ಮೂಗುತಿ ಸುಂದರಿಯರೇ ಎಚ್ಚರ, ಉಸಿರಾಟದ ವೇಳೆ ಮಹಿಳೆ ಶ್ವಾಸಕೋಶ ಸೇರಿದ ಆಭರಣದ ಸ್ಕ್ರೂ!
ಮೂಗುತಿ ಸುಂದರಿಯರೇ ಎಚ್ಚರವಹಿಸಿ. ಮಹಿಳೆಯೊಬ್ಬರು ಮೂಗುತಿಯ ಸ್ಕ್ರೂ ಉಸಿರಾಡುವ ವೇಳೆ ಶ್ವಾಸಕೋಶ ಸೇರಿಕೊಂಡಿದೆ. ತೀವ್ರ ಉಸಿರಾಟದ ಸಮಸ್ಯೆ ಎದುರಿಸಿದ ಮಹಿಳೆ ಆಸ್ಪತ್ರೆ ದಾಖಲಾದ ಅಚ್ಚರಿಯಾಗಿದೆ.
ಕೋಲ್ಕತಾ(ಏ.28) ಮೂಗುತಿ ಹೆಣ್ಣಿನ ಸೌಂದರ್ಯ ಹಾಗೂ ಲಕ್ಷಣ ಮತ್ತಷ್ಟು ಹೆಚ್ಚಿಸುತ್ತೆ. ಹಲವರು ಮೂಗುತಿ ಸುಂದರಿ ಎಂದೇ ಜನಪ್ರಿಯರಾಗಿದ್ದಾರೆ. ಆದರೆ ಇದೇ ಮೂಗುತಿ ಹೆಣ್ಣಿನ ಪ್ರಾಣಕ್ಕೂ ಅಪಾಯ ತರಬಲ್ಲದು ಅನ್ನೋದು ಇದೇ ಮೊದಲು ಬಹಿರಂಗವಾಗಿದೆ. ಮಹಿಳೆಯ ಮೂಗುತಿಯ ಸ್ಕ್ರೂ ಉಸಿರಾಟದ ವೇಳೆ ನೇರವಾಗಿ ಶ್ವಾಸಕೋಶ ಸೇರಿಕೊಂಡಿದೆ. ಉಸಿರಾಟದ ಸಮಸ್ಯೆ ಎದುರಿಸಿದ ಮಹಿಳೆಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮೂಗುತಿ ತಿರುಪು ಹೊರತೆಗೆದ ಘಟನೆ ಕೋಲ್ಕತಾದಲ್ಲ ನಡೆದಿದೆ.
35 ವರ್ಷದ ಮಹಿಳೆ ವರ್ಷಾ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ವರ್ಷಾಗೆ ಮದುವೆಯಾಗಿ 16 ವರ್ಷಗಳಾಗಿದೆ. ಮದುವೆ ಸಂದರ್ಭದಲ್ಲಿ ಹೊಸ ಆಭರಣಗಳನ್ನು ಖರೀದಿಸಲಾಗಿತ್ತು. ಕಿವಿಯೋಲೆ, ಸರ, ಬಳೆ, ಮೂಗುತಿ ಸೇರಿದಂತೆ ಚಿನ್ನಾಭರಣ ನೀಡಲಾಗಿತ್ತು. ಮದುವೆಯಾದಗಿನಿಂದ ಕೆಲ ಆಭರಣಗಳನ್ನು ವರ್ಷ ನಿತ್ಯವೂ ಧರಿಸುತ್ತಾರೆ. ಈ ಪೈಕಿ ಮೂಗುತಿ ಕೂಡ ಒಂದು.
ಮಹಿಳೆಯರು ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?
ಜೀವನ ಸುಂದರವಾಗಿ ಸಾಗುತ್ತಿತ್ತು. ಮಾತುಕತೆ, ಹರಟೆ, ಮನಗೆಲಸ, ಚಟುವಟಿಕೆ ನಡುವೆ ವರ್ಷಾ ದೀರ್ಘ ಉಸಿರು ತೆಗೆದುಕೊಂಡಿದ್ದಾರೆ. ಈ ವೇಳೆ ಸಡಿಲಗೊಂಡಿದ್ದ ಮೂಗುತಿಯ ತಿರುಪು ಮೂಗಿನೊಳಕ್ಕೆ ಹೋಗಿದೆ. ಏನೇ ಮಾಡಿದರೂ ಹೊರಬರಲಿಲ್ಲ. ಹೆಚ್ಚು ತಲೆಕೆಡಿಸಿಕೊಳ್ಳದ ವರ್ಷಾ ಮೂಗುತಿಯ ಸ್ಕ್ರೂ ಹೊಟ್ಟೆ ಸೇರಿದೆ ಎಂದುಕೊಂಡಿದ್ದಾರೆ.
ದೈನಂದಿನ ಜೀರ್ಣಕ್ರೀಯೆಯಲ್ಲಿ ಹೊಟ್ಟೆ ಸೇರಿರುವ ಮೂಗುತಿ ತಿರುಪು ಮರುದಿನ ಹೊರಬರಲಿದೆ ಎಂದು ವರ್ಷಾ ಸುಮ್ಮನಾಗಿದ್ದಾರೆ. ಕುಟುಂಬಸ್ಥರ ಸಲಹೆಯಿಂದ ಬಾಳೆ ಹಣ್ಣು ತಿಂದಿದ್ದಾರೆ. ಮರದಿನ ಹೊಟ್ಟೆಯೊಳಗಿಂದ ಮೂಗುತಿ ತಿರುಪು ಬರಲಿಲ್ಲ. ಅಷ್ಟರಲ್ಲೇ ಉಸಿರಾಟದ ಸಮಸ್ಯೆ , ಅಸ್ವಸ್ಥತೆ ಸೇರಿದಂತೆ ಹಲಲವು ಆರೋಗ್ಯ ಸಮಸ್ಯೆಗಳ ಕಾಣಿಸಿಕೊಂಡಿದೆ.
ತಕ್ಷಣವೇ ಆಸ್ಪತ್ರೆ ದಾಖಲಾದ ವರ್ಷಾಳನ್ನು ವೈದ್ಯರು ತಪಾಸಣೆ ಮಾಡಿದ್ದಾರೆ. ಸಿಟಿ ಸ್ಕಾನ್, ಚೆಸ್ಟ್ ಎಕ್ಸರೇ ತೆಗೆದಾಗ ಶ್ವಾಸಕೋಶದಲ್ಲಿ ಸಣ್ಣ ವಸ್ತುವೊಂದು ಸಿಲುಕಿಕೊಂಡಿರುವುದು ಪತ್ತೆಯಾಗಿದೆ. ಫೈಬರ್ಆಪ್ಟಿಕ್ ಮೂಲಕ ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ವೈದ್ಯರು ಮೆಡಿಕಾ ಆಸ್ಪತ್ರೆಯ ದೇಬರಾಜ್ ಜಶ್‌ಗೆ ಸೂಚಿಸಿದ್ದಾರೆ.
ಇಳ್ಕಲ್ ಸೀರೆ, ಮುತ್ತಿನ ಮೂಗುತಿಯಲ್ಲಿ ರಂಜನಿ ರಾಘವನ್ ಪೋಸ್ : ಆ ಮೂಗುತಿ ನಾನಾಗಬಾರದೇ ಎಂದ ನೆಟ್ಟಿಗರು!
ನುರಿತ ವೈದ್ಯರಾದ ದೇಬರಾಜ್ ಜಶ್ ಸುಲಭವಾಗಿ ಸ್ಕ್ರೂ ತೆಗೆಯಲು ಕೆಲ ಪ್ರಯತ್ನ ಮಾಡಿದ್ದಾರೆ. ಆದರೆ ವಿಫಲಗೊಂಡಿದೆ, ಕೊನೆಗೆ 2ನೇ ಬಾರಿ ಬ್ರೊಂಕೋಸ್ಕೋಪ್ ಮಾಡಿ ಮೂಗುತಿಯ ಸ್ಕ್ರೂ ಹೊರತೆಗಿದಿದ್ದಾರೆ. ನಾಲ್ಕು ದಿನದ ಬಳಿಕ ವರ್ಷಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.