Asianet Suvarna News Asianet Suvarna News

ಬಾಗ್ದಾದಿಯೇನೋ ಹತ, ಇನ್ನೂ ಇದ್ದಾರೆ ರಕ್ಕಸ ಉಗ್ರರು!

ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ (ಎಫ್‌ಬಿಐ) ಹಾಗೂ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇನ್ನೂ ತಲಾ 22 ಮತ್ತು 54 ಮೋಸ್ಟ್‌ ವಾಂಟೆಡ್‌ ಉಗ್ರರು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಸಕ್ರಿಯರಾಗಿದ್ದು, ಭಯೋತ್ಪಾದಕ ದಾಳಿಗಳನ್ನು ಎಸಗುತ್ತಿದ್ದಾರೆ. ಅವರ ಪೈಕಿ ಕೆಲ ಕುಖ್ಯಾತ ಉಗ್ರರ ವಿವರ ಇಲ್ಲಿದೆ.

Know more information about most wanted terrorists
Author
Bengaluru, First Published Oct 30, 2019, 3:56 PM IST

2011 ರಲ್ಲಿ ಅಮೆರಿಕ ರಹಸ್ಯ ಕಾರಾರ‍ಯಚರಣೆ ನಡೆಸಿ ಅಲ್‌-ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆಗೈದಿತ್ತು. ಇದೀಗ ಜಗತ್ತಿನ ನಂ.1 ಉಗ್ರ ಎನಿಸಿಕೊಂಡಿದ್ದ ಇರಾಕ್‌ ಹಾಗೂ ಸಿರಿಯಾದಲ್ಲಿ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಜನರನ್ನು ಹತ್ಯೆಗೈದು ಕುಖ್ಯಾತಿ ಗಳಿಸಿದ್ದ ಐಸಿಸ್‌ ಸಂಘಟನೆಯ ಸಂಸ್ಥಾಪಕ ಅಬು ಬಕರ್‌ ಅಲ್‌- ಬಾಗ್ದಾದಿಯನ್ನು ಅಮೆರಿಕ ಮತ್ತೆದೇ ರಹಸ್ಯ ಕಾರ್ಯಾಚರಣೆ ಮೂಲಕ ಸಂಹಾರ ಮಾಡಿದೆ.

ಅಲ್ಲಿಗೆ ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರರ ಪೈಕಿ ಮತ್ತೊಬ್ಬನ ಹತ್ಯೆಯಾದಂತಾಗಿದೆ. ಅಮೆರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ (ಎಫ್‌ಬಿಐ) ಹಾಗೂ ಭಾರತದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇನ್ನೂ ತಲಾ 22 ಮತ್ತು 54 ಮೋಸ್ಟ್‌ ವಾಂಟೆಡ್‌ ಉಗ್ರರು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಸಕ್ರಿಯರಾಗಿದ್ದು, ಭಯೋತ್ಪಾದಕ ದಾಳಿಗಳನ್ನು ಎಸಗುತ್ತಿದ್ದಾರೆ. ಅವರ ಪೈಕಿ ಕೆಲ ಕುಖ್ಯಾತ ಉಗ್ರರ ವಿವರ ಇಲ್ಲಿದೆ.

ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ

ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕರು ಹಸನ್‌ ಇಜ್‌-ಅಲ್‌-ದಿನ್‌

ಲೆಬನಾನ್‌ ಮೂಲದ ಭಯೋತ್ಪಾದಕನಾದ ಈತ ಲೆಬನೀಸ್‌ ಹಿಜ್‌ಬುಲ್‌ ಉಗ್ರ ಸಂಘಟನೆಯ ಸದಸ್ಯ. 1985, ಜೂನ್‌, 14ರಂದು ಟಿಡಬ್ಲ್ಯುಎ-847 ವಿಮಾನವನ್ನು ಅಪಹರಿಸಿದ್ದ ಪ್ರಕರಣದ ರೂವಾರಿ ಈತ. ಈ ವೇಳೆ ಅಮೆರಿಕ ನೇವಿ ಚಾಲಕ ರಾಬರ್ಟ್‌ ಎನ್ನುವವರನ್ನು ಗುಂಡಿಕ್ಕಿ ಕೊಂದು, ದೇಹವನ್ನು ಬಿಸಾಡಿ ಹೋಗಿದ್ದ. ವಿಮಾನದಲ್ಲಿದ್ದ ಹಲವು ಪ್ರಮಾಣಿಕರು ಮತ್ತು ಸಿಬ್ಬಂದಿಗಳ ಸಾವಿಗೆ ಕಾರಣನಾಗಿದ್ದ. ಅಮೆರಿಕ ಹುಡುಕುತ್ತಿರುವ ಮೋಸ್ಟ್‌ ವಾಂಡೆಟ್‌ ಭಯೋತ್ಪಾದಕ. ಈತನನ್ನು ಜೀವಂತ ಹಿಡಿದುಕೊಟ್ಟವರಿಗೆ 50 ಲಕ್ಷ ಡಾಲರ್‌(35 ಕೋಟಿ ರು.) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

ಅಬ್ದುಲ್‌ ರೆಹ್ಮಾನ್‌ ಯಾಸಿನ್‌

1993ರಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಚೇರಿ ಮೇಲಿನ ದಾಳಿಗೆ ಬಾಂಬ್‌ ತಯಾರಿಸಿಕೊಟ್ಟವನೇ ಈ ಯಾಸಿನ್‌ ಇರಾಕ್‌-ಅಮೆರಿಕನ್‌ ಮೂಲದ ದೇಶಭ್ರಷ್ಟ. ಡಬ್ಲ್ಯುಟಿಒ ಸಂಘಟನೆ ಕಚೇರಿ ಮೇಲೆ ದಾಳಿ ನಡೆದ ನಂತರ ಈತ ಎಲ್ಲಿಯೂ ಪತ್ತೆಯಾಗಿಲ್ಲ. 2003ರಲ್ಲಿ ಇರಾಕ್‌ ಮೇಲೆ ದಾಳಿ ಮಾಡಿದಾಗಲೂ ಈತ ಪತ್ತೆಯಾಗಿಲ್ಲ.

ಅವನಿಗಾಗಿ ಅಮೆರಿಕ ನಿರಂತರ ಶೋಧ ನಡೆಸುತ್ತಿದೆ. ಈತ ಹುಟ್ಟಿದ್ದು ಅಮೆರಿಕದ ಇಂಡಿಯಾನಾದ ಬ್ಲೂಮಿಂಗ್‌ಟನ್‌ನಲ್ಲಿ. ಆದರೆ ಈತನ ಮೂಲ ಇರಾಕ್‌. ಈತನ ಜನನದ ಬಳಿಕ ಈತನ ಕುಟುಂಬ ಇರಾಕ್‌ಗೆ ತೆರಳುತ್ತದೆ. ಹಾಗಾಗಿ ಈತ ಅಮೆರಿಕದ ಪ್ರಜೆ.

ಮರುಭೂಮಿಯಲ್ಲಿ ಬಾಗ್ದಾದಿ ಹೂತಿದ್ದ 170 ಕೋಟಿ ರೂ ಕುರಿಗಾಹಿಗಳ ಪಾಲು!

ಅಹ್ಮದ್‌ ಇಬ್ರಾಹಿಂ ಅಲ್‌ ಮುಘಾಸ್ಸಿ

ಅಹ್ಮದ್‌ ಅಲ್‌ ಮುಘಾಸ್ಸಿ ಅಮೆರಿಕ ಸರ್ಕಾರ ಬಯಸುತ್ತಿರುವ ಮತ್ತೊಬ್ಬ ಮೋಸ್ಟ್‌ ವಾಂಟೆಡ್‌ ಉಗ್ರ. ಈತನನ್ನು ಅಬು ಓಮರ್‌ ಅಥವಾ ಅರ್ಫಾದ್‌ ಎಂದೂ ಕರೆಯಲಾಗುತ್ತದೆ. 1996, ಜೂನ್‌ 25ರಂದು ಸೌದಿ ಅರೇಬಿಯಾದ ಖೋಬರ್‌ ಟವರ್‌ ಕಾಂಪ್ಲೆಕ್ಸ್‌ ಮೇಲೆ ಆಕ್ರಮಣದಲ್ಲಿ ಈತನ ಕೈವಾಡವಿದ್ದು, ಅಮೆರಿಕ ಈತನ ಸೆರೆ ವಾಸಕ್ಕೆ ಕಾತುರದಿಂದ ಕಾಯುತ್ತಿದೆ. ಸೌದಿ ಹಿಜ್‌ಬುಲ್‌ ಉಗ್ರ ಸಂಘಟನೆಯ ಮುಖ್ಯಸ್ಥನಾಗಿ ಈತ ಗುರುತಿಸಿಕೊಂಡಿದ್ದಾನೆ.

ಈ ಉಗ್ರ ಸಂಘಟನೆಯು ಸೌದಿ ಅರೇಬಿಯಾ, ಲೆಬನಾನ್‌, ಕುವೈತ್‌ ಮತ್ತು ಬರ್ಹೇನ್‌ಗಳಲ್ಲಿ ಅಮಾನವೀತ ಹಿಂಸಾ ಕೃತ್ಯಗಳನ್ನು ಎಸಗುತ್ತಾ ಸಕ್ರಿಯವಾಗಿದೆ. 2015 ಆಗಸ್ಟ್‌ 7ರಂದು ಈತ ಲೆಬನಾನ್‌ನಲ್ಲಿ ಸೆರೆಸಿಕಿದ್ದ, ಮತ್ತು ಸೌದಿ ಅರೇಬಿಯಾ ಈತನನ್ನು ಗಡಿಪಾರು ಮಾಡಿತ್ತು. ಆದರೆ ಇನ್ನೂ ಅಮೆರಿಕದ ವಶಕ್ಕೆ ಬಂದಿಲ್ಲ. ಹಾಗಾಗಿ ಇನ್ನೂ ಈತ ವಾಂಟೆಡ್‌ ಪಟ್ಟಿಯಲ್ಲಿದ್ದಾನೆ.

ಆಲಿ ಸಯೇದ್‌ ಬಿನ್‌ ಅಲಿ ಅಲ್‌ ಹೂರೇ

ಈತ ಕೂಡ 1996ರ ಖೋಬರ್‌ ಟವರ್‌ ಮೇಲೆ ಬಾಂಬ್‌ ಎಸೆದ ಪ್ರಕರಣದ ಪ್ರಮುಖ ಅಪರಾಧಿ. ಈತ ಕೂಡ ಸೌದಿ ಹಿಜ್‌ಬುಲ್ಲಾ ಉಗ್ರ ಸಂಘಟನೆಯ ಸದಸ್ಯ. ಖೋಬರ್‌ ಬಾಂಬ್‌ ದಾಳಿಗೂ ಮುನ್ನ ಈತ ಖೋಬರ್‌ ಪ್ರದೇಶದ ಸುತ್ತ ಬಾಂಬ್‌ ದಾಳಿ ಸಿದ್ಧತೆಗೆ ಸಂಘಟನೆಗೆ ಸಹಾಯ ಮಾಡಿದ್ದ.

ಇಬ್ರಾಹಿಂ ಸಲೀಹ್‌ ಮಹಮ್ಮದ್‌ ಅಲ್‌-ಯಾಕೂಬ್‌

1996ರ ಖೋಬರ್‌ ಬಾಂಬ್‌ ದಾಳಿಯ ಪ್ರಮುಖ ರೂವಾರಿ. ಈತನ ಮೇಲೆ ಅಮೆರಿಕ ಉದ್ಯೋಗಿಗಳು ಮತ್ತು ಅಮೆರಿಕ ಪ್ರಜೆಗಳ ಹತ್ಯೆಗೆ ಸಂಚು ರೂಪಿಸಿದ, ಅಮೆರಿಕದ ಸಂಪತ್ತನ್ನು ನಾಶಪಡಿಸಲು ಸಂಚು ರೂಪಿಸಿದ ಆರೋಪವೂ ಇದೆ. 2001ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾಜ್‌ರ್‍ ಬುಷ್‌ ಬಿಡುಗಡೆ ಮಾಡಿದ್ದ 22 ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿ ಈತನ ಹೆಸರೂ ಇದೆ.

ಅಯ್ಮಾನ್‌ ಅಲ್‌-ಝವಾಹಿರಿ

ಈಜಿಪ್ಟ್‌ ಮೂಲದ ಭಯೋತ್ಪಾದಕನಾದ ಈತ ಅಲ್‌-ಖೈದಾ ಸಂಘಟನೆಯ ಪ್ರಮುಖ ಸದಸ್ಯ. ಒಸಾಮಾ ಬಿನ್‌ ಲಾಡೆನ್‌ ಹತ್ಯೆ ನಂತರ ಇಸ್ಲಾಮಿಕ್‌ ಸಂಘಟನೆಯ ಹಿರಿಯ ಸದಸ್ಯನೀತ. ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆಕ್ರಮಣ ಮಾಡಿ ಅಶಾಂತಿ ಸೃಷ್ಟಿಸಿ ವಾತಾವರಣಕ್ಕೆ ಕಾರಣನಾಗುತ್ತಿದ್ದಾನೆ. ಸೆಪ್ಟೆಂಬರ್‌ 11ರ ದಾಳಿ ಬಳಿಕ ಅಮೆರಿಕ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದು, ಇವನನ್ನು ಹುಡುಕಿಕೊಟ್ಟವರಿಗೆ 2.5 ಕೋಟಿ ಡಾಲರ್‌ ಬಹುಮಾನ ನೀಡುವುದಾಗಿ ಘೋಷಿಸಿದೆ.

ಸೈಫ್‌ ಅಲ್‌-ಆದೆಲ್‌

ಈತ ಅಲ್‌-ಖೈದಾ ಉಗ್ರ ಸಂಘಟನೆಯ ಪ್ರಮುಖ ಸದಸ್ಯರಲ್ಲಿ ಒಬ್ಬ. 1998ರಲ್ಲಿ ಕೀನ್ಯಾದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಬಾಂಬ್‌ ದಾಳಿ ನಡೆಸಿದ್ದ ಹಿಂದೆ ಈತನ ಕೈವಾಡವಿದ್ದು ಈತನ ಸೆರೆಗಾಗಿ ಅಮೆರಿಕ ನಿರಂತರ ಪ್ರಯತ್ನ ನಡೆಸುತ್ತಿದೆ.

20 ವರ್ಷದಿಂದೀಚೆಗೆ ಹತ್ಯೆಯಾದ ಉಗ್ರರು ಮಹಮ್ಮದ್‌ ಅತೇಫ್‌

ಮಹಮ್ಮದ್‌ ಅತೇಫ್‌ ಅಲ್‌-ಖೈದಾ ಭಯೋತ್ಪಾದಕ ಸಂಘಟನೆಯ ಮಿಲಿಟರಿ ಮುಖ್ಯಸ್ಥ. ಈತನನ್ನು ಒಸಾಮಾ ಬಿನ್‌ ಲಾಡೆನ್‌ನ ಬಲಗೈ ಬಂಟರಲ್ಲಿ ಒಬ್ಬ ಎಂದೇ ಪರಿಗಣಿಸಲಾಗಿತ್ತು. ಈಜಿಪ್ಟ್‌ ಏರ್‌ಫೋರ್ಸ್‌ನಲ್ಲಿ ಕಲೆ ದಿನಗಳ ಕಾಲ ಕಾರ‍್ಯ ನಿರ್ವಹಿಸಿದ್ದ ಮಹಮ್ಮದ್‌ ಅನಂತರ ಅಗ್ರಿಕಲ್ಚರಲ್‌ ಇಂಜಿನಿಯರ್‌ ಕುಡ ಆಗಿದ್ದ. ಹಾಗೆಯೇ ಈಜಿಪ್ಟಿನ ಇಸ್ಲಾಮಿಕ್‌ ಜಿಹಾದ ಸಂಘಟನೆಯ ಸದಸ್ಯನಾಗಿದ್ದ.

1988 ರಲ್ಲಿ ಒಸಾಮಾನ ಬಿನ್‌ ಲಾಡೆನ್‌ ಈತನನ್ನು ಭೇಟಿ ಮಾಡಿ, ಅಲ್‌-ಖೈದಾ ಸಂಘಟನೆಯ ಸ್ಥಾಪನೆ ಬಗ್ಗೆ ಮಾತನಾಡಿದ್ದ. ಅಲ್ಲಿಂದ ಇವರಿಬ್ಬರ ನಂಟು ಬೆಳೆದಿತ್ತು. ಈತನ ಕುಕೃತ್ಯಗಳ ಬಗ್ಗೆ ಅಮೆರಿಕ ಗುಪ್ತಚರ ಇಲಾಖೆಗಗಳಿಗೆ ಸ್ಪಷ್ಟಮಾಹಿತಿ ಇಲ್ಲ. ಆದರೆ 2001ರಲ್ಲಿ ಅಮೆರಿಕ ಕಾಬೂಲ್‌ನಲ್ಲಿ ನಡೆಸಿದ ಏರ್‌ಸ್ಟೆ್ರೖಕ್‌ನಲ್ಲಿ ಈತ ಸೇರಿದಂತೆ ಇವರ 6 ಂದಿ ಸಹಚರರು ಹತರಾಗಿದ್ದಾರೆ.

ಒಸಾಮಾ ಬಿನ್‌ ಲಾಡೆನ್‌

ಒಸಾಮಾ ಬಿನ್‌ ಲಾಡೆನ್‌ ಸೌದಿ ಅರೇಬಿಯಾದ ಶ್ರೀಮಂತ ಕುಟುಂಬದ ಸದಸ್ಯ. ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಅಲ್‌-ಖೈದಾದ ಸಂಸ್ಥಾಪನಾಗ್ದಿ ಈತ ಅಮೆರಿಕದಲ್ಲಿ ಸೆಪ್ಟೆಂಬರ್‌ 2001ರಂದು ನಡೆಸಿದ ದಾಳಿ 3000ಕ್ಕೂ ಅಧಿಕ ಜನರ ಸಾವಿಗೆ ಕಾರಣನಾಗಿದ್ದ. ನೈರೋಬಿ, ಕೀನ್ಯಾ, ತಾಂಜಾನಿಯಾ ಮುಂತಾದೆಡೆ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಬಾಂಬ್‌ ದಾಳಿ ನಡೆಸಿದ್ದರ ಹಿಂದೆ ಈತನ ಕೈವಾಡವಿತ್ತು. ಹೀಗಾಗಿ ಈತನನ್ನು ವಶಕ್ಕೆ ಪಡೆಯಲು ಅಮೆರಿಕ ಶತ ಪ್ರಯತ್ನ ನಡೆಸುತ್ತಿತ್ತು. ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ನಂ.1 ಸ್ಥಾನ ಪಡೆದಿದ್ದ ಈತನನ್ನು ಅಂತೂ 2011ರಲ್ಲಿ ಅಮೆರಿಕ ಪಾಕಿಸ್ತಾನದ ಅಬ್ಬೋತ್ತಬಾದ್‌ನಲ್ಲಿ ಸೈನಿಕ ಕಾರಾರ‍ಯಚರಣೆ ನಡೆಸಿ ಹತ್ಯಗೈದಿತು.

ಫಜಲ್‌ ಅಬ್ದುಲ್ಲಾ ಮಹಮ್ಮದ್‌

1998ರಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ಬಾಂಬ್‌ ದಾಳಿ ನಡೆಸಿದ್ದ ಪ್ರಕರಣದ ಪ್ರಮುಖ ಅಪರಾಧಿಗಳಲ್ಲಿ ಒಬ್ಬ. ಮೂಲಗಳ ಪ್ರಕಾರ 2011ರಲ್ಲಿ ಸೊಮಾಲಿಯಾದಲ್ಲಿ ಈತನನ್ನು ಹತ್ಯೆ ಮಾಡಲಾಗಿದೆ. ಕೀನ್ಯಾ ಪೊಲೀಸರು ಡಿಎನ್‌ಎ ಪರೀಕ್ಷೆ ಮಾಡುವ ಮೂಲ ಈತನ ಸಾವನ್ನು ದೃಢಪಡಿಸಿದ್ದಾರೆ.

ಮುಸ್ತಾಫಾ ಮಹಮ್ಮದ್‌ ಫಧಿಲ್‌

ಈತ ಕೀನ್ಯಾ ಮತ್ತು ಈಜಿಪ್ಟ್‌ ಪ್ರಜೆ. ಮುಸ್ತಾಫಾ ಕೂಡ 1998 ಆಗಸ್ಟ್‌ 7ರಂದು ತಾಂಜಾನಿಯಾ, ನೈರೋಬಿ, ಕೀನ್ಯಾ, ದಾರ್‌ ಎಸ್‌ ಸಲಾಮ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮೇಲೆ ನಡೆದ ಬಾಂಬ್‌ ದಾಳಿ ಪ್ರಕರಣದಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ. ಈತ ಅಷ್ಘಾನಿಸ್ತಾನದಲ್ಲಿ ಹತ್ಯೆಯಾಗಿದ್ದಾನೆ.

ಇದೇ ಆರೋಪ ಹೊತ್ತಿದ್ದ ಮೋಸ್ಟ್‌ ವಾಂಟೆಡ್‌ ಉಗ್ರರಾದ ಫಹೀದ್‌ ಮಹಮ್ಮದ್‌ ಅಲಿ ಸಲಾಮ್‌, ಅಹ್ಮೆದ್‌ ಗಿಲಾನಿ, ಶೇಖ್‌ ಅಹ್ಮದ್‌ ಸಲೀಮ್‌, ಅನಾಸ್‌ ಅಲ್‌-ಲಿಬಿನನ್ನೂ ಹತ್ಯೆ ಮಾಡಲಾಗಿದೆ.

ಮುಶಿನ್‌ ಮುಸಾ ಮುತ್ವಾಲಿ ಅತ್ವಾಹ್‌

ಈಜಿಪ್ಟ್‌ ಮೂಲದ ಮುಶಿನ್‌ ಮುಸಾ ಅಲಿಯಾಸ್‌ ಅಬ್ದುಲ್‌ ರಹ್ಮಾನ್‌, ಅಬು ತುರಬ್‌, 1998ರಲ್ಲಿ ತಾಂಜಾನಿಯಾ,ನೈರೋಬಿ, ಕೀನ್ಯಾ, ದಾರ್‌ ಎಸ್‌ ಸಲಾಮ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ನಡೆದ ಬಾಂಬ್‌ ದಾಳಿಯ ಪ್ರಮುಖ ಆರೋಪಿ. ಈತನನ್ನು ಅಮೆರಿಕ ಸರ್ಕಾರ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿ ಸೇರಿಸಿದ್ದು, 2006ರಲ್ಲಿ ಪಾಕಿಸ್ತಾನ ಸೇನೆಯು ಅಷ್ಘಾನಿಸ್ತಾನದ ಗಡಿಯಲ್ಲಿ ನಡೆಸಿದ ಕಾರಾರ‍ಯಚರಣೆಯಲ್ಲಿ ಹತನಾಗಿದ್ದಾನೆ ಎಂದು ಪಾಕ್‌ ಘೋಷಿಸಿದೆ.

ಭಯೋತ್ಪಾದಕ ದಾಳಿಗಳು ಕಡಿಮೆಯಾಗುತ್ತಿವೆಯೇ?

2017ರಲ್ಲಿ ಜಗತ್ತಿನಾದ್ಯಂತ ಒಟ್ಟು 5.6 ಕೋಟಿ ಜನರು ಮೃತಪಟ್ಟಿದ್ದಾರೆ. ಅವರಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬಲಿಯಾದವರು 26,000 ಜನರು. ಪ್ರತಿ 2000 ಮರಣಗಳಲ್ಲಿ 0.05% ಜನರು ಉಗ್ರರಿಂದ ಸಾವನ್ನಪ್ಪುತ್ತಿದ್ದಾರೆ. 2017ರಲ್ಲಿ ಭಾರತದಲ್ಲಿ 465 ಜನರು ಭಯೋತ್ಪಾನದನೆಗೆ ಬಲಿಯಾಗಿದ್ದಾರೆ. 1970-2017ರ ವರೆಗಿನ ಅಂಕಿಅಂಶಗಳನ್ನು ಗಮನಿಸುವುದಾದರೆ ಪಶ್ಚಿಮ ಯುರೋಪ್‌ ಮತ್ತು ಅಮೆರಿಕದಲ್ಲಿ ಭಯೋತ್ಪಾದಕ ಕೃತ್ಯಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ. ಪಶ್ಚಿಮ ಯುರೋಪ್‌ನಲ್ಲಿ ಒಟ್ಟು ದಾಳಿಯಲ್ಲಿ 2.7% ದಾಳಿಗಳು ನಡೆದರೆ, ಅಮೆರಿದಲ್ಲಿ 1%ಗಿಂತ ಕಡಿಮೆ ದಾಳಿಗಳು ನಡೆದಿವೆ.

Follow Us:
Download App:
  • android
  • ios