Asianet Suvarna News Asianet Suvarna News

ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ!

2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್‌ ಕಸಬ್| ಉಗ್ರ ಕಸಬ್‌ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್‌ ನಿಧನ| 

Key witness who had identified Ajmal Kasab dies in Mumbai
Author
Bangalore, First Published May 28, 2020, 11:43 AM IST
  • Facebook
  • Twitter
  • Whatsapp

ಥಾಣೆ(ಮೇ.28): 2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್‌ ಕಸಬ್‌ ವಿರುದ್ದ ಸಾಕ್ಷ್ಯ ನುಡಿದಿದ್ದ ಇಲ್ಲಿನ ಶ್ರೀವರ್ಧಾಂಕರ್‌ (70) ಅವರು ನಿಧನರಾಗಿದ್ದಾರೆ.

ಮುಂಬೈ ದಾಳಿ ಪ್ರಕರಣದ ಮೊದಲ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಶ್ರೀವರ್ಧಾಂಕರ್‌, ಅಜ್ಮಲ್‌ ಕಸಬ್‌ನನ್ನು ಗುರುತಿಸಿ ಸಾಕ್ಷ್ಯ ನುಡಿದಿದ್ದರು. ಕಾಮಾ ಆಸ್ಪತ್ರೆ ಬಳಿ ನಡೆದ ದಾಳಿ ವೇಳೆ ಸ್ಥಳದಲ್ಲಿದ್ದ ಅವರು, ಕಸಬ್‌ನ ಸಹಚರ ಅಬೂ ಸಲೇಂಗೆ ತಮ್ಮ ಕೈನಲ್ಲಿದ್ದ ಬ್ಯಾಗ್‌ನಿಂದ ಥಳಿಸಿದ್ದರು. ಅಲ್ಲದೆ ತಾವು ಕೂಡಾ ಗುಂಡಿನ ದಾಳಿಗೆ ತುತ್ತಾಗಿದ್ದರು.

ಪಾತಕಿ ಅಬು ಸಲೇಂ ಪರಾರಿ ಆಗಿದ್ದೇಗೆ? ಕೊನೆಗೂ ರಹಸ್ಯ ಬಯಲು!

ಇತ್ತೀಚೆಗಷ್ಟೇ ಕುಟುಂಬಸ್ಥರಿಂದ ಹೊರದಬ್ಬಲ್ಪಟ್ಟು ಕಲ್ಯಾಣ್‌ನ ರಸ್ತೆ ಬದಿ ಪತ್ತೆಯಾಗಿದ್ದರು. ಬಳಿಕ ಪೊಲೀಸರು ಕುಟುಂಬಸ್ಥರಿಗೆ ಅವರನ್ನು ಒಪ್ಪಿಸಿದ್ದರು.

ಹೇಗಿತ್ತು ಉಗ್ರರ ವಿರುದ್ಧ ಕಾಳಗ: 
ಭಾರತೀಯ ಇಸಿಹಾಸದಲ್ಲಿ ನವೆಂಬರ್ 26 ಅತ್ಯಂತ ಕರಾಳ ದಿನ. ಮುಂಬೈಗೆ ಅದು ಹೇಗೋ ಸಮುದ್ರ ಮಾರ್ಗದಿಂದ ಎಂಟ್ರಿ ಕೊಟ್ಟ ಉಗ್ರರು ಫೈವ್ ಸ್ಟಾರ್ ತಾಜ್ ಹೊಟೇಲ್ ಹಾಗೂ ಇತರೆ ಸ್ಥಳಗಳ ಮೇಲೆ ದಾಳಿ ನಡೆಸಿ, ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದರು. 

10 ಉಗ್ರರ ತಂಡ ಭಾರತದ ವಾಣಿಜ್ಯ ನಗರಿಯ 10 ತಾಣಗಳ ಮೇಲೆ ದಾಳಿ ನಡೆಸಿ, 166 ಮಂದಿಯನ್ನು ಹತ್ಯೆ ಮಾಡಿದ್ದರು. ಅಷ್ಟೇ ಅಲ್ಲದೇ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಪಾಲ್ಗೊಂಡಿದ್ದ 9 ಉಗ್ರರನ್ನು ಮೂರು ದಿನದ ಹೋರಾಟದಲ್ಲಿ ಸದೆ ಬಡಿದು, ಕಸಾಬ್ ಎಂಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.  

ಆದರೆ, ಈ ಕಾಳಗದಲ್ಲಿ ಭಾರತದ ಹೆಮ್ಮೆಯ ಪೊಲೀಸರು ಹಾಗೂ NSG ಕಮಾಂಡೋ ದಾಳಿಯಲ್ಲಿ ಹುತಾತ್ಮರಾಗಿದ್ದರು. ಇಂಥ ಉಗ್ರರ ವಿರುದ್ಧ ದಾಳಿಯಲ್ಲಿ ಸೆರೆ ಸಿಕ್ಕ ಕಸಾಬ್ ವಿರುದ್ಧ ಸಾಕ್ಷಿ ನುಡಿದಿದ್ದರು  ಶ್ರೀವರ್ಧಾಂಕರ್‌.

ನಂತರ ಅಜ್ಮಲ್ ಕಸಾಬ್ ವಿರುದ್ಧ ಸುದೀರ್ಘ ವಿಚಾರಣೆ ನಡೆದು, ಆತನನ್ನು ಗಲ್ಲಿಗೇರಿಸಲಾಯಿತು. 

Follow Us:
Download App:
  • android
  • ios