ತಿರುವನಂತಪುರ (ಏ. 14)  ಕೇರಳದ  ಮೆಡಿಕಲ್ ವಿದ್ಯಾರ್ಥಿಗಳಿಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಇದಾದ ಮೇಲೆ ಕಮೆಂಟ್ ಗಳ ಮೂಲಕ ಇದು ಕೋಮು ತಿರುವನ್ನು ಪಡೆದುಕೊಂಡಿತ್ತು.

ನೃತ್ಯ ಮಾಡಿದ್ದ ಯುವಕಮನ ಹೆಸರು ನವೀನ್ ರಜಾಕ್ ಎನ್ನುವುದು ಬಗೆಬಗೆಯ ಕಮೆಂಟ್ ಗಳಿಗೆ ಕಾರಣವಾಗಿತ್ತು. ಆದರೆ ದೇಶದ ಯುವಕರು ಈ ಪ್ರಕರಣವನ್ನು ಚಾಲೆಂಜಾಗಿ ಸ್ವೀಕರಿಸಿ ಅದ್ಭುತ ಪ್ರತಿಕ್ರಿಯೆ ನೀಡಿದ್ದಾರೆ. #ResistHate ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

ತರಗತಿಯ ಬಳಿಕ ಮೆಡಿಕಲ್ ವಿದ್ಯಾರ್ಥಿಗಳ ಸಖತ್ ಸ್ಟೆಪ್ಸ್

ವೈರಲ್ ಆದ ವಿಡಿಯೋದಲ್ಲಿದ್ದ ಯುವತಿ ತಿಶ್ಯೂರ್ ಮೆಡಿಕಲ್ ಕಾಲೇಜಿನ  ಜಾನಕಿ ಓಂಕುಮಾರ್, ನಾವು ಕಮೆಂಟ್ ಗಳಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಮಿಲಿಯನ್ ಗಟ್ಟಲೇ ಜನ ವಿಡಿಯೋ ವೀಕ್ಷಿಸಿ ಬೆಂಬಲ ನೀಡಿದ್ದಾರೆ.  ಕೆಲವರು ನೃತ್ಯ ಮಾಡಿದ್ದು ಆ ವಿಡಿಯೋ ಅಪ್ ಲೋಡ್ ಮಾಡಿ ಬೆಂಬಲ ಕೊಟ್ಟಿದ್ದಾರೆ.  ಕೆಲವು ಕಡೆ ಡ್ಯಾನ್ಸ್ ಕಾಂಪಿಟೇಶನ್ ಸಹ ಆಯೋಜನೆ ಮಾಡಲಾಗಿತ್ತು ಸೋಶಿಯಲ್ ಮೀಡಿಯಾದಲ್ಲಿ ನೃತ್ಯದ ವಿಡಿಯೋಗಳ ಸರಮಾಲೆಯೇ  ಹರಿದು ಬಂದಿದೆ. ನೀವು ಒಮ್ಮೆ ನೋಡಿಕೊಂಡು ಬನ್ನಿ ...