್ತುಗಳ ಕುರಿತು ಈ ಆಡಿಯೋದಲ್ಲಿ ಹೇಳಲಾಗಿದೆ. ಟಾಮ್ ಜೋಸ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾದಾಗ, ಅವರು ಮುಖ್ಯಮಂತ್ರಿಯವರೊಂದಿಗಿನ ವಿದೇಶಿ ಭೇಟಿಗಳ ಸಮಯದಲ್ಲಿ ಝೋಂಟಾ ಪ್ರತಿನಿಧಿಗಳನ್ನು ಭೇಟಿ ಮಾಡಿದರು ಮತ್ತು ನಂತರ ಒಪ್ಪಂದವನ್ನು ಅಂಗೀಕರಿಸಲಾಯಿತು ಅನ್ನೋ ವಿಚಾರವೂ ಆಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ವರ್ಷದ ಬಳಿಕ ಮಡಹಳ್ಳಿ ಗುಡ್ಡ ಕುಸಿತ ಆರೋಪಿಗಳ ಬಂಧನ: ಕೇರಳದಲ್ಲಿ ಅರೆಸ್ಟ್
2017-18ರಲ್ಲಿ ಕೇರಳಕ್ಕೆ ಕಾಲಿಟ್ಟ ಝೋಂಟಾ ಕಂಪನಿ, ಕೋಝಿಕೋಡ್ ತ್ಯಾಜ್ಯ ಯೋಜನೆ ಒಪ್ಪಂದ ಪಡೆಯುವ ಗುರಿ ಇಟ್ಟಕೊಂಡಿತ್ತು. ಆದರೆ ಟಾಮ್ ಜೋಸ್ ಹೆಚ್ಚಿನ ಮುತುವರ್ಜಿ ವಹಿಸಿ ಕೇರಳ ವೇಸ್ಟ್‌ಮ್ಯಾನೇಜ್ಮೆಂಟ್ ಗುತ್ತಿಗೆಯನ್ನು ಟೆಂಡರ್ ಕಣ್ಣಾಮುಚ್ಚಾಲೆ ನಡೆಸಿ ನೀಡಿರುವುದು ಆಡಿಯೋದ ಮೂಲಕ ಬಹಿರಂಗವಾಗಿದೆ. ಪ್ರತಿ ತ್ಯಾಜ್ಯ ಡಂಪಿಂಡ್ ಯಾರ್ಡ್‌ಗೆ ತಲುವು ವೇಳೆ ಝೋಂಟಾ ಕಂಪನಿ ಸರ್ಕಾರದಿಂದಲೇ ಕೋಟಿ ಕೋಟಿ ರೂಪಾಯಿ ಗುಳುಂ ಮಾಡಿರುವುದು ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ಕೇರಳ ವೇಸ್ಟ್ ಹಾಗೂ ಎನರ್ಜಿ ಮ್ಯಾನೇಜ್ಮೆಂಟ್ ಗುತ್ತಿಗೆ ಪಡೆದ ಒಂದು ತಿಂಗಳ ಬಳಿಕ ಅಂದರೆ ಮಾರ್ಚ್ ತಿಂಗಳಲ್ಲಿ ಸರ್ಕಾರಿ ಕಾರ್ಯದರ್ಶಿ ಟಾಮ್ ಜೋಸ್ ಅಧ್ಯಕ್ಷತೆಯಲ್ಲಿ ನಡೆದ ಮಾಲಿನ್ಯ ನಿರ್ಮಲ್ಯ ಸಭೆಯಲ್ಲಿ ತೆಗೆದುುಕೊಂಡ ನಿರ್ಣಯಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ದಾಖಲೆ ಪತ್ರದಲ್ಲಿ, 1 ಟನ್ ತ್ಯಾಜ್ಯ ಡಂಪಿಂಗ್ ಯಾರ್ಡ್ ಸೇರುವುಗಾ 3,500 ರೂಪಾಯಿ ಚಾರ್ಜ್ ಬೇಕು ಎಂದು ಝೋಂಟಾ ಮನವಿಯನ್ನು ಕಾರ್ಯದರ್ಶಿ ಪುರಸ್ಕರಿಸಿದ್ದಾರೆ. ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಈ ಮೂಲಕ ಝೋಂಟಾ ಗುಳುಂ ಮಾಡಿದೆ.
