Asianet Suvarna News Asianet Suvarna News

ಕೋಲ್ಕತಾ ಘಟನೆ ದಿಗ್ಭ್ರಮೆ ಹುಟ್ಟಿಸಿತು: ಮೊದಲ ಬಾರಿಗೆ ರೇಪ್ ಕೇಸ್‌ ಬಗ್ಗೆ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು 

ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಕೋಲ್ಕತಾ ರೇಪ್ ಕೇಸ್‌ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಹಿಳಾ ಸುರಕ್ಷತೆ ಕುರಿತು ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಮಹಿಳೆಯರ ಶೋಷಣೆ ನಿಲ್ಲಬೇಕು. ಆಕೆಗೆ ಸುರಕ್ಷತೆ ಮುಖ್ಯ ಎಂದಿದ್ದಾರೆ.

kolkata doctor rape and murder incident shocks president draupadi murmu first reacts rav
Author
First Published Aug 29, 2024, 5:36 AM IST | Last Updated Aug 29, 2024, 5:36 AM IST

ನವದೆಹಲಿ (ಆ.29): ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಕೋಲ್ಕತಾ ರೇಪ್ ಕೇಸ್‌ ಬಗ್ಗೆ ಮಾತನಾಡಿದ್ದಾರೆ. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಹಿಳಾ ಸುರಕ್ಷತೆ ಕುರಿತು ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಮಹಿಳೆಯರ ಶೋಷಣೆ ನಿಲ್ಲಬೇಕು. ಆಕೆಗೆ ಸುರಕ್ಷತೆ ಮುಖ್ಯ ಎಂದಿದ್ದಾರೆ.

‘ಮಹಿಳಾ ಸುರಕ್ಷತೆ ಬಗ್ಗೆ ಆತ್ಮಾವಲೋಕನ ಆಗಬೇಕಿದೆ. ಕೋಲ್ಕತಾ ಘಟನೆ ಕೇಳಿ ದಿಗ್ಭ್ರಮೆಗೊಂಡೆ. ಯಾರು ಕೂಡ ಮಗಳು, ಸಹೋದರಿ ಈ ಸ್ಥಿತಿಯಲ್ಲಿರುವುದನ್ನು ಒಪ್ಪುವುದಿಲ್ಲ. ಈ ರೀತಿಯ ದೌರ್ಜನ್ಯವನ್ನು ಸಮಾಜ ಒಪ್ಪುವುದಿಲ್ಲ. ಇತ್ತೀಚಿಗಷ್ಟೇ ರಾಷ್ಟ್ರಪತಿ ಭವನಕ್ಕೆ ರಾಖಿ ಕಟ್ಟಲು ಬಂದಿದ್ದ ಶಾಲಾ ಮಕ್ಕಳು ದೇಶದಲ್ಲಿ ನಿರ್ಭಯಾ ರೀತಿಯ ಘಟನೆ ನಡೆಯದಂತೆ ತಡೆಗಟ್ಟಬಹುದೇ ಎಂದು ಕೇಳಿದಾಗ ನೋವಾಯಿತು.

ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಭಾರಿ ಪ್ರತಿಭಟನೆ, ಹಿಂಸಾಚಾರ

ಸ್ವರಕ್ಷಣೆ ತರಬೇತಿ, ಮಾರ್ಷಲ್ ಆರ್ಟ್‌ಗಳು ಪ್ರತಿಯೊಬ್ಬರಿಗೂ ಅವಶ್ಯಕ. ಹಲವು ವಿಚಾರಗಳಲ್ಲಿ ಮಹಿಳಾ ಸುರಕ್ಷತೆಯ ಖಚಿತತೆ ಇಲ್ಲ. ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಆದರೆ ಮಹಿಳೆ ಹಕ್ಕುಗಳನ್ನು ಗೆಲ್ಲಲು ಪ್ರತಿ ಹಂತದಲ್ಲಿಯೂ ಹೋರಾಡಿದ್ದಾಳೆ. ಪೂರ್ವಗ್ರಹ ಪೀಡಿತ ಮನಸ್ಥಿತಿ, ಸಂಪ್ರದಾಯ ಆಕೆ ಹಕ್ಕುಗಳಿಗೆ ವಿರೋಧಿಸಿತ್ತು. ಈ ಮನಸ್ಥಿತಿ ಹೋಗಲಾಡಿಸುವುದು ಎಲ್ಲರ ಜವಾಬ್ದಾರಿ. ಮಹಿಳೆ ಕೆಲಸದ ಸ್ಥಳದಲ್ಲಿ ಅಸುರಕ್ಷಿತ ವಾತಾವರಣ ಎದುರಿಸುತ್ತಿದ್ದಾಳೆ. ಎಲ್ಲ ಅಡೆತಡೆಗಳನ್ನು ದಾಟಿ ಸ್ವಾತಂತ್ರ್ಯ ಗೆಲ್ಲುವ ಹೆಣ್ಣುಮಕ್ಕಳಿಗೆ ಋಣಿಯಾಗಿರೋಣ’ ಎಂದು ಸುದೀರ್ಘವಾಗಿ ಬರೆದಿದ್ದಾರೆ.

Latest Videos
Follow Us:
Download App:
  • android
  • ios