Asianet Suvarna News Asianet Suvarna News

ಕೊರಿಯಾ ಯೂಟ್ಯೂಬರ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಜಾಮೀನು!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕಿದ ಕೊರಿಯನ್ ಯೂಟ್ಯೂಬರ್‌ಗೆ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇದೀಗ ಮಹತ್ವದ ಬೆಳವಣಿಗೆಯಾಗಿದೆ. ಕಠಿಣ ಕ್ರಮದ ಭರವಸೆ ನೀಡಿದ ಪೊಲೀಸರು ಸರಿಯಾದ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲು ವಿಫಲವಾಗಿದ್ದಾರೆ. ಇದರ ಪರಿಣಾಮ ಇಬ್ಬರು ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
 

Korean YouTuber molestation case accused granted bail by Bandra Magistrate Court ckm
Author
First Published Dec 6, 2022, 7:46 PM IST

ಮುಂಬೈ(ಡಿ.06): ದಕ್ಷಿಣ ಕೊರಿಯಾದ ಯೂಟ್ಯೂಬರ್ ಮೇಲೆ ಮುಂಬೈನ ಬೀದಿಯಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆಯಿಂದಗೆ ಭಾರತ ತಲೆ ತಗ್ಗಿಸುವಂತೆ ಮಾಡಿತ್ತು. ಜನ ನಿಬಿಡ ರಸ್ತೆಯಲ್ಲಿ ಯೂಟ್ಯೂಬರ್ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು. ಈ ವಿಡಿಯೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದಲ್ಲಿ ಮಹಿಳೆಯರ ಸುರಕ್ಷತೆ, ದೇಶದಲ್ಲಿನ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಮೇಲೆ ವಿದೇಶಿಗರು ಬೊಟ್ಟು ಮಾಡಿದ್ದರು. ಈ ಘಟನೆಗೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಾದ ಮೊಹಮ್ಮದ್ ಶೇಕ್ ಹಾಗೂ ಮೊಬೀನ್ ಚಾಂದ್ ಇಬ್ಬರನ್ನು ಬಂಧಿಸಿದ್ದರು. ಬಳಿಕ ಕಠಿಣ ಕ್ರಮದ ಭರವಸೆ ನೀಡಿದ್ದರು. ಆದರೆ ಒಂದೇ ವಾರದಲ್ಲಿ ಇಬ್ಬರು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಆರೋಪಿಗಳಿಗೆ ಹಲವರು ಬೆಂಬಲಕ್ಕೆ ನಿಂತಿದ್ದರು. ಇಷ್ಟೇ ಅಲ್ಲ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದರು. ಮೊಹಮ್ಮದ್ ಶೇಕ್ ಹಾಗೂ ಮೊಬೀನ್ ಚಾಂದ್ ಜಾಮೀನು ಅರ್ಜಿ ಪರಿಶೀಲಿಸಿದ ಬಾಂದ್ರ ಮ್ಯಾಜಿಸ್ಟ್ರೇಟ್ ಕೋರ್ಟ್ ಇಬ್ಬರಿದು ಬೇಲ್ ನೀಡಿದೆ. ಜೊತೆಗೆ ತಲಾ 15,000 ರೂಪಾಯಿ ಶ್ಯೂರಿಟಿ ಮೊತ್ತ ಪಾವತಿಸುವಂತೆ ಸೂಚಿಸಿದೆ.  ವಿಚಾರಣೆಯ ಭಾಗವಾಗಿ ಆರೋಪಿಗಳು ಪ್ರತಿ ಮಂಗಳವಾರ ಖಾರ್ ಪೊಲೀಸ್ ಠಾಣೆಗೆ ತೆರಳಲು ಸೂಚಿಸಿದೆ.

Mumbai News: ಮಹಿಳೆಯ ಖಾಸಗಿ ಅಂಗವನ್ನು ಸಿಗರೇಟ್‌ನಿಂದ ಸುಟ್ಟು, ಕಾಮುಕರಿಂದ ಗ್ಯಾಂಗ್‌ರೇಪ್‌..!

ಮುಂಬೈನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿ ಮಹಿಳೆಗೆ ಸುರಕ್ಷತೆ ನೀಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಆದರೆ ಕೃತ್ಯ ಎಸಗಿ ಇದೀಗ ಜಾಮೀನ ಮೇಲೆ ಹೊರಬಂದಿರುವ ಆರೋಪಿಗಳು ಮತ್ತೆ ನಿಯಮ ಉಲ್ಲಂಘಿಸುವುದಿಲ್ಲ ಅನ್ನೋದರಲ್ಲಿ ಯಾವುದೇ ಖಚಿತತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಘಟನೆ ವಿವರ:
ದಕ್ಷಿಣ ಕೊರಿಯಾ ಮೂಲದ ಹ್ಯೋಜೆಯಾಂಗ್‌ ಪಾರ್ಕ್ ಎಂಬಾಕೆ ಭಾರತ ಪ್ರವಾಸದಲ್ಲಿದ್ದು,  ಕಳೆದ ವಾರ ಸಂಜೆ ಮುಂಬೈ ವೈಶಿಷ್ಟ್ಯತೆ ಬಗ್ಗೆ ಖಾರ್‌ನಲ್ಲಿ 1000ಕ್ಕೂ ಹೆಚ್ಚು ಪ್ರೇಕ್ಷಕರ ಮುಂದೆ ಯೂಟ್ಯೂಬ್‌ ಲೈವ್‌ಸ್ಟ್ರೀಂ ಮಾಡುತ್ತಿದ್ದಳು. ಆಗ ಒಬ್ಬ ಯುವಕ ಬಂದು ಆಕೆಯ ಸೊಂಟ ಹಿಡಿಯುತ್ತಾನೆ. ಮುತ್ತು ಕೊಡಲೂ ಯತ್ನಿಸುತ್ತಾನೆ. ಇದನ್ನು ವಿರೋಧಿಸಿದರೂ ಆತ ಸುಮ್ಮನಾಗಲ್ಲ. ಬಳಿಕ ಬೈಕ್‌ನಲ್ಲಿ ಆತನ ಸ್ನೇಹಿತ ಅದೇ ಸ್ಥಳಕ್ಕೆ ಬರುತ್ತಾನೆ. ‘ಲಿಫ್‌್ಟಕೊಡ್ತೇವೆ ಬಾ’ ಎಂದು ಹಾಗೂ ‘ಫೋನ್‌ ನಂಬರ್‌ ಕೊಡು’ ಪಾರ್ಕ್ಗೆ ಒತ್ತಾಯಿಸುತ್ತಾರೆ. ಆದರೆ ಇದಕ್ಕೆ ಪಾರ್ಕ್ ನಿರಾಕರಿಸುತ್ತಾಳೆ.

ಕ್ಲಾಸ್‌ರೂಂನಲ್ಲಿ ಕೂಡಿ ಹಾಕಿ 13 ವರ್ಷದ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದ ಗ್ಯಾಂಗ್ ರೇಪ್!

ಲೈವ್‌ ಸ್ಟ್ರೀಂ ಅನ್ನು 1000ಕ್ಕೂ ಹೆಚ್ಚು ಜನ ನೋಡುತ್ತಿದ್ದರು ಎನ್ನಲಾಗಿದೆ. ಬಳಿಕ ಪಾರ್ಕ್ ಕೂಡ ಟ್ವೀಟರ್‌ನಲ್ಲಿ ಘಟನೆಯ ವಿಡಿಯೋವನ್ನು ಹಾಕಿದ್ದಾಳೆ. ಆದರೆ ದೂರು ನೀಡಲು ಪಾರ್ಕ್ ಹಿಂದೇಟು ಹಾಕಿದ್ದರಿಂದ ಸ್ವಯಂಪ್ರೇರಿತರಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಇಂಥ ಕೃತ್ಯ ನಡೆಯಿತು ಎಂದು ಭಾರತವನ್ನು ನಾನು ದೂಷಿಸಲ್ಲ. ಎಲ್ಲ ದೇಶಗಳಲ್ಲೂ ಇಂಥ ಜನ ಇರುತ್ತಾರೆ. ಮುಂಬೈ ಪೊಲೀಸರು ತನಿಖೆಗೆ ತುಂಬಾ ಸಹಕಾರ ನೀಡಿದರು. ಇಂಥ ದುಷ್ಕರ್ಮಿಗಳು ಇದ್ದರೂ ಭಾರತ ಸುಂದರ ದೇಶ’ ಎಂದು ಪಾರ್ಕ್ ಹೇಳಿದ್ದಾಳೆ.

Follow Us:
Download App:
  • android
  • ios