ತಿರುವನಂತಪುರಂ(ನ.05): ರಾಜ್ಯದಲ್ಲಿ ಯಾವುದೇ ತನಿಖೆಗೆ ಮುನ್ನ ಪೂರ್ವಾನುಮತಿ ಬೇಕಿಲ್ಲ ಎಂದು ಸಿಬಿಐಗೆ ನೀಡಿದ್ದ ವಿನಾಯ್ತಿಯನ್ನು ಕೇರಳ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಬಿಜೆಪಿಯೇತರ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳು ಇಂಥ ನಿರ್ಧಾರ ಕೈಗೊಂಡ ಬೆನ್ನಲ್ಲೇ ಕೇರಳ ಸರ್ಕಾರವೂ ಅದೇ ಹಾದಿ ಹಿಡಿದಿದೆ.

ಹೀಗಾಗಿ ರಾಜ್ಯದಲ್ಲಿ ಸಿಬಿಐ ಯಾವುದೇ ಪ್ರಕರಣವನ್ನು ದಾಖಲಿಸುವುದಕ್ಕೂ ಮುನ್ನ ಸರ್ಕಾರದ ಪೂರ್ವಾನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಕೇರಳ ಸರ್ಕಾರದ ಮಹತ್ವಾಕಾಂಕ್ಷಿ ಕೇರಳ ಸರ್ಕಾರ ಮಹತ್ವಾಕಾಂಕ್ಷಿ ಲೈಫ್‌ ಮಿಷನ್‌ ಗೃಹ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದೇ ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

]ರಾಜ್ಯ ಸರ್ಕಾರದ ಯೋಜನೆಯನ್ನು ತನಿಖೆ ನಡೆಸಿದ ಸಿಬಿಐ ಕ್ರಮದ ವಿರುದ್ಧ ಕೇರಳ ಸರ್ಕಾರ ಹೈಕೋರ್ಟ್‌ ಮೊರೆ ಹೋಗಿದ್ದು, ಕೋರ್ಟ್‌ ಸಿಬಿಐ ತನಿಖೆಗೆ ಎರಡು ತಿಂಗಳ ತಡೆ ನೀಡಿದೆ.