Viral Video: 'ಸಿಂಹದಂಥ ಮಗನಿಗೆ ಜನ್ಮ ನೀಡಿದ್ದೀರಿ..'ಕೆಎಲ್‌ ಶರ್ಮ ಪತ್ನಿ ಹೇಳಿದ ಮಾತಿಗೆ ಸೋನಿಯಾ ಗಾಂಧಿ ಏನಂದ್ರು?


KL Sharma Meet Rahul Gandhi ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಕಾಂಗ್ರೆಸ್‌ನ ಕೆಎಲ್‌ ಶರ್ಮ ದೊಡ್ಡ ಅಂತರದಲ್ಲಿ ಮಣಿಸಿದ್ದಾರೆ. ಶುಕ್ರವಾರ ಕಿಶೋರಿ ಲಾಲ್‌ ಶರ್ಮ ತಮ್ಮ ಪತ್ನಿಯ ಜೊತೆ ದೆಹಲಿಗೆ ಆಗಮಿಸಿ ಗಾಂಧಿ ಕುಟುಂಬವನ್ನು ಭೇಟಿ ಮಾಡಿದ್ದರು.

KL Sharma wife to Sonia Gandhi given birth to lion she got this reply san

ನವದೆಹಲಿ (ಜೂ.8): 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ್‌ ಗಾಂಧಿಯನ್ನು ಮಣಿಸುವ ಮೂಲಕ ಸ್ಮೃತಿ ಇರಾನಿ ದೈತ್ಯ ಸಂಹಾರಿಯಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿಯನ್ನು  ಮಣಿಸಲೇಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್‌ ಅದರಲ್ಲಿ ಯಶಸ್ವಿಯಾಗಿದೆ. ಆದರೆ, ಈ ಭಾರಿ ರಾಹುಲ್‌ ಗಾಂಧಿಯ ಬದಲು, ಈ ಕ್ಷೇತ್ರಕ್ಕೆ ತಮ್ಮ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಕಿಶೋರಿ ಲಾಲ್‌ ಶರ್ಮ ಅಂದರೆ ಕೆಎಲ್‌ ಶರ್ಮ ಅವರಿಗೆ ಟಿಕೆಟ್‌ ನೀಡಿತ್ತು. ನಿರೀಕ್ಷೆಯಂತೆಯೇ ಅವರು ಭಾರೀ ಮತಗಳ ಅಂತರದಲ್ಲಿ ಅಮೇಥಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಸೋಲಿಸಿದ್ದರು. ಇದರ ಬೆನ್ನಲ್ಲಿಯೇ ಅವರು ಶುಕ್ರವಾರ ನವದೆಹಲಿಗೆ ಆಗಮಿಸಿ ಗಾಂಧಿ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಪತ್ನಿಯನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಪರಿಚಯ ಮಾಡಿಕೊಟ್ಟರು. ಇದರ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದೆ.

2.30 ನಿಮಿಷದ ವಿಡಿಯೋವನ್ನು ಕಾಂಗ್ರೆಸ್‌ ಎಕ್ಸ್‌ನಲ್ಲಿ ಕಂಚಿಕೊಂಡಿದೆ. ಈ ವೇಳೆ ರಾಹುಲ್‌ ಗಾಂದಿ ಅಮೇಥಿಯ ಭಾರಿ ಬಿಸಲಿನಲ್ಲಿ ಮಾಡಿದ ಪ್ರಚಾರದ ದಿನಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಪ್ರಚಾರದ ಕೊನೆಯ ದಿನ ಅಮೇಥಿಯಲ್ಲಿ ಭಾರೀ ಬಿಸಿಲಿತ್ತು. ಪ್ರಚಾರದ ಸಮಯದಲ್ಲಿ ರಾಹುಲ್‌ ಗಾಂಧಿ ಧರಿಸಿದ್ದ ಬಟ್ಟೆ ಸಂಪೂರ್ಣ ಒದ್ದೆಯಾಗಿತ್ತು ಎಂದು ಕೆಎಲ್‌ ಶರ್ಮ ಹೇಳಿದ್ದಾರೆ. ಇನ್ನು ರಾಹುಲ್‌ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ವಹಣೆ ಹೇಗಿದೆ ಎಂದು ಕೆಎಲ್‌ ಶರ್ಮ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಬಹಳ ಅದ್ಭುತವಾಗಿ ನಿರ್ವಹಣೆ ತೋರಿದಿದ್ದೇವೆ ಎಂದಿದ್ದಾರೆ. ಇನ್ನು ಸೋನಿಯಾ ಗಾಂಧಿಯವರನ್ನು ತಬ್ಬಿಕೊಂಡು ಕೆಎಲ್‌ ಶರ್ಮ ಪತ್ನಿ ಕಣ್ಣೀರಿದ್ದಾರೆ. ವಿಡಿಯೋದ ಕೊನೆಯಲ್ಲಿ ಕೆಎಲ್‌ ಶರ್ಮ ಅವರ ಪತ್ನಿ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ನೀವು ಸಿಂಹದಂತ ಮಗನಿಗೆ ಜನ್ಮ ನೀಡಿದ್ದೀರಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರ ನೀಡುವ ಸೋನಿಯಾ ಗಾಂಧಿ, ಯಾಕೆಂದರೆ, ನಾನು ಸಿಂಹಿಣಿ ಎಂದು ಹೇಳಿದ್ದಾರೆ. ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾ ಸೈಟ್‌ನಲ್ಲಿ ಭಾರೀ ವೈರಲ್‌ ಆಗಿದೆ.

ವೀಡಿಯೊವನ್ನು ಹಂಚಿಕೊಳ್ಳುವಾಗ, ಕಾಂಗ್ರೆಸ್ ಅಮೇಥಿ-ರಾಯ್ ಬರೇಲಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಬರೆದುಕೊಂಡಿದೆ. ಈ ಸಂಬಂಧ ಸದಾ ಸೇವೆಯೊಂದಿಗೆ ಸಮರ್ಪಣಾಭಾವದಿಂದ ಕೂಡಿದೆ. ಕಿಶೋರಿ ಲಾಲ್ ಅವರು 40 ವರ್ಷಗಳಿಗೂ ಹೆಚ್ಚು ಕಾಲ ಅಮೇಥಿ ಜನರ ಸುಖ-ದುಃಖದಲ್ಲಿ ಅವರ ಜೊತೆ ನಿಂತಿದ್ದಾರೆ. ಈಗ ಜನರು ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಐತಿಹಾಸಿಕ ವಿಜಯದ ನಂತರ ಕಿಶೋರಿ ಜಿ ಅವರು ತಮ್ಮ ಕುಟುಂಬದೊಂದಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾದರು ಎಂದು ಬರೆದುಕೊಂಡಿದೆ.

ರಾಹುಲ್‌ ಇಲ್ಲದೇ ಅಮೇಥಿ ಸ್ಮೃತಿ ಇರಾನಿ ಪಾಲಿಗೆ ಸುಲಭದ ತುತ್ತು: ಕಾಂಗ್ರೆಸ್‌ನಿಂದ ಇಲ್ಲಿ ಕೆಎಲ್ ಶರ್ಮಾ ಕಣಕ್ಕೆ

ಜೂನ್ 4 ರಂದು ಬಂದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಕಿಶೋರಿ ಲಾಲ್ ಶರ್ಮಾ ಅವರು ಕೇಂದ್ರ ಸಚಿವೆ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರನ್ನು 1.67 ಲಕ್ಷ ಮತಗಳಿಂದ ಸೋಲಿಸುವ ಮೂಲಕ ಉತ್ತರ ಪ್ರದೇಶದಲ್ಲಿ ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯಿಂದ ದೊಡ್ಡ ಗೆಲುವು ದಾಖಲಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಸ್ಮೃತಿ ಇರಾನಿ 3,72,032 ಮತಗಳನ್ನು ಪಡೆದರೆ, ಶರ್ಮಾ 5,39,228 ಮತಗಳನ್ನು ಪಡೆದರು. ಬಿಎಸ್ಪಿ ಅಭ್ಯರ್ಥಿ 34,534 ಮತಗಳನ್ನು ಪಡೆದಿದ್ದಾರೆ.

ರಾಯ್‌ಬರೇಲಿ ಉಳಿಸಿಕೊಳ್ಳಲು ಮುಂದಾದ ರಾಹುಲ್ ಗಾಂಧಿ? ವಯನಾಡು ಕ್ಷೇತ್ರದ 'ಕೈ' ಅಭ್ಯರ್ಥಿ ಇವರೇನಾ?

Latest Videos
Follow Us:
Download App:
  • android
  • ios