Asianet Suvarna News Asianet Suvarna News

ಭಾರತಕ್ಕೆ ಕಾಲಿಟ್ಟ ಕೊರೋನಾ ವೈರಸ್: ಕೇರಳದಲ್ಲಿ ಮೊದಲ ರೋಗಿ ಪತ್ತೆ!

ಭಾರತಕ್ಕೂ ಲಗ್ಗೆ ಇಟ್ಟ ಕೊರೋನಾ ವೈರಸ್| ಕೇರಳದಲ್ಲಿ ಮೊದಲ ರೋಗಿ ಪತ್ತೆ| ಕೊರೋನಾ ವೈರಸ್ ಅಟ್ಯಾಗ್ ಆದ ಮಾಹಿತಿ ಖಚಿತಪಡಿಸಿದ ವೈದ್ಯಾಧಿಕಾರಿಗಳು

Kerala reports first confirmed coronavirus case in India
Author
Bangalore, First Published Jan 30, 2020, 3:39 PM IST

ಕೊಚ್ಚಿ[ಜ.30]: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದೆ. ವುಹಾನ್ ನಲ್ಲಿ ವ್ಯಾಸಂಗ ನಡೆಸುತ್ತಿದ್ದ, ಸದ್ಯ ತವರುನಾಡು ಕೇರಳಕ್ಕೆ ಮರಳಿರುವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿದೆ.

"

ವೈದ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ. ಈ ವಿದ್ಯಾರ್ಥಿ ಕೇರಳದ ಯಾವ ಪ್ರದೇಶದ ನಿವಾಸಿ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಕೊರೋನಾ ಸಾವು 132ಕ್ಕೇರಿಕೆ, ಚೀನಾದಲ್ಲಿ ಮರಣ ಮೃದಂಗ!

ವುಹಾನ್‌ ನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸುತ್ತಿದ್ದ ಕೇರಳದ ಈ ವಿದ್ಯಾರ್ಥಿ, ಇತ್ತೀಚೆಗಷ್ಟೇ ಮರಳಿ ಊರಿಗೆ ಬಂದಿದ್ದ. ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕೆಯ ಮೇರೆಗೆ ಈತನ ರಸ್ತದ ಸ್ಯಾಂಪಲ್ ತೆಗೆದುಕೊಳ್ಳಲಾಗಿದ್ದು, ಪಾಸಿಟಿವ್ ರಿಸಲ್ಟ್ ಬಂದಿದೆ. ಸದ್ಯ ವೈಕ್ಯಕೀಯ ಚಿಕಿತ್ಸೆಯಲ್ಲಿರುವ ಈ ಯುವಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಇನ್ನು ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೋನಾ ವೈರಸ್‌ ಹುಟ್ಟಿಕೊಂಡಿದ್ದು, ಇಲ್ಲಿನ ಅನೇಕ ಮಂದಿ ಈ ಸೋಂಕಿಗೀಡಾಗಿದ್ದಾರೆ. ಅಲ್ಲದೇ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಈ ನಗರವನ್ನೇ ಬಂದ್ ಮಾಡಲಾಗಿದೆ.

ಹೀಗಿದೆ ಕೊರೋನಾ ಬಿಟ್ಕೊಂಡ ವುಹಾನ್ ನಗರ: ಮೂಲೆ ಮೂಲೆಯೂ ವೈರಸ್ ಆಗರ!

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios