ಪತ್ನಿ ಆರೈಕೆಗಾಗಿ VRS ತೆಗೆದುಕೊಂಡ ಉದ್ಯೋಗಿ, ಫೇರ್‌ವೆಲ್‌ ಪಾರ್ಟಿಯಲ್ಲೇ ಹೋಯ್ತು ಜೀವನ ಸಂಗಾತಿ ಪ್ರಾಣ!

ಅನಾರೋಗ್ಯಪೀಡಿತ ಪತ್ನಿಯ ಆರೈಕೆಗಾಗಿ ಸರ್ಕಾರಿ ಉದ್ಯೋಗಿಯೊಬ್ಬರು ವಿಆರ್‌ಎಸ್ ಪಡೆದ ದಿನವೇ ಪತ್ನಿ ಇಹಲೋಕ ತ್ಯಜಿಸಿದ್ದಾರೆ. ಕೋಟಾದಲ್ಲಿ ನಡೆದ ಈ ಘಟನೆಯಲ್ಲಿ, ನಿವೃತ್ತಿ ಪಾರ್ಟಿಯಲ್ಲಿ ಪತ್ನಿ ಕುರ್ಚಿಯ ಮೇಲೆ ಕುಳಿತು ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

KOta Rajasthan Man Took VRS to take care of wife life partner died in the farewell ceremony itself san

ಬೆಂಗಳೂರು (ಡಿ.25): ವಿಧಿಯ ವಿಚಿತ್ರ ಆಟ ತೋರಿಸಿದ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಸರ್ಕಾರಿ ಉದ್ಯೋಗಿಯೊಬ್ಬ ಅನಾರೋಗ್ಯಪೀಡಿತ ಪತ್ನಿಯ ಆರೈಕೆ ಮಾಡುವ ಸಲುವಾಗಿ ನಿವೃತ್ತಿ ವಯಸ್ಸಿಗೆ ಇನ್ನೂ ಮೂರು ವರ್ಷಗಳು ಇರುವಾಗಲೇ ವಿಆರ್‌ಎಸ್‌ ಅಂದರೆ ವಾಲೆಂಟರಿ ರಿಟೈರ್‌ಮೆಂಟ್‌ ಸರ್ವೀಸ್‌ ಪಡೆದುಕೊಂಡಿದ್ದರು. ಆದರೆ ವಿಆರ್ ಎಸ್ ತೆಗೆದುಕೊಳ್ಳುವ ದಿನವೇ ಆಯೋಜಿಸಿದ್ದ ಪಾರ್ಟಿಯಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದಾರೆ. ಎಲ್ಲರೂ ಖುಷಿಯಿಂದ ಪಾರ್ಟಿ ಮಾಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಕುರ್ಚಿಯ ಮೇಲೆ ಕುಳಿತ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಬಳಿಕ ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ನಿವೃತ್ತಿ ಕೂಟ ಆಯೋಜಿಸಿದ್ದ ಕುಟುಂಬ: ಕೋಟಾದ ದಾದಾಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೋಟಾದ ದಾದಾಬರಿ ಪ್ರದೇಶದಲ್ಲಿ ವಾಸವಿದ್ದ ದೇವೇಂದ್ರ ಕುಮಾರ್ ಸೆಂಟ್ರಲ್ ವೇರ್ ಹೌಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿಗೆ ಹೃದಯ ಸಮಸ್ಯೆ ಇದ್ದು, ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ದೇವೇಂದ್ರ 3 ವರ್ಷಗಳ ನಂತರ ನಿವೃತ್ತಿ ಹೊಂದಬೇಕಿತ್ತು.ಆದರೆ ಅನಾರೋಗ್ಯಪೀಡಿತ ಪತ್ನಿಯನ್ನು ನೋಡಿಕೊಳ್ಳಲು ದೇವೇಂದ್ರ ನಿವೃತ್ತಿಗೆ 3 ವರ್ಷ ಮೊದಲು ವಿಆರ್ ಎಸ್ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ದೇವೇಂದ್ರನ ಸ್ನೇಹಿತರು, ಬಂಧುಗಳು ಸಣ್ಣ ಪಾರ್ಟಿಯನ್ನೂ ಏರ್ಪಡಿಸಿದ್ದರು.

ದೇವೇಂದ್ರನ ಸಂಬಂಧಿಕರು ಮತ್ತು ಅನೇಕ ಸ್ನೇಹಿತರು ಪಾರ್ಟಿಗೆ ಆಗಮಿಸಿದ್ದರು. ಈ ವೇಳೆ ಪರಿಚಿತರು, ಬಂಧುಗಳು ದೇವೇಂದ್ರನಿಗೆ ಮಾಲೆ ಹಾಕಿ ನಿವೃತ್ತಿ ಜೀವನಕ್ಕೆ ಶುಭ ಕೋರುತ್ತಿದ್ದರು. ಇದೇ ವೇಳೆ ಹಲವರ ಒತ್ತಾಯದ ಮೇರೆಗೆ ದೇವೇಂದ್ರನ ಪತ್ನಿ ದೀಪಿಕಾ ಕೂಡ ದೇವೇಂದ್ರ ಅವರಿಗೆ ಮಾಲಾರ್ಪಣೆ ಮಾಡಿದರು. ಮಾಲೆ ಹಾಕಿದ ಸ್ವಲ್ಪ ಹೊತ್ತಿನಲ್ಲೇ ದೀಪಿಕಾ ತಲೆಸುತ್ತು ಬಂದು ಕೆಳಗೆ ಬಿದ್ದು ಪ್ರಜ್ಞಾಹೀನರಾಗಿದ್ದರು.

Azerbaijan Airlines Plane Crash: ಪ್ರಯಾಣಿಕರ ಕೊನೇ ಕ್ಷಣದ ವಿಡಿಯೋ ವೈರಲ್‌!

ಸಾವಿನ ಸುದ್ದಿ ಕೇಳಿ ಶಾಕ್‌: ಈ ವೇಳೆ ಅಲ್ಲಿದ್ದ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ದೀಪಿಕಾ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯ ನಂತರ ಪತಿ ಯಾರ ಸೇವೆಗಾಗಿ ವಿಆರ್‌ಎಸ್ ತೆಗೆದುಕೊಂಡಿದ್ದಾರೋ ಆ ಪತ್ನಿಯೇ ಆತನನ್ನು ತೊರೆದಿದ್ದರಿಂದ ಸ್ಥಳೀಯ ಜನರು ವಿಧಿಯನ್ನು ದೂರಿದ್ದಾರೆ.

Rule Change: ಎಲ್‌ಪಿಜಿಯಿಂದ ಪಿಂಚಣಿವರೆಗೆ.. ಹೊಸ ವರ್ಷದಿಂದ ಆಗಲಿದೆ ಈ ಬದಲಾವಣೆಗಳು!

Latest Videos
Follow Us:
Download App:
  • android
  • ios