ನವದೆಹಲಿ(ಡಿ.19): ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವ ಹಾಗೂ ರೈತರಿಗೆ ಹೆಚ್ಚುವರಿ ಆದಾಯ ತಂದುಕೊಡುವ ಉದ್ದೇಶದಿಂದ ಗೋವಿನ ಸಗಣಿಯಿಂದ ತಯಾರಾದ ಬಣ್ಣವೊಂದು ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೆ ‘ವೇದಿಕ್‌ ಪೇಂಟ್‌’ ಎಂದು ಹೆಸರಿಡಲಾಗಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೂಲಕ ‘ವೇದಿಕ್‌ ಪೇಂಟ್‌’ ಅನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುತ್ತದೆ. ಇದು ಡಿಸ್ಟೆಂಪರ್‌ ಹಾಗೂ ಎಮಲ್ಷನ್‌ ರೂಪದಲ್ಲಿ ಬರಲಿದೆ. ಗೋಡೆಗಳಿಗೆ ಬಳಿದ 4 ತಾಸಿನಲ್ಲಿ ಒಣಗುತ್ತದೆ. ಪರಿಸರ ಸ್ನೇಹಿಯಾಗಿದೆ. ವಿಷ, ಬ್ಯಾಕ್ಟಿರಿಯಾ, ಫಂಗಸ್‌ ರಹಿತವಾಗಿದ್ದು, ಈ ಬಣ್ಣ ಹಚ್ಚಲ್ಪಟ್ಟಗೋಡೆಗಳನ್ನು ತಡೆಯಬಹುದಾಗಿದೆ.

ಈ ಬಣ್ಣದಿಂದ ದೇಶದ ರೈತರಿಗೆ 55 ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಲಭಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.