ಮೋದಿ ಭೇಟಿಗೂ ಮುನ್ನ ಇಟಲಿಯಲ್ಲಿ ಖಲಿಸ್ತಾನಿ ಉಗ್ರ ಸಂಘಟನೆ ಅಟ್ಟಹಾಸ, ಗಾಂಧಿ ಪ್ರತಿಮೆ ಧ್ವಂಸ!
ಇಟಲಿಯಲ್ಲಿ ಸಿಖ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಖಲಿಸ್ತಾನಿ ಉಗ್ರಸಂಘಟನೆಗಳ ಪ್ರತಿಭಟನೆ ತೀವ್ರಗೊಂಡಿದೆ. ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಇಟಲಿ(ಜೂ.12) ಖಲಿಸ್ತಾನಿ ಉಗ್ರ ಸಂಘಟನೆಗಳು ಉಗ್ರ ಸ್ವರೂಪ ತಾಳಿದೆ. ಭಾರತದಲ್ಲಿ ಖಲಿಸ್ತಾನಿ ಸಂಘಟನೆಗಳು ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರೆ, ಕೆನಡಾ ಹಾಗೂ ಇತರ ದೇಶಗಳಲ್ಲಿ ಬಹಿರಂಗವಾಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಇಟಲಿಯಲ್ಲಿ ಖಲಿಸ್ತಾನಿ ಸಂಘಟನೆಗಳು ಬಾಲ ಬಿಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಜಿ2 ಶೃಂಗಸಭೆಗಾಗಿ ಇಟಲಿ ಪ್ರವಾಸಕ್ಕೂ ಕೆಲವೇ ದಿನ ಮುನ್ನ ಖಲಿಸ್ತಾನಿ ಉಗ್ರ ಸಂಘಟನೆಗಳು ಭಾರಿ ಪ್ರತಿಭಟನೆ, ಆಕ್ರೋಶ ಹೊರಹಾಕಿದೆ. ಇಟಲಿಯಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಘಟನೆ ಕುರಿತು ಭಾರತದ ವಿದೇಶಾಂಗ ಇಲಾಖ ತೀವ್ರ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ಖಡಕ್ ತಿರುಗೇಟು ನೀಡಿದೆ.
ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸಗೊಳಿಸದ ಪ್ರಕರಣವನ್ನು ಭಾರತ ವಿದೇಶಾಂಗ ಇಲಾಖೆ ಗಭೀರವಾಗಿ ಪರಿಣಮಿಸಿದೆ. ಘಟನೆಯನ್ನು ಖಂಡಿಸಿರುವ ಭಾರತ, ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸಗೊಳಿಸಿರುವ ಘಟನೆ ಉಭಯ ದೇಶಗಳ ನಡುವಿನ ಭಾಂದವ್ಯವನ್ನೇ ಪ್ರಶ್ನೆ ಮಾಡುವಂತಿದೆ. ಈ ಘಟನೆಗೆ ಕಾರಣವ ಆಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ.
ಮೋದಿ ಸರ್ಕಾರದ ಮೊದಲ 100 ದಿನಗಳ ಕಾರ್ಯ ಯೋಜನೆ ರೆಡಿ!
ಜೂನ್ 14 ರಿಂದ ಇಟಲಿಯಲ್ಲಿ ಜಿ7 ಶೃಂಗಸಭೆ ನಡೆಯಲಿದೆ. 50ನೇ ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಇಟಲಿ ಪ್ರವಾಸ ಮಾಡಲಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿಗೆ ಇದು ಮೊದಲ ವಿದೇಶ ಪ್ರವಾಸವಾಗಿದೆ. ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾಗಿಯಾಗಲು ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಸ್ವೀಕರಿಸಿದ ಮೋದಿ ಅವರು ಇಟಲಿಯ ಅಪುಲಿಯಾದ ಬೊರ್ಗೊ ಎಗ್ನಾಜಿಯಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಜೂ.13 ರಿಂದ ಜೂ. 15ರ ವರೆಗೆ ಇಟಲಿಗೆ ತೆರಳಲಿದ್ದಾರೆ ಆದರೆ ಇದಕ್ಕೂಕೆಲವೇ ದಿನಗಳ ಮೊದಲು ಇಟಲಿಯಲ್ಲಿ ಖಲಿಸ್ತಾನಿ ಉಗ್ರ ಸಂಘಟೆಗಳ ಹಾವಳಿ ಹೆಚ್ಚಾಗಿದೆ.
ಮೋದಿ ಇಟಲಿ ಪ್ರವಾಸದಲ್ಲಿ ಇದೇ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಉಭಯ ದೇಶಗಳ ನಡುವಿನ ಅತ್ಯುತ್ತಮ ಸಂಬಂಧದ ಧ್ಯೋತಕವಾಗಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣ ಮಾಡಲಿದ್ದರೆ. ಆದರೆ ಖಲಿಸ್ತಾನಿ ಸಂಘಟನೆ ಇದೀಗ ಮಹಾತ್ಮಾ ಗಾಂಧಿ ಪ್ರತಿಮೆ ಧ್ವಂಸಗೊಳಿಸಿ ಭಾರತಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಇಟಲಿ ಸ್ಪಷ್ಟಪಡಿಸಿದೆ.
ದ್ವೇಷ ಕಾರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಪಕ್ಕದಲ್ಲೇ ಕೂತು ಮೋದಿ ಔತಣ ಕೂಟ