Asianet Suvarna News Asianet Suvarna News

ಬರಿಗಾಲಲ್ಲಿ ರಸ್ತೆ ದಾಟುತ್ತಿದ್ದ ಮಗುವಿಗೆ ಚಪ್ಪಲಿ, ಬಟ್ಟೆ ಕೊಡಿಸಿದ ಹೃದಯವಂತ ಬೈಕರ್‌!

ಇಂಟರ್ನೆಟ್‌ನಲ್ಲಿ ಸದಾಕಾಲ ಅವ್ರು ಬಟ್ಟೆ ಬಿಚ್ಚಿದ್ರು, ಇವ್ರು ಡಾನ್ಸ್ ಮಾಡಿದ್ರು ಅಂತಾ ಸುದ್ದಿಯಾಗೋ ಕಾಲದಲ್ಲಿ, ಇಂದು ಸೋಶಿಯಲ್‌ ಮೀಡಿಯಾದಲ್ಲಿ ನೋಡಿದಂತ ಅತ್ಯಂತ ಹ್ಯಾಪಿಯೆಸ್ಟ್‌ ವಿಡಿಯೋ ಇದು.
 

kind hearted biker gave shoes clothes to  child who crossing road barefoot san
Author
First Published May 26, 2024, 7:52 PM IST

ಸೋಶಿಯಲ್‌ ಮೀಡಿಯಾವನ್ನು ಹೇಗೆ ಬೇಕಾದ್ರೂ ಯೂಸ್‌ ಮಾಡಿಕೊಳ್ಳಬಹುದು. ಬಹುಶಃ ಡೆಮಾಕ್ರಸಿ ಅಂಥೇನಾದ್ರೂ ಇದ್ರೆ ಅದು ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ. ರೀಲ್ಸ್‌, ಲೈಕ್ಸ್‌ಗಾಗಿ ಬಟ್ಟೆ ಬಿಚ್ಚೋಕು ರೆಡಿಯಾಗೋ ರೀಲ್ಸ್‌ ತಾರೆಯರು ಒಂದು ಕಡೆಯಾದರೆ, ಸಿನಿಮಾ ತಾರೆಗಳದ್ದು ಇನ್ನೊಂದು ರೀತಿ. ಆದರೆ, ಕೆಲವು ಕಂಟೆಂಟ್‌ ಕ್ರಿಯೆಟರ್‌ಗಳು ತಾವು ಮಾಡುವ ಸಮಾಜಮುಖಿ ಕೆಲಸವನ್ನು ಸೋಶಿಯಲ್‌ ಮೀಡಿಯಾ ಮೂಲಕವೇ ಹಂಚಿಕೊಳ್ಳುತ್ತಾರೆ. ಅವರೂ ಕೂಡ ಲೈಕ್ಸ್‌ ಹಾಗೂ ವೀವ್ಸ್‌ನ ನಿರೀಕ್ಷೆಯಲ್ಲೇ ಇದನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಾರಾದರೂ, ಅವರ ಕೆಲಸಗಳನ್ನು ನೋಡಿದಾಗ ಹೃದಯ ತುಂಬಿ ಬರುತ್ತದೆ. ಅಂಥದ್ದೇ ಒಂದು ಇನ್ಸ್‌ಟಾಗ್ರಾಮ್‌ ಪೇಜ್‌ ಬಿಕಮ್‌ ಹೆಲ್ಪರ್‌ (Become Helper). ಇದೇ ಹೆಸರಿನಲ್ಲಿ ಯೂಟ್ಯೂಬ್‌ ಪೇಜ್‌ ಕೂಡ ಇವರು ಹೊಂದಿದ್ದಾರೆ. 290ಕ್ಕೂ ಅಧಿಕ ಪೋಸ್ಟ್‌ಗಳನ್ನು ತಮ್ಮ ಇನ್ಸ್‌ಟಾ ಪೇಜ್‌ನಲ್ಲಿ ಮಾಡಿರುವ ಇವರಿಗೆ 2.19 ಲಕ್ಷ ಫಾಲೋವರ್ಸ್‌ಗಳಿದ್ದಾರೆ. ತಮ್ಮನ್ನು ತಾವು ವಿಡಿಯೋ ಕ್ರಿಯಟರ್‌ ಎಂದು ಹೇಳುವ ಇವರು, 'ನಾನು ಸಂತೋಷವನ್ನು ಹರಡುತ್ತೇನೆ ಮತ್ತು ಎಲ್ಲರಿಗೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ' ಎಂದು ತಮ್ಮ ಬಯೋದಲ್ಲಿ ಬರೆದುಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ ಇವರ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋ ಸಖತ್‌ ವೈರಲ್‌ ಆಗಿದೆ.

ವಿಡಿಯೋದಲ್ಲಿ ಎಲ್ಲಿಯೂ ತಮ್ಮ ಮುಖವನ್ನು ತೋರಿಸಿಕೊಳ್ಳದ ಈತ, ಬೈಕ್‌ನಲ್ಲಿ ಹೋಗುವಾಗ ತಾಯಿಯೊಬ್ಬಳು ತನ್ನ ಚಿಕ್ಕ ಮಗುವನ್ನು ರಸ್ತೆ ದಾಟಿಸುತ್ತಿರುವುದು ಕಂಡಿದೆ. ತಾಯಿಯ ಕಾಲಲ್ಲಿ ಚಪ್ಪಲಿ ಇದ್ದರೆ,  ಒಂದು ಬನಿಯನ್‌ ಹಾಗೂ ಚಕ್ಕ ಚಡ್ಡಿ ಹಾಕಿಕೊಂಡಿದ್ದ ಮಗುವಿನ ಕಾಲಿನಲ್ಲಿ ಚಪ್ಪಲಿಯೂ ಇದ್ದಿರಲಿಲ್ಲ. ಬಿಸಿಲಿನ ವಾತಾವರಣದಲ್ಲಿ ಮಗುವಿನ ಕಷ್ಟವನ್ನು ಅರಿತ ಬೈಕರ್‌, ಸ್ವತಃ ತಾನೇ ಹೋಗಿ ಚಪ್ಪಲಿ ತಂದು ಮಗುವಿನ ತಾಯಿಗೆ ಕೊಡುತ್ತಾನೆ. ಮಗು ಚಪ್ಪಲಿ ಹಾಕಿಕೊಂಡು ಖುಷಿಯಲ್ಲಿ ಇರುವಾಗಲೇ ಬರೀ ಬನಿಯನ್‌ ತೊಟ್ಟಿದ್ದ ಮಗುವಿಗೆ ಹೊಸ ಟಿಶರ್ಟ್‌ ಹಾಗೂ ಚಿಕ್ಕ ಶಾರ್ಟ್ಸ್‌ಅನ್ನು ತಂದುಕೊಡುತ್ತಾನೆ. ಇದನ್ನು ಸ್ವತಃ ತಾವೇ ಮಗುವಿಗೆ ಹಾಕಿ ಆನಂದಿಸಿದ್ದಾರೆ.

ಮಗು ಇದನ್ನೆಲ್ಲಾ ಹಾಕಿಕೊಂಡು ಖುಷಿಯಲ್ಲಿ ಇರುವಾಗಲೇ, ಕೊನೆಯಲ್ಲಿ ಚಿಪ್ಸ್‌ ಪ್ಯಾಕೆಟ್‌ ಹಾಗೂ ಒಂದು ಚಿಕ್ಕ ಜ್ಯೂಸ್‌ ಬಾಟಲ್‌ಅನ್ನು ಬೈಕರ್‌ ನೀಡಿದ್ದಾನೆ. ಮಗುವನ್ನು ಹೊಸ ಬಟ್ಟೆಯಲ್ಲಿ ನೋಡಿ ಆಕೆಯ ನೀಡಿರುವ ಸ್ಮೈಲ್‌ ಈ ವಿಡಿಯೋದಲ್ಲಿ ಹೈಲೈಟ್‌ ಕೂಡ ಆಗಿದೆ.

ಬೆಕ್ಕು, ನಾಯಿ ಜತೆಗಿನ ಫೋಟೋ ರಶ್ಮಿಕಾ ಹಂಚಿಕೊಂಡ್ರೆ, 'ಪ್ರಾಣಿಗಳಿಗೆ ನಿಯತ್ತಿದೆ..' ಅಂತಾ ಕಾಮೆಂಟ್‌ ಬರೋದ್ಯಾಕೆ?

'ಬಹುಶಃ ಈ ವಿಡಿಯೋದಲ್ಲಿ ತಾಯಿಯ ಸ್ಮೈಲ್‌ಅನ್ನು ನೋಟಿಸ್‌ ಮಾಡಿದ್ದು ನಾನೊಬ್ಬಳೆ ಇರಬೇಕು..' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇಲ್ಲಿ ಆ ತಾಯಿಗೆ ಏನೂ ಬೇಕಾಗಿರಲಿಲ್ಲ.  ಆಕೆಗೆ ಇಲ್ಲಿ ಏನೂ ಕೂಡ ಸಿಕ್ಕಿಲ್ಲ. ಆದರೆ, ಆಕೆಯ ಸ್ಮೈಲ್‌ನಲ್ಲಿ ಜಗತ್ತಿನ ಎಲ್ಲವೂ ತನಗೆ ಸಿಕ್ಕಿದೆ ಎನ್ನುವ ಖುಷಿ ಇದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಸೋಶಿಯಲ್‌ ಮೀಡಿಯಾ ಯಾಕಾಗಿ ಇರಬೇಕು ಎಂದು ನನಗೆ ಅರ್ಥವಾಗಿದೆ. ಸಾಮಾಜಿಕ ಸಮಸ್ಯೆಗಳಿಗಾಗಿ ಸೋಶಿಯಲ್‌ ಮೀಡಿಯಾ ಇರೋದು ಅರ್ಥಪೂರ್ಣ ಎಂದಿದ್ದಾರೆ.

Zomato ಸ್ಟಾರ್ಟ್‌ ಮಾಡ್ತೀನಿ ಅಂದಾಗ ನನ್ನ ತಂದೆಯೇ ಅನುಮಾನ ಪಟ್ಟಿದ್ರು ಎಂದ ದೀಪೇಂದರ್‌ ಗೋಯೆಲ್‌!

ಅಣ್ಣಾ ನೀವು ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ. ಈ ಬಿಸಿಲಿನಲ್ಲಿ ಚಪ್ಪಲಿ ಇಲ್ಲದೆ ಮಗು ನಡೆಯುತ್ತಿದೆ. ಮಗುವಿನ ಕಾಲು ಎಷ್ಟು ಸುಡ್ತಾ ಇರ್ಬೇಕು' ಎಂದು ಇನ್ನೊಬ್ಬರು ಕನಿಕರ ವ್ಯಕ್ತಪಡಿಸಿದ್ದಾರೆ. ಇನ್ನು ಕಾಮೆಂಟ್‌ ಮಾಡಿದ ಎಲ್ಲರೂ ಬೈಕರ್‌ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಇಲ್ಲಿಯವರೆಗೂ 80 ಲಕ್ಷ  ಮಂದಿ ಲೈಕ್‌ ಒತ್ತಿದ್ದಾರೆ.

Latest Videos
Follow Us:
Download App:
  • android
  • ios