ಬೇಲಿನೇ ಎದ್ದು ಹೊಸ ಮೇಯ್ದರೆ ಹೇಗೆ? ಹೌದು, ಇಂಥದ್ದೇ ಒಂದು ಘಟನೆ ಬ್ಯಾಂಕ್‌ವೊಂದರಲ್ಲಿ ನಡೆದಿದೆ. ನಂಬಿದ ಗ್ರಾಹಕರಿಗೆ ಮ್ಯಾನೇಜರ್ ಮೋಸ ಮಾಡಿದ್ದಾರೆ.
ಎರಡು ವರ್ಷಗಳ ಕಾಲ ಚೆಕ್ ಕ್ಲೋನಿಂಗ್ ಮತ್ತು ಜಿಲ್ಲಾ ಭೂ ಸ್ವಾಧೀನ ಅಧಿಕಾರಿ (ಡಿಎಲ್‌ಎಒ) ಹೆಸರಿನಲ್ಲಿ ಬಿಹಾರದ ಕೊಟಕ್ ಮಹೀಂದ್ರ ಬ್ಯಾಂಕ್‌ನ ಮ್ಯಾನೇಜರ್, ಚೆಕ್‌ಗಳ ಮೇಲೆ ಸುಳ್ಳು ಸಹಿ ಹಾಕಿ, ₹31.93 ಕೋಟಿ ಹಣ ದರೋಡೆ ಮಾಡಿದ್ದಾರೆ.
ಯಾರಿಗೆ ಹಣ ಕೊಟ್ಟನು?
ಬೇಲಿನೇ ಎದ್ದು ಹೊಲ ಮೇಯೋ ಹಾಗೆ, ಸಹಿ ಪರಿಶೀಲನೆ ಮಾಡೋದು ಇವರೇ. ಹೀಗಾಗಿ ಈ ಖೋಟಾ ಚೆಕ್‌ಗಳನ್ನು ಅವರೇ ಅನುಮೋದಿಸಿದ್ದಾರೆ. ಬ್ಯಾಂಕ್‌ನಲ್ಲಿ ಹಣ ಇಟ್ಟವರ ಆಧಾರ್ ಕಾರ್ಡ್, ಕೆವೈಸಿ ವಿವರಗಳನ್ನು ಬಳಸಿ ಖೋಟಾ ಖಾತೆಗಳನ್ನು ಒಪನ್ ಮಾಡಿದ್ದಾರೆ, ಆ ಹಣವನ್ನು ವಿದೇಶದಲ್ಲಿದ್ದ ಕಾನೂನುಬಾಹಿರ ಬೆಟ್ಟಿಂಗ್ ಆಪ್‌ಗಳಿಗೆ ಕೊಟ್ಟಿದ್ದಾರೆ. ತನ್ನ ಬ್ಯಾಂಕ್ ಖಾತೆ, ಯುಪಿಐ ಐಡಿಗಳನ್ನು ಬಳಸಲು ಬಿಟ್ಟ ಕೆಲವರಿಗೆ ಸ್ವಲ್ಪ ಹಣ ನೀಡಿದ್ದಾರೆ.
ಕೆಲಸದಿಂದ ಸಸ್ಪೆಂಡ್
2021ರಲ್ಲಿ ಓರ್ವ ಬ್ಯಾಂಕ್ ಸಿಬ್ಬಂದಿಯು ಡೌಟ್ ಬಂದು ಆರ್‌ಟಿಜಿಎಸ್ ವರ್ಗಾವಣೆಯನ್ನು ಗಮನಿಸಿದ್ದಾರೆ. ಆಗ ಈ ದರೋಡೆ ಗೊತ್ತಾಗಿದೆ. ಡಿಎಲ್‌ಎಒ ಅವರು ಎಂದಿಗೂ ಸಹಿ ಹಾಕಿ ಅಪ್ರೂವ್ ಮಾಡಿಲ್ಲ ಎಂದಿದ್ದಾರೆ. ಈಗ ಮ್ಯಾನೇಜರ್ ಸಿಕ್ಕಿಬಿದ್ದಿದ್ದು, ಕೆಲಸದಿಂದ ವಜಾ ಮಾಡಲಾಗಿದೆ.
ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್‌ನಲ್ಲಿರುವ ಬೆಟ್ಟಿಂಗ್ ಆಪ್‌ಗಳು, ಶೆಲ್ ಕಂಪನಿಗಳಿಗೆ ಏನು ಸಂಬಂಧ ಇದೆ ಎಂದು ಇಡಿ (ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್) ಕಂಡುಹಿಡಿದಿದೆ. 2025ರ ಜೂನ್ 27ರಂದು ಇಡಿ ಹೊಸ ಡಾಕ್ಯುಮೆಂಟ್‌ಗಳನ್ನು ಬಿಹಾರ ಪೊಲೀಸರ ಜೊತೆ ಶೇರ್ ಮಾಡಿಕೊಂಡು, ಹೊಸ ಕೇಸ್ ಫೈಲ್ ಮಾಡಲಾಗಿದೆ.
₹31.93 ಕೋಟಿ ರೂಪಾಯಿ ಹಣ ಕದ್ದಾಯ್ತು!
ಆ ಮ್ಯಾನೇಜರ್‌ನನ್ನು ಸ್ಥಳೀಯ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು. ಈಗ ಆ ವ್ಯಕ್ತಿ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ. ಬಿಹಾರ ಡಿಐಜಿ, ಐಪಿಎಸ್ ಅಧಿಕಾರಿ ಮಾನವ್‌ಜಿತ್ ಸಿಂಗ್ ಧಿಲ್ಲನ್ ಮಾತನಾಡಿ, "ಈ ಮ್ಯಾನೇಜರ್ 2 ವರ್ಷಗಳ ಕಾಲ ಈ ರೀತಿ ಮಾಡಿ, ಸುಮಾರು ₹31.93 ಕೋಟಿ ರೂಪಾಯಿ ಕದ್ದಿದ್ದಾರೆ. ಭಾರತದಲ್ಲಿ ನಿಷೇಧಿತ ಆಗಿರೋ, ಸದ್ಯ ವಿದೇಶದಲ್ಲಿರೋ ಬೆಟ್ಟಿಂಗ್/ಜೂಜಾಟ ಆಪ್‌ಗಳಲ್ಲಿ ಆ ಹಣವನ್ನು ಹೂಡಿಕೆ ಮಾಡಿದ್ದಾನೆ" ಎಂದಿದ್ದಾರೆ.
ಯಾಕೆ ಸಿಕ್ಕಿ ಬೀಳಲಿಲ್ಲ?
ಈ ಶಾಖೆಯ ಮ್ಯಾನೇಜರ್ ತನ್ನ ಹೆಸರಿನಲ್ಲಿ ಈ ಹಣವನ್ನು ಬೆಟ್ಟಿಂಗ್/ಜೂಜಾಟ ಆಪ್‌ಗಳಲ್ಲಿ ಹೂಡಿಕೆ ಮಾಡದೆ, ಗ್ರಾಹಕರ ಕೆವೈಸಿ ಮಾಹಿತಿಯನ್ನು (ಆಧಾರ್ ಇತ್ಯಾದಿ) ಬಳಸಿ ಅವರ ಹೆಸರಿನಲ್ಲಿ ಖಾತೆ ಒಪನ್ ಮಾಡಿದ್ದನು. ಆದ್ದರಿಂದ ಏನಾದರೂ ಸಮಸ್ಯೆ ಆಗ್ತಿದ್ದರೆ, ಅದು ಗ್ರಾಹಕರಿಗೆ ಮಾತ್ರ, ಶಾಖೆಯ ಮ್ಯಾನೇಜರ್‌ಗೆ ಅಲ್ಲ. ತಮ್ಮ ಹೆಸರಿನಲ್ಲಿ ಈ ರೀತಿ ಆಗ್ತಿದೆ ಅಂತ ಬ್ಯಾಂಕ್ ಗ್ರಾಹಕರಿಗೆ ಗೊತ್ತಾಗಲೂ ಇಲ್ಲ.
