Asianet Suvarna News Asianet Suvarna News

Milma VS Nandini: ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ನಂದಿನಿ ಮಳಿಗೆ, ಕೆಎಂಎಫ್‌ ಗುರಿ

ಮುಂದಿನ ಆರು ತಿಂಗಳಲ್ಲಿ ಕೇರಳದಲ್ಲಿ 25 ಮಳಿಗೆಗಳನ್ನು ಆರಂಭ ಮಾಡುವ ಯೋಜನೆಯಲ್ಲಿರುವ ಕೆಎಂಎಫ್‌, ಇತ್ತೀಚೆಗೆ ಮಿಲ್ಮಾದಿಂದ ಎದುರಾದ ವಿರೋಧದ ಬಗ್ಗೆಯೂ ಮಾತನಾಡಿದೆ. ಕೇರಳದಲ್ಲಿನ ಹಾಲಿನ ಕೊರತೆಯನ್ನು ನಾವು ನೀಗಿಸುತ್ತಿದ್ದೇವಷ್ಟೇ ಎಂದು ಹೇಳಿ

KMF says atleast one Nandini outlet in Every taluk of Kerala Milma san
Author
First Published Jun 21, 2023, 3:57 PM IST | Last Updated Jun 21, 2023, 3:57 PM IST

ತಿರುವನಂತಪುರ (ಜೂ.21): ಕೇರಳ ಸಹಕಾರ ಹಾಲು ಒಕ್ಕೂಟ ಅಥವಾ ಮಿಲ್ಮಾದಿಂದ ಕೊಂಚ ಪ್ರತಿರೋಧ ಎದುರಿಸಿದ್ದ ಕರ್ನಾಟಕದ ಕೆಎಂಎಫ್‌, ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ವಶ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಕರ್ನಾಟಕ ಹಾಲು ಮಹಾಮಂಡಳದ ಬ್ರ್ಯಾಂಡ್‌ ಆಗಿರುವ ನಂದಿನಿ, ಮುಂದಿನ ಆರು ತಿಂಗಳಲ್ಲಿ ಕೇರಳದಲ್ಲಿ ಕನಿಷ್ಠ 25 ಮಳಿಗೆಗಳನ್ನು ಆರಂಭ ಮಾಡುವ ನಿರ್ಧಾರ ಮಾಡಿದೆ. ದೀರ್ಘಾವಧಿಯ ಯೋಜನೆಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದಾದರೂ ನಂದಿನಿ ಮಳಿಗೆಗಳನ್ನು ಆರಂಭ ಮಾಡುವ ಗುರಿ ಇರಿಸಿಕೊಂಡಿದ್ದೇವೆ ಎಂದು ತಿಳಿಸಿದೆ. ನಾವು ಕೇರಳದ ಮಿಲ್ಮಾದೊಂದಿಗೆ ಪೈಪೋಟಿಯಲ್ಲಿಲ್ಲ. ಆದರೆ, ಕೇರಳದಲ್ಲಿರುವ ಎರಡೂವರೆ ಲಕ್ಷ ಲೀಟರ್‌ ಹಾಲಿನ ಕೊರತೆಯ ಲಾಭವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಕೆಎಂಎಫ್‌ ತಿಳಿಸಿದೆ. ಬ್ರ್ಯಾಂಡ್‌ನ ಏಜೆನ್ಸಿ ಹಕ್ಕುಗಳನ್ನು ಸಣ್ಣ ಅಂಗಡಿಗಳಿಗೆ ನೀಡಲಾಗುವುದಿಲ್ಲ ಎಂದು ನಂದಿನಿ ತಿಳಿಸಿದೆ.. ಸರಿಯಾದ ತಾಪಮಾನದಲ್ಲಿ ಹಾಲು ಸಂಗ್ರಹಿಸಲು ಮತ್ತು ವಿತರಿಸಲು ಕೋಲ್ಡ್ ಸ್ಟೋರೇಜ್ ಸೌಲಭ್ಯ ಹೊಂದಿರುವ ವಾಹನ ಹೊಂದಿರುವವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 2 ಮಳಿಗೆ ತೆರೆಯಲಿದ್ದೇವೆ. ಜನನಿಬಿಡ ಜಿಲ್ಲೆಗಳಲ್ಲಿ ಹೆಚ್ಚಿನ ಮಳಿಗೆಗಳೂ ಇರಬಹುದು ಎಂದಿದೆ.

ಈ 25 ಮಳಿಗೆಗಳ ಮೂಲಕ ನಿತ್ಯ 25,000 ಲೀಟರ್ ಹಾಲು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಎರಡು ವರ್ಷಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಒಂದು ಮಳಿಗೆಯನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದೆ. ಪ್ರಸ್ತುತ, ಎರ್ನಾಕುಲಂ ಜಿಲ್ಲೆಯ ಕಾಕ್ಕನಾಡ್ ಮತ್ತು ಎಲಮಕರ, ಪತ್ತನಂತಿಟ್ಟದ ಪಂದಳಂ, ಮಲಪ್ಪುರಂನ ಮಂಜೇರಿ ಮತ್ತು ತಿರೂರ್ ಮತ್ತು ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಕೋಝಿಕ್ಕೋಡ್, ತಲಶ್ಶೇರಿ ಮತ್ತು ಗುರುವಾಯೂರ್‌ನಲ್ಲಿಯೂ ಔಟ್‌ಲೆಟ್‌ಗಳನ್ನು ತೆರೆಯಲಾಗುವುದು. ಇದರೊಂದಿಗೆ ಇನ್ನೂ 16 ಮಳಿಗೆಗಳನ್ನು ತೆರೆಯಲಾಗುವುದು ಎಂದು ಹೇಳಿದೆ.

ಅಮೂಲ್‌ vs ನಂದಿನಿ ಬಳಿಕ, ಕೇರಳದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಮಿಲ್ಮಾ ವಿರೋಧ!

ಕೇರಳದ ಮುಂದುವರಿದ ವಿರೋಧ: ರಾಜ್ಯದಲ್ಲಿನ ಮಿಲ್ಮಾ ಮತ್ತು ನಂದಿನಿ ಹಾಲಿನ ಬ್ರ್ಯಾಂಡ್‌ಗಳ ನಡುವಿನ ಸಮಸ್ಯೆಯನ್ನು ಬಗೆಹರಿಸುವಂತೆ ಕೇರಳ ಸರ್ಕಾರ ಭಾನುವಾರ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ (ಎನ್‌ಡಿಡಿಬಿ) ಪತ್ರ ಬರೆದಿದೆ. ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ನಂದಿನಿಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೇರಳಕ್ಕೆ ಪ್ರವೇಶಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಲ್‌ಡಿಎಫ್ ಸರ್ಕಾರವು ಈ ಕ್ರಮವನ್ನು ಬಲವಾಗಿ ವಿರೋಧಿಸುವುದಾಗಿ ಪ್ರತಿಪಾದಿಸಿದೆ.

 

Milma VS Nandini: 'ನಂದಿನಿ ಗುಣಮಟ್ಟ ಕಳಪೆ, ಮಲಯಾಳಿಗಳು ಖರೀದಿಸ್ಬೇಡಿ..' ಕೇರಳ ಸಚಿವೆಯ ದ್ವೇಷದ ಹೇಳಿಕೆ

ಕೇರಳ ಎನ್‌ಡಿಡಿಬಿಗೆ ದೂರು ನೀಡಿದೆ ಎಂದು ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಹಾಲು ಸಹಕಾರಿಗಳ ರಾಜ್ಯ ಸಚಿವ ಜೆ ಚಿಂಚುರಾಣಿ ಹೇಳಿದ್ದಾರೆ. ನಂದಿನಿ ಮತ್ತು ಮಿಲ್ಮಾ ಎರಡೂ ಸರ್ಕಾರದಿಂದ ನಡೆಸಲ್ಪಡುವ ಸಂಸ್ಥೆಗಳು ಮತ್ತು ಆದ್ದರಿಂದ, ಬೇರೆ ರಾಜ್ಯಕ್ಕೆ ಪ್ರವೇಶಿಸಲು ಯೋಜಿಸುವಾಗ, ಆ ರಾಜ್ಯದ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

Latest Videos
Follow Us:
Download App:
  • android
  • ios